Winter fitness: ಯೋಗದಲ್ಲಿನ ಈ ಆಸನಗಳು ಚಳಿಗಾಲದಲ್ಲಿ ದೇಹವನ್ನು ಫಿಟ್ ಆಗಿ, ಬೆಚ್ಚಗಿಡಲು ಸಹಾಯ ಮಾಡುತ್ತವೆ

Yoga Poses: ಚಳಿಗಾಲದಲ್ಲಿ ಯೋಗದಿಂದ ದೇಹವನ್ನು ಬೆಚ್ಚಗಿಡಬಹುದು. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗುವ ಯೋಗ ಆಸನಗಳ ಪಟ್ಟಿಯನ್ನು ಇಲ್ಲಿ ಚಿತ್ರ ಸಮೇತ ನೀಡಲಾಗಿದೆ.

Winter fitness: ಯೋಗದಲ್ಲಿನ ಈ ಆಸನಗಳು ಚಳಿಗಾಲದಲ್ಲಿ ದೇಹವನ್ನು ಫಿಟ್ ಆಗಿ, ಬೆಚ್ಚಗಿಡಲು ಸಹಾಯ ಮಾಡುತ್ತವೆ
ಯೋಗಾಸನ
Follow us
TV9 Web
| Updated By: shruti hegde

Updated on: Nov 21, 2021 | 8:02 AM

ಚಳಿಗಾಲದಲ್ಲಿ ದೇಹವು ಜಡಗಟ್ಟಿದಂತಾಗಿರುತ್ತದೆ. ಹಲವರು ಆಹಾರದ ಮೂಲಕ ದೇಹವನ್ನು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಆದರೆ ಬದಲಾದ ಜೀವನ ಶೈಲಿಯಲ್ಲಿ ಜನರು ಡಯಟ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ದರಿಂದ ಆಹಾರವಲ್ಲದೇ ಹೇಗೆ ದೇಹವನ್ನು ಬೆಚ್ಚಗಿರಿಸಬಹುದು? ಜೊತೆಗೆ ಫಿಟ್​ನೆಸ್​ ಕೂಡ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಯೋಗ ಇವುಗಳಿಗೆ ಉತ್ತಮ ಮಾರ್ಗವಾಗಿದೆ. ಮನೆಯಲ್ಲೇ ಮಾಡಬಹುದಾದ ಹಾಗೂ ದೇಹವನ್ನು ಫಿಟ್ ಆಗಿರಿಸುವ ಕೆಲವು ಆಸನಗಳು ಇಲ್ಲಿವೆ. 

ವಸಿಷ್ಠಾಸನ:

  •  ಯೋಗ ಮ್ಯಾಟ್ ಮೇಲೆ ನಿಮ್ಮ ಕೈಯನ್ನು ಊರಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ನೇರವಾಗಿ ಚಾಚಿ.
  • ಕೈಯ ಬಲವನ್ನು ಬಳಸಿಕೊಂಡು ನಿಮ್ಮ ದೇಹವನ್ನು ಮೇಲಕ್ಕೆತ್ತಿ.  ದೇಹವು ನೆಲಕ್ಕೆ 45 ಡಿಗ್ರಿ ಕೋನದಲ್ಲಿರಬೇಕು.
  • ಇನ್ನೊಂದು ಕೈಯನ್ನು ನೇರವಾಗಿ ಗಾಳಿಯಲ್ಲಿ ಚಾಚಿ.
  • ನೆಲದ ಸಂಪರ್ಕದಲ್ಲಿರುವ ಕಾಲಿನ ಮೇಲೆ ಇನ್ನೊಂದು ಕಾಲನ್ನಿಟ್ಟು ವಿಶ್ರಾಂತಿ ಮಾಡಿ, ಇದನ್ನು ವಸಿಷ್ಠಾಸನ ಎಂದು ಕರೆಯಲಾಗುತ್ತದೆ.

Yoga Vasistasana

ನವಾಸನ:

  • ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ
  • ಕಾಲುಗಳನ್ನು ಸ್ಟ್ರೆಚ್ ಮಾಡುತ್ತಾ ಮೇಲಕ್ಕೆತ್ತಿ.
  • ನೆಲದಿಂದ 45 ಡಿಗ್ರಿ ಕೋನದಲ್ಲಿ ನಿಮ್ಮ ಕಾಲುಗಳಿವೆಯೇ ಎಂದು ಗಮನಿಸಿ.
  • ಸೊಂಟವನ್ನು ಆಧಾರವಾಗಿರಿಸುತ್ತಾ ದೇಹವನ್ನು ಮೇಲಕ್ಕೆತ್ತಿ.
  • ಕೈಗಳನ್ನು ವಿಸ್ತರಿಸಿ.
  • ಇಂಗ್ಲೀಷ್​ನ ‘ಎ’(A) ಯ ತಿರುವು ಮುರುವಾಗಿ ನಿಮ್ಮ ದೇಹ ಇರುವಂತೆ ಕಾಣಿಸುತ್ತದೆ. ಇದಕ್ಕೆ ನವಾಸನ ಎನ್ನುತ್ತಾರೆ.

Yoga Navasana

ಶೀರ್ಷಾಸನ:

  • ಈ ಆಸನಕ್ಕೆ ನೀವು ಗೋಡೆಯನ್ನೂ ಆಧಾರವಾಗಿ ಬಳಸಬಹುದು.
  • ನಿಮ್ಮ ಮೊಣಕೈಗಳನ್ನು ನೆಲದ ಮೇಲೆ ಇರಿಸಿ ಮತ್ತು ಅವುಗಳ ನಡುವೆ ನಿಮ್ಮ ತಲೆಯನ್ನು ಇರಿಸಿ.
  • ದೇಹವನ್ನು ಬ್ಯಾಲೆನ್ಸ್ ಮಾಡಿ.
  • ದೇಹವನ್ನು ತಲೆಕೆಳಗಾಗಿಸಿದ ನಂತರ, ಅದೇ ಭಂಗಿಯಲ್ಲಿ ವಿಶ್ರಾಂತಿ ಪಡೆಯಿರಿ.
  • ಕನಿಷ್ಠ ಐದು ನಿಮಿಷಗಳ ಕಾಲ ಅದೇ ಸ್ಥಾನದಲ್ಲಿದಿರಿ, ಇದನ್ನು ಶೀರ್ಷಾಸನ ಎನ್ನುತ್ತಾರೆ.

Yoga Sirshasana

ಸೇತುಬಂಧಾಸನ:

  • ಯೋಗ ಮ್ಯಾಟ್ ಮೇಲೆ ಮಲಗಿ.
  • ನಿಮ್ಮ ದೇಹಕ್ಕೆ ಹೊಂದಿಕೊಂಡಂತೆ ಕೈಗಳನ್ನು ನೇರವಾಗಿರಿಸಿಕೊಳ್ಳಿ.
  • ನಿಮ್ಮ ಕಾಲುಗಳ ಪಾದಗಳು ಮ್ಯಾಟ್​ಗೆ ಹೊಂದಿಕೊಂಡಂತೆ ಊರಿ.
  • ನಂತರ ನಿಧಾನವಾಗಿ ಸೊಂಟವನ್ನು ಮೇಲಕ್ಕೆತ್ತಿ.
  • ದೇಹವು ಸೇತುವೆಯ ಆಕಾರವನ್ನು ತಾಳುತ್ತದೆ. ಇದಕ್ಕೆ ಸೇತುಬಂಧಾಸನ ಎನ್ನುತ್ತಾರೆ.

Yoga Sethubandhasana

ಶವಾಸನ:

  • ಯೋಗ ಮ್ಯಾಟ್ ಮೇಲೆ ಮಲಗಿ.
  • ವಿಶ್ರಾಂತಿ ಪಡೆಯಿರಿ. ನಂತರ ತಲೆಯಿಂದ ದೇಹದ ಒಂದೊಂದೇ ಅಂಗವನ್ನು ಮನದಲ್ಲೇ ಗಮನಿಸುತ್ತಾ ಸಾಗಿ.
  • ದೇಹದಿಂದ ಒತ್ತಡಗಳು ನಿಧಾನವಾಗಿ ನಿವಾರಣೆಯಾಗುವುದು ನಿಮ್ಮ ಗಮನಕ್ಕೆ ಬರುತ್ತದೆ.
  • 10ರಿಂದ 15 ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿರಿ. ಇದನ್ನು ಶವಾಸನ ಎನ್ನುತ್ತಾರೆ.

Yoga Shavasana

ಇದನ್ನೂ ಓದಿ:

Hair Care Tips: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವೊಂದಿಷ್ಟು ಟಿಪ್ಸ್​

International Men’s Day 2021: ಪುರುಷರು ಉತ್ತಮ ಆರೋಗ್ಯ ಹೊಂದಲು, ರೋಗಗಳ ಅಪಾಯವನ್ನು ತಡೆಗಟ್ಟಲು ಇಲ್ಲಿವೆ ಮಾರ್ಗಸೂಚಿಗಳು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!