ದೀಪಾವಳಿ ಹಬ್ಬವನ್ನು ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಉತ್ಸಾಹದಲ್ಲಿ ನಮ್ಮ ಆರೋಗ್ಯದ ಬಗೆಯ ಕಾಳಜಿಯನ್ನು ಮರೆಯುವಂತಿಲ್ಲ. ಜೊತೆಗೆ ಪರಿಸರ ಮಾಲಿನ್ಯದ ಬಗ್ಗೆಯೂ ಹೆಚ್ಚು ಗಮನವಹಿಸಬೇಕು. ಹೀಗಿರುವಾಗ ಪಟಾಕಿ ಸಿಡಿಸುವುದು ಜೊತೆಗೆ ಅತಿಯಾದ ಸಿಹಿ ತಿಂಡಿಗಳನ್ನು ಸೇವಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ಮತ್ತು ಆರೋಗ್ಯವನ್ನು ಹಾನಿಗೊಳಿಸಬೇಡಿ. ಈ ಕುರಿತಾಗಿ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ ನೆನಪಿನಲ್ಲಿರಲ್ಲಿ.
ವಾಯು ಮಾಲಿನ್ಯವು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಶ್ವಾಸನಾಳ ಸಂಬಂಧಿ ಕಾಯಿಲೆ, ಆಸ್ತಮಾ, ಆಯಾಸ, ಆತಂಕ, ತಲೆ ನೋವು, ಕಣ್ಣು, ಗಂಟಲು ಮತ್ತು ಮೂಗಿನಲ್ಲಿ ಉಸಿರಾಟ ತೊಂದರೆಗೆ ಕಾರಣವಾಗುತ್ತದೆ. ಜೊತೆಗೆ ನರ ಮತ್ತು ಹೃದಯನಾಳದ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಶ್ವಾಸಕೋಶದ ಆರೋಗ್ಯ ಕೆಲವರಿಗೆ ಹದಗೆಟ್ಟಿರಬಹುದು. ಇಂತಹ ಸಮಯದಲ್ಲಿ ಮಾಲಿನ್ಯವಾದ ಗಾಳಿಯನ್ನು ಉಸಿರಾಟ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿರುತ್ತವೆ.
ಸಂತೋಷದಿಂದ ಸುರಕ್ಷಿತ ಮತ್ತು ಆರೋಗ್ಯಕರ ದೀಪಾವಳಿಯನ್ನು ಆಚರಿಸಲು ಇಲ್ಲಿದೆ ಕೆಲವು ಸರಳ ಸಲಹೆಗಳು
ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಅಗರಬತ್ತಿ, ಮೇಣದ ಬತ್ತಿ ಮತ್ತು ಪಟಾಕಿಯನ್ನು ತಪ್ಪಿಸಿ. ನೀವು ಎಲ್ಇಡಿ ದೀಪಗಳನ್ನು ಬಳಸಬಹುದು. ಇದು ಬೆಳಕಿನ ಕಣಗಳನ್ನು ಹೊರಸೂಸುವುದಿಲ್ಲ.
ನಿಮ್ಮ ಮನೆಯ ಬಾಗಿಲು ಕಿಟಕಿಗಳನ್ನು ತೆರೆದಿಡಿ. ಒಳ್ಳೆಯ ಗಾಳಿ ಮನೆಯೊಳಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಆದರೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮನೆಯ ಬಾಗಿಲು ಕಿಟಕಿಗಳನ್ನು ತೆರೆದಿಡಬೇಡಿ. ಶ್ವಾಸಕೋಶ ತೊಂದರೆ ಇರುವವರಿಗೆ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ.
ಪಟಾಕಿಗಳಿಂದ ಉಳಿದ ಅವಶೇಷಗಳನ್ನು ಮರುದಿನ ಮತ್ತೆ ಸುಡಬೇಡಿ. ಏಕೆಂದರೆ ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ಕಣಗಳು ಕಣ್ಣಿನ ಆರೋಗ್ಯ ಮತ್ತು ಶ್ವಾಸಕೋಶದ ಆರೋಗ್ಯವನ್ನು ಹದಗೆಡಿಸುತ್ತದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಇರುವುದರಿಂದ ಮು ಗವಸು ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದು ಕೇವಲ ಕೊರೊನಾ ವೈರಸ್ ರೋಗ ಹರಡದಂತೆ ಮುನ್ನಚ್ಚರಿಕೆ ವಹಿಸಲು ಮಾತ್ರವಲ್ಲದೇ ಮಾಲಿನ್ಯವಾದ ಗಾಳಿ ನಮ್ಮ ದೇಹಕ್ಕೆ ನೇರವಾಗಿ ಹೋಗದಂತೆ ನೋಡಿಕೊಳ್ಳುತ್ತದೆ.
ಈಗಾಗಲೇ ಶ್ವಾಸಕೋಶದ ತೊಂದರೆ, ಅಲರ್ಜಿಯಿಂದ ಬಳಲುತ್ತಿರುವವರು ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ. ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಹಬ್ಬದ ದಿನ ಆಹಾರ ಸೇವಿಸುವ ಬಗ್ಗೆ ಲಕ್ಷ್ಯವಿರಲಿ.
ನಿಯಮಿತವಾದ ವ್ಯಾಯಾಮ ಅತಿ ಅವಶ್ಯಕ. ನಿಮ್ಮ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ವ್ಯಾಯಾಮ ಸಹಾಯಕವಾಗಿದೆ. ಹಾಗಾಗಿ ವ್ಯಾಯಾಮ ಅಭ್ಯಾಸವನ್ನು ಇಂದಿನಿಂದಲೇ ಪ್ರಾರಂಭಿಸಿ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಿರುವವರಿಗೆ ಮತ್ತು ಶೀತ, ಕೆಮ್ಮಿನ ಸಮಸ್ಯೆ ಇರುವವರು ಪ್ರಾಣಾಯಾಮ ಮಾಡಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ.
ಇದನ್ನೂ ಓದಿ: