Yoga Asanas: ನೀವು ಉತ್ತಮ ನಿದ್ರೆ ಪಡೆಯಲು ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ

| Updated By: shruti hegde

Updated on: Nov 24, 2021 | 7:37 AM

ರಾತ್ರಿ ನೀವು ಉತ್ತಮ ನಿದ್ರೆಯಲ್ಲಿ ಅಡೆತಡೆಗಳನ್ನು ಅನುಭವಿಸುತ್ತಿದ್ದೀರಿ ಎಂದಾದರೆ ಈ ಕೆಲವು ಯೋಗ ಆಸನಗಳನ್ನು ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬಹುದು. ಇವುಗಳು ನೀವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತವೆ. 

Yoga Asanas: ನೀವು ಉತ್ತಮ ನಿದ್ರೆ ಪಡೆಯಲು ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ
ಸಂಗ್ರಹ ಚಿತ್ರ
Follow us on

ಚಳಿಗಾಲದ ಸಮಯದಲ್ಲಿ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆಯೇ? ಇದರಿಂದ ನಿಮ್ಮ ಉತ್ತಮ ನಿದ್ರೆಗೆ ಭಂಗವಾಗುತ್ತಿದೆಯೇ? ಈ ರೀತಿಯ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನೀವು ಈ ಕೆಲವು ಯೋಗ ಆಸನಗಳ ಅಭ್ಯಾಸವನ್ನು ಮಾಡಿಕೊಳ್ಳಿ. ನೀವು ಉತ್ತಮ ನಿದ್ರೆ ಪಡೆಯಲು ಈ ಕೆಲವು ಯೋಗ ಆಸನಗಳು ಸಹಾಯಕವಾಗಿವೆ. ಆರೋಗ್ಯಕರ ದೇಹ ಮತ್ತು ಉತ್ತಮ ನಿದ್ರೆ ಪಡೆಯಲು ಇಲ್ಲಿವೆ ಕೆಲವು ಸಲಹೆಗಳು. ಆಯುರ್ವೇದ ತಜ್ಞರಾದ ಡಾ. ನಿತಿಕಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿದ್ದಾರೆ. ಸೌಮ್ಯವಾದ ದೈಹಿಕ ಚಲನೆಯಿಂದ ದೇಹ ವಿಶ್ರಾಂತಿ ಪಡೆಯುತ್ತದೆ. ಈ ಕೆಲವು ಯೋಗಾಸನಗಳು ನಿದ್ರೆಯಲ್ಲಿ ಉತ್ತೇಜಿಸುತ್ತದೆ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್​ ಮಾಡಿದ್ದಾರೆ.

ದೇಹದ ಸದೃಢತೆಗೆ ಮತ್ತು ಉತ್ತಮ ಆರೋಗ್ಯ ಪಡೆಯಲು ನೀವು ವ್ಯಾಯಾಮ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಿ. ಪ್ರತಿನಿತ್ಯ ಯೋಗ ಆಸನಗಳನ್ನು ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಹಂತ ಹಂತವಾಗಿ ದೂರವಾಗುತ್ತವೆ. ಜೊತೆಗೆ ನೀವು ದಿನಪೂರ್ತಿ ಚಟುವಟಿಕೆಯಿಂದ ಕೂಡಿರಲು ಯೋಗ ಆಸನಗಳು ಸಹಾಯ ಮಾಡುತ್ತವೆ. ರಾತ್ರಿ ನೀವು ಉತ್ತಮ ನಿದ್ರೆಯಲ್ಲಿ ಅಡೆತಡೆಗಳನ್ನು ಅನುಭವಿಸುತ್ತಿದ್ದೀರಿ ಎಂದಾದರೆ ಈ ಕೆಲವು ಯೋಗ ಆಸನಗಳನ್ನು ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬಹುದು. ಇವುಗಳು ನೀವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತವೆ.

ಬಾಲಾಸನ: ಈ ಯೋಗ ಭಂಗಿಯು ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಮತ್ತು ಮನಸ್ಸು ಶಾಂತಿ ಪಡೆಯಲು ಸಹಾಯ ಮಾಡುತ್ತದೆ.

ಶಲಭಾಸನ: ಇದು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ.

ಜಾನು ಶೀರ್ಷಾಸನ : ನಿಮ್ಮ ದೈನಂದಿನ ಯೋಗ ದಿನಚರಿಯಲ್ಲಿ ಈ ಯೋಗಾಸನವನ್ನು ಅಭ್ಯಾಸ ಮಾಡುವುದಿಂದ ಒಳ್ಳೆಯ ನಿದ್ರೆ ಪಡೆಯಬಹುದು.

ಉತ್ತಾನಾಸನ: ಈ ಆಸನವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ನಿಯಮಿತವಾಗಿ ಈ ಆಸನವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಶವಾಸನ: ಈ ಯೋಗ ಆಸನ ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ. ಸ್ನಾಯುಗಳು ಮತ್ತು ಭುಜ ವಿಶ್ರಾಂತಿ ಪಡೆಯಲು ಸಹಾಯಕವಾಗುವ ಯೋಗ ಭಂಗಿಯಾಗಿದೆ.

ಇದನ್ನೂ ಓದಿ:

Health Tips: ಸೈನಸ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಯೋಗ ಭಂಗಿಗಳು ಮುಖ್ಯ

Winter fitness: ಯೋಗದಲ್ಲಿನ ಈ ಆಸನಗಳು ಚಳಿಗಾಲದಲ್ಲಿ ದೇಹವನ್ನು ಫಿಟ್ ಆಗಿ, ಬೆಚ್ಚಗಿಡಲು ಸಹಾಯ ಮಾಡುತ್ತವೆ