Relationships: ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2023 | 5:22 PM

ಸಂಗಾತಿಗಳಿಬ್ಬರು ಅಗತ್ಯತೆಗಳ ಬಗ್ಗೆ ಮಾತನಾಡುವುದರಿಂದ ಹಿಡಿದು ಸಂಬಂಧಗಳಲ್ಲಿನ ಎಲ್ಲ ವಿಷಯ ಸಾಮಾನ್ಯೀಕರಿಸಬೇಕಾದ ಕೆಲವು ವಿಷಯಗಳು ಬಗ್ಗೆ ತಿಳಿಸಲಾಗಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.

Relationships: ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನಮ್ಮಲ್ಲಿ ಅನೇಕರು ಸಂಬಂಧಗಳ ಬಗ್ಗೆ ಕೆಲವು ನಂಬಿಕೆಗಳನ್ನಿಟ್ಟುಕೊಂಡು ಬದುಕುತ್ತಾರೆ. ಬಾಲ್ಯದಿಂದಲೂ ನಮ್ಮಲ್ಲಿ ಬೇರೂರಿರುವ ಆ ನಂಬಿಕೆಗಳು, ಬೆಳೆದಂತೆ ನಾವು ನೋಡಿದ ಸಂಬಂಧಗಳಿಂದ ರೂಪುಗೊಂಡ ಈ ದೃಷ್ಟಿಕೋನಗಳು ಸಂಬಂಧವನ್ನು ಸುಧಾರಿಸಲು ಮತ್ತು ಅದರ ಜೀವಿತಾವಧಿಯನ್ನು ವಿಸ್ತರಿಸಲು ನಮ್ಮನ್ನು ಮತ್ತಷ್ಟು ತಡೆಯುತ್ತವೆ. ವಿಷಯವೆಂದರೆ, ನಮ್ಮ ಸಂಬಂಧಗಳಲ್ಲಿ ಎಲ್ಲವೂ ಯಾವಾಗಲೂ ಪರಿಪೂರ್ಣವಾಗಿ ನಡೆಯುವುದಿಲ್ಲ,ಅಲ್ಲದೆ ಸಂಬಂಧಗಳಲ್ಲಿನ ಎಲ್ಲವೂ ದೋಷರಹಿತವಾಗಿ ನಡೆಯುವುದಿಲ್ಲ, ಅಥವಾ ಆ ಸಂಬಂಧವು ಇನ್ನೂ ಆರೋಗ್ಯಕರ ಮತ್ತು ಅನುಸರಿಸಲು ಯೋಗ್ಯವಾಗಿರಬೇಕು ಹಾಗಾಗಿ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಅಥವಾ ಸಾಮಾನ್ಯೀಕರಿಸಲು ಪ್ರಯತ್ನಿಸೋಣ.

ಸಾಮಾನ್ಯವಾಗಿ ನಾವೆಲ್ಲರೂ ಕೆಲವು ದುರುದ್ದೇಶಪೂರಿತ ನಡವಳಿಕೆಗಳು ಮತ್ತು ನಿಷ್ಕ್ರಿಯ ಪ್ರತಿಕ್ರಿಯೆಗಳನ್ನು ಹೊಂದಿರುತ್ತೇವೆ. ಇದು ಎಲ್ಲರಿಗೂ ಅನ್ವಯಿಸುತ್ತದೆ. ಆದರೆ ಯಾವುದೇ ಸಂಬಂಧದ ಸೌಂದರ್ಯವೆಂದರೆ, ನಮ್ಮ ಸಂಗಾತಿಯಿಂದ ಏನನ್ನು ಸ್ವೀಕರಿಸಲು ಸಿದ್ಧರಿದ್ದೇವೆ, ಅಥವಾ ಯಾವುದಕ್ಕೆ ನಮ್ಮ ಸಮ್ಮತವಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಮುಂದಿನ ದಿನಗಳಲ್ಲಿ ಸರಿಯಾಗಿ ಹೊಂದಿಕೊಳ್ಳದಿದ್ದಾಗ ನಾವು ಯಾವ ರೀತಿಯ ಆಯ್ಕೆ ಮಾಡುತ್ತೇವೆ ಎಂಬುದು ನಮ್ಮ ಸಂಬಂಧಕ್ಕೆ ಮುಖ್ಯವಾಗಿರುತ್ತದೆ.

ಇದನ್ನೂ ಓದಿ;Relationships: ಸಂಬಂಧದ ಕುರಿತು ನಿಮ್ಮಲ್ಲಿ ತಪ್ಪು ಕಲ್ಪನೆ ಹುಟ್ಟಿಕೊಳ್ಳಲು ಕಾರಣ ಏನು? ಇಲ್ಲಿದೆ ನೋಡಿ

ಸಂಬಂಧಗಳಲ್ಲಿ ಸಹಜ ಸ್ಥಿತಿಗೆ ತರುವ ವಿಷಯಗಳ ಬಗೆಗಿನ ಮಾಹಿತಿ ಇಲ್ಲಿದೆ:

-ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಒಳ್ಳೆಯ ಸಂವಹನ ನಡೆಸುವುದು ಮುಖ್ಯವಾಗಿದೆ. ಎಬ್ಬರೂ ತಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವುದು ಬಹಳ ಮುಖ್ಯ.

-ಸಂಬಂಧಗಳಲ್ಲಿ ಆರೋಗ್ಯಕರ ಮಿತಿಗಳನ್ನು ಹಾಕಿಕೊಳ್ಳುವುದು ಮುಖ್ಯ. ಪರಸ್ಪರರ ಸಮಯ ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗೌರವಿಸುವುದು ಇದರಲ್ಲಿ ಸೇರಿದೆ.

-ಪರಸ್ಪರರ ಭಾವನೆಗಳು ಮತ್ತು ಅನುಭವಗಳನ್ನು ಒಪ್ಪಿಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಇದು ನಂಬಿಕೆ ಬೆಳೆಸಲು ಮತ್ತು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ಅಚ್ಚುಕಟ್ಟಾಗಿ ಅನುಭೂತಿ ಎನ್ನಬಹುದು.

– ಸಂಗಾತಿ ಮಾಡುವ ಕೆಲಸದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಪ್ರತಿಕ್ರಿಯೆಗೆ ಮುಕ್ತವಾಗಿರುವುದು. ಇದು ಒಬ್ಬರನ್ನೊಬ್ಬರು ದೂಷಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಸಂಬಂಧದಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಸುಧಾರಣೆಗೆ ಅನುವು ಮಾಡಿಕೊಡುತ್ತದೆ.

-ಸಂಬಂಧಗಳಲ್ಲಿ ಏನಾದರೂ ಸರಿಯಾಗಿಲ್ಲ ಎಂದು ನಿಮಗೆ ಅನಿಸಿದಲ್ಲಿ, ಆಗ ಮನಸ್ಸಿನ ಮಾತು ಕೇಳಿ ನಿಮ್ಮ ಆಲೋಚನೆಯನ್ನು ಬದಲಾಯಿಸಬೇಕು.

– ನಿಮಗೆ ಸಂಬಂಧದ ಬಗ್ಗೆ ಅಥವಾ ನಿಮ್ಮ ಸಂಗಾತಿ ಎಲ್ಲಿಗೆ ಹೋಗಿ ಬರುತ್ತಿದ್ದಾರೆ ಎಂಬುದರ ಬಗ್ಗೆ ಅನುಮಾನಗಳು ಇದ್ದಲ್ಲಿ ಭಯ ಬಿಟ್ಟು ಸಂಗಾತಿಯೊಂದಿಗೆ ಕುಳಿತು ಅದನ್ನು ಪರಿಹರಿಸುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಸಂಗಾತಿ ಆ ಸಮಸ್ಯೆಯಿಂದ ಮೌನವಾಗಿ ನರಳುತ್ತಲೇ ಇರಬಹುದು.

– ನಾವು ಮಾಡಿದ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ಮೊದಲು ಕಲಿಯಬೇಕು. ಇದು ನಮ್ಮನ್ನು ನಂಬಿ ಬಂದವರಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ.

-ಪರಸ್ಪರ ಗೌರವದಿಂದ ನೋಡಿಕೊಳ್ಳುವುದು ಸಂಬಂಧಕ್ಕೆ ಮುಖ್ಯ ಅಡಿಪಾಯವಾಗಿದೆ. ಇದು ಅಧಿಕಾರ ಅಸಮತೋಲನವನ್ನು ತಪ್ಪಿಸುವುದರ ಜೊತೆಗೆ ಸಂಬಂಧದಲ್ಲಿ ಎಬ್ಬರೂ ಸಮಾನ ಅಭಿಪ್ರಾಯವನ್ನು ಹೊಂದುವುದಕ್ಕೆ ದಾರಿ ಮಾಡಿಕೊಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ