ಮದುವೆಯಾಗುವ ಮೊದಲು ಪ್ರತಿಯೊಬ್ಬ ಹೆಣ್ಮಕ್ಕಳು ಮಾಡಬೇಕಾದ ಕೆಲಸಗಳು
ಮದುವೆ ಹೆಣ್ಮಕ್ಕಳಿಗೆ ಭಾವನಾತ್ಮಕ ಕ್ಷಣವಾಗುವುದು ಖಂಡಿತ, ಅಂದು ಅವಳ ಕಷ್ಟ ಸುಖ ಮತ್ತು ಇನ್ನೊಂದು ಮನೆಯನ್ನು ಸೇರುವ ಪರ್ವ ಕಾಲವು ಹೌದು, ಈ ಕ್ಷಣಕ್ಕಾಗಿ ಕಾಯುವ ಅದೆಷ್ಟು ಹೆಣ್ಮಕ್ಕಳಿಗೆ ಮದುವೆಯ ಮೊದಲು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು.
ಮದುವೆ ಎಂದರೆ ಅದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಅದ್ಭುತ ಕ್ಷಣವಾಗಿರುತ್ತದೆ, ಅದರಲ್ಲೂ ಹೆಣ್ಮಕ್ಕಳಿಗೆ ಭಾವನಾತ್ಮಕ ಕ್ಷಣವಾಗುವುದು ಖಂಡಿತ, ಮದುವೆ ಎನ್ನುವುದು ಅವಳ ಕಷ್ಟ ಸುಖ ಮತ್ತು ಇನ್ನೊಂದು ಮನೆಯನ್ನು ಸೇರುವ ಪರ್ವ ಕಾಲವು ಹೌದು, ಈ ಕ್ಷಣಕ್ಕಾಗಿ ಕಾಯುವ ಅದೆಷ್ಟು ಹೆಣ್ಮಕ್ಕಳಿಗೆ ಮದುವೆಯ ಮೊದಲು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ನಿಮ್ಮ ಜೀವನದಲ್ಲಿ ಇದೊಂದು ಪ್ರಮುಖ ಘಟವು ಹೌದು. ಅನೇಕ ಮದುವೆಯು ಎಲ್ಲವನ್ನೂ ಬದಲಾಯಿಸುತ್ತದೆ, ತಜ್ಞರು ಹೇಳುವಂತೆ ಮದುವೆ ಎನ್ನುವುದು ಒಂದು ಕಾರ್ಯಕ್ರಮವಲ್ಲ, ಅದು ಜೀವನದ ಮೌಲ್ಯಯುತವಾದ ಬಂಧುತ್ವ ಎಂದು ಹೇಳುತ್ತಾರೆ.
ಸ್ನೇಹಿತ ಜೊತೆಗೆ ಎಲ್ಲವನ್ನು ಹಂಚಿಕೊಳ್ಳಿ
ಜೀವನದಲ್ಲಿ ಎಲ್ಲವನ್ನು ಹಂಚಿಕೊಳ್ಳುವ ಒಬ್ಬ ಸಂಗಾತಿ ಬೇಕು ಹೌದು ಆದರೆ ಅದಕ್ಕಿಂತ ಮೊದಲು ಆ ಸಂಗಾತಿಯ ಜೊತೆಗೆ ಯಾವೆಲ್ಲ ವಿಚಾರಗಳನ್ನು ಹಂಚಿಕೊಳ್ಳಬೇಕು, ಹೇಗೆ? ಇರಬೇಕು ಎಂಬುದು ಮದುವೆಯ ಮುನ್ನ ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಕೆಲಸ ಮಾಡುವ ಕಡೆ ಅಥವಾ ಹಾಸ್ಟೆಲ್ ಸ್ನೇಹಿತೆಯರ ಜೊತೆಗೆ ಈ ಬಗ್ಗೆ ಮಾತನಾಡಬೇಕು ಮತ್ತು ಹೊಂದಾಣಿಕೆಯನ್ನು ಕಲಿತ್ತುಕೊಳ್ಳಬೇಕು, ಪ್ರತಿಯೊಂದು ವಿಚಾರದಲ್ಲೂ ಸಹಾಯ ಮಾಡುವ ಅಭ್ಯಾಸಗಳನ್ನು ಮಾಡಿಕೊಳ್ಳಲಿ.
ಆರ್ಥಿಕವಾಗಿ ಸ್ವತಂತ್ರರಾಗಿರಿ
ಮದುವೆಯ ಮೊದಲು ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರವೆಂದರೆ ನೀವು ಮೊದಲು ನಿಮ್ಮ ಸ್ವಂತ ಖರ್ಚಿನಲ್ಲಿ ಬದುಕಲು ಕಲಿಯಿರಿ, ಮದುವೆಯ ನಂತರ ಈ ಅಭ್ಯಾಸವನ್ನು ಮಾಡಿಕೊಳ್ಳಿ ಏಕೆಂದರೆ ನಿಮ್ಮ ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ನೀವು ಇತರರನ್ನು ಅವಲಂಬಿಸಿರಬಾರದು, ಅದಕ್ಕಾಗಿ ನಿಮ್ಮ ದುಡಿಮೆಯನ್ನು ಮಾಡಿಕೊಂಡಿರಬೇಕು. ಆರ್ಥಿಕವಾಗಿ ನಿಮ್ಮವರಿಗೂ ಸಹಾಯವಾಗಿರಬೇಕು.
ಸಂಬಂಧದಲ್ಲಿ ಯಾವುದೇ ಒತ್ತಡ ಇರಬಾರದು
ನಿಮ್ಮವರ ಜೊತೆಗೆ ಯಾವುದೇ ಸಂಘರ್ಷವನ್ನು ಮಾಡಬೇಡಿಕೊಳ್ಳವಬಾರದು, ಎಲ್ಲವನ್ನು ತಾಳ್ಮೆಯಿಂದ ಸ್ವೀಕರ ಮಾಡಿ. ಏಕೆಂದರೆ ನಿಮ್ಮ ಸಂಬಂಧಗಳು ಇನ್ನು ಗಟ್ಟಿಯಾಗಿರುತ್ತದೆ, ಅದಕ್ಕಾಗಿ ಜೀವನದಲ್ಲಿ ಎಲ್ಲವನ್ನು ನಿರ್ಧಾರವನ್ನು ತಾಳ್ಮೆಯಿಂದ ತೆಗೆದುಕೊಳ್ಳಿ, ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳವ ಅಭ್ಯಾಸವನ್ನು ಇಂದಿನಿಂದಲ್ಲೇ ಮಾಡಿಕೊಳ್ಳಿ.
ಪ್ರವಾಸ ಹೋಗುವ ಅಭ್ಯಾಸ
ಮದುವೆಗೂ ಮುನ್ನ ನೀವು ಕೆಲವೊಂದು ಕಡೆ ಪ್ರವಾಸ ಹೋಗುವ ಅಭ್ಯಾಸ ಮಾಡಿ ಅದು ನಿಮ್ಮ ಸ್ನೇಹಿತೆ ಜೊತೆಗೆ ಏಕೆಂದರೆ ಈ ಅಭ್ಯಾಸ ನಿಮ್ಮ ಮದುವೆಯ ನಂತರ ನಿಮಗೆ ಸಹಾಯವಾಗಬಹುದು, ಎಲ್ಲವನ್ನು ಹಂಚಿಕೊಳ್ಳುವ ಪ್ರವೃತ್ತಿ ನಿಮ್ಮಲ್ಲಿ ಇರಲಿ, ಜೊತೆಗೆ ಈ ರೀತಿ ಪ್ರವಾಸ ಹೋಗುವಾಗ ಮದುವೆಯ ನಂತರ ನಿಮ್ಮವರ ಜೊತೆಗೆ ಹೇಗೆ ನಡೆದುಕೊಲ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೆಲವೊಂದು ಹವ್ಯಾಸ ಇರಬೇಕು
ನಿಮಗೆ ಕೆಲವೊಂದು ಹವ್ಯಾಸ ಇರಲಿ, ಬುಕ್ ಓದುವುದು, ಯೋಗ ಮಾಡುವುದು, ಆಟವಾಡುವುದು, ಅಡುಗೆ ಮಾಡುವುದು, ಬರೆಯುವುದು, ಒಳ್ಳೆಯ ಚರ್ಚೆಗಳನ್ನು ಮಾಡುವ ಅಭ್ಯಾಸಗಳು ಇರಲಿ, ಇದು ನಿಮ್ಮನ್ನು ಇನ್ನಷ್ಟು ಬೆಳೆಯುವಂತೆ ಮಾಡುತ್ತದೆ.
Published On - 3:54 pm, Thu, 28 July 22