Relationships: ಸಂಬಂಧದ ಕುರಿತು ನಿಮ್ಮಲ್ಲಿ ತಪ್ಪು ಕಲ್ಪನೆ ಹುಟ್ಟಿಕೊಳ್ಳಲು ಕಾರಣ ಏನು? ಇಲ್ಲಿದೆ ನೋಡಿ

ಆರೋಗ್ಯಕರ ಸಂಬಂಧಕ್ಕೆ ಯಾವುದೇ ಪ್ರಯತ್ನದ ಅಗತ್ಯವಿರುವುದಿಲ್ಲ ಎಂದು ನಾವೆಲ್ಲರೂ ಭಾವಿಸುತ್ತೇವೆ, ಸಂವಹನದ ಅಗತ್ಯವಿಲ್ಲ, ಜೊತೆಯಾಗಿ ಇರಬೇಕಾಗಿಲ್ಲ, ಎಂಬ ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿರುತ್ತೇವೆ. ಆದರೆ ಇವೆಲ್ಲವು ತಪ್ಪು ಕಲ್ಪನೆಗಳು.

Relationships: ಸಂಬಂಧದ ಕುರಿತು ನಿಮ್ಮಲ್ಲಿ ತಪ್ಪು ಕಲ್ಪನೆ ಹುಟ್ಟಿಕೊಳ್ಳಲು ಕಾರಣ ಏನು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2023 | 6:00 PM

ಸಂಬಂಧಗಳ ಬಗ್ಗೆ ನಾವು ನಂಬಿರುವ ಕೆಲವೊಂದು ಕಲ್ಪನೆಗಳು ಸಂಬಂಧವನ್ನು ವಿನಾಶಕ್ಕೆ ಕೊಂಡೊಯ್ಯಬಹುದು. ಸಂಬಂಧದಲ್ಲಿ ಸಂವಹನದ ಅಗತ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಇನ್ನೂ ಕೆಲವರು ಸಂಗಾತಿಗೆ ವೈಯಕ್ತಿಕ ಸಮಯವನ್ನು ನೀಡುವುದಿಲ್ಲ. ಇವೆಲ್ಲವು ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ಉಸಿರುಗಟ್ಟಿಸಿದಂತೆ ಮಾಡುತ್ತದೆ. ವಾಸ್ತವದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ವೈಯಕ್ತಿಕ ಸ್ವಾತಂತ್ರ್ಯಯಗಳಿಗೆ ಅವಕಾಶ ನೀಡಿದಾಗ ಸಂಬಂಧವು ಗಟ್ಟಿಯಾಗಿರುತ್ತದೆ. ಥೆರಪಿಸ್ಟ್ ಸಾರಾ ಕುಬುರಿಕ್ ಅವರು ಸಂಬಂಧದ ಬಗ್ಗೆ ಇಟ್ಟಿರುವು ಕೆಲವೊಂದು ತಪ್ಪು ನಂಬಿಕೆಗಳ ಬಗ್ಗೆ ಹೇಳಿದ್ದಾರೆ. ಇವುಗಳು ಸಂಬಂದಕ್ಕೆ ಹಾನಿಕಾರಕವಾಗಬಹುದು. ಆರೋಗ್ಯಕರ ಸಂಬಂಧಕ್ಕೆ ಯಾವುದೇ ಪ್ರಯತ್ನಗಳ ಅಗತ್ಯವಿರುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಇದು ತಪ್ಪು ಕಲ್ಪನೆ. ಒಂದು ಆರೋಗ್ಯಕರ ಸಂಬಂಧವನ್ನು ಹೊಂದಲು ನಮ್ಮ ಪ್ರಯತ್ನಗಳು ತುಂಬಾ ಅಗತ್ಯವಾಗಿರುತ್ತದೆ.

ಸಂವಹನದ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ: ಆದರೆ ಒಂದು ಆರೋಗ್ಯಕರ ಸಂಬಂಧಕ್ಕೆ ಸಂವಹನವು ತುಂಬಾ ಮುಖ್ಯವಾಗಿರುತ್ತದೆ. ಸ್ಪಷ್ಟ ಸಂಬಂಧವು ಆರೋಗ್ಯಕರ ಸಂಬಂಧದ ಅಡಿಪಾಯವಾಗಿರುತ್ತದೆ. ಆದ್ದರಿಂದ ಸಂಬಂಧದಲ್ಲಿ ಸಂವಹನದ ಕೊರತೆ ಇರಬಾರದು.

ಇದನ್ನೂ ಓದಿ:Relationships: ನಂಬಿಕೆ ದ್ರೋಹದ ಬಳಿಕ ಸಂಬಂಧದಲ್ಲಿ ಮತ್ತೆ ವಿಶ್ವಾಸ ಬೆಳೆಸಲು ಇಲ್ಲಿವೆ 6 ಮಾರ್ಗಗಳು

ಘರ್ಷಣೆಗಳು ಸಂಬಂಧದಲ್ಲಿ ಕಡ್ಡಾಯವಲ್ಲ ಎಂದು ಭಾವಿಸುತ್ತೇವೆ: ಆದರೆ ಈ ಹುಸಿ ಮುನಿಸು ಅಥವಾ ಘರ್ಷಣೆಗಳು ಸಂಗಾತಿಗಳಿಬ್ಬರು ಪರಸ್ಪರ ತಮ್ಮ ದೃಷ್ಟಿಕೋನಗಳನ್ನು ತೆರೆದುಕೊಳ್ಳಲು ಸಹಾಯಕವಾಗುತ್ತದೆ. ಮತ್ತು ಅದು ಸಂಬಂಧವನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ.

ನಾವು ಎಲ್ಲಾ ಸಮಯವನ್ನು ಜೊತೆಯಾಗಿ ಕಳೆಯಬೇಕು: ಆದರೆ ವಾಸ್ತವದಲ್ಲಿ, ಆರೋಗ್ಯಕರ ಸಂಬಂಧ ಸಂಗಾತಿಗಳಿಬ್ಬರು ಪರಸ್ಪರರ ತಮ್ಮದೇ ಆದ ವೈಯಕ್ತಿಕ ಜೀವನವನ್ನು ಅನುಭವಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ.

ಸಂಬಂಧದಲ್ಲಿ ಅಂಕಗಳನ್ನು ಇಟ್ಟುಕೊಳ್ಳುವುದು ಆರೋಗ್ಯಕರವಲ್ಲ: ನಾನು ಅಷ್ಟು ಕೆಲಸ ಮಾಡಿದೆ. ನಾನು ಇಷ್ಟು ಪ್ರೀತಿ ತೋರಿಸಿದೆ ಎಂದು ಹೇಳುತ್ತಾ ಅಂಕಗಳನ್ನು ನೀಡುವುದು ಸಂಬಂಧವನ್ನು ಹಾಳು ಮಾಡಬಹುದು.

ಸಂಗಾತಿಯು ಎಲ್ಲಾ ಅಗತ್ಯಗಳನ್ನು ಪೂರೈಸಬೇಕು: ಕೆಲವೊಬ್ಬರು ತನ್ನೆಲ್ಲಾ ಅಗತ್ಯಗಳನ್ನು ಸಂಗಾತಿಯೇ ಪೂರೈಸಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆರೋಗ್ಯಕರ ಸಂಬಂಧದಲ್ಲಿ ಎಲ್ಲಾ ನಿರೀಕ್ಷೆಯನ್ನು ಒಬ್ಬ ವ್ಯಕ್ತಿಯ ಮೇಲೆ ಏರಲಾಗುವುದಿಲ್ಲ. ಇಬ್ಬರು ಜೊತೆಯಾಗಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ಸಾಧಿಸಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ