Viral Video: ಬಿದಿರಿನಲ್ಲಿ ತಯಾರಿಸಿದ ಚಿಕನ್ ಬಿರಿಯಾನಿ, ಇಲ್ಲಿದೆ ನೋಡಿ

ಫುಡ್ ಬ್ಲಾಗರ್​​ಗಳಾದ ಕೋಮಲ್ ಮತ್ತು ಅಭಿಷೇಕ್ ಅವರು ಹಂಚಿಕೊಂಡಿರುವ ಲಕ್ನೋದ ಬ್ಯಾಂಬೂ ಬಿರಿಯಾನಿ ತಯಾರಿಸುವ ವಿಡಿಯೋ ಇನ್ಸ್ಟಾಗ್ರಾಮ್​​​ನಲ್ಲಿ ವೈರಲ್ ಆಗಿದೆ.

Viral Video: ಬಿದಿರಿನಲ್ಲಿ ತಯಾರಿಸಿದ ಚಿಕನ್ ಬಿರಿಯಾನಿ, ಇಲ್ಲಿದೆ ನೋಡಿ
ಬಿದಿರಿನಲ್ಲಿ ತಯಾರಿಸಿದ ಚಿಕನ್ ಬಿರಿಯಾನಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2023 | 6:16 PM

ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಇಷ್ಟಪಟ್ಟು ಇನ್ನುವ ಭಕ್ಷ್ಯವೆಂದರೆ ಅದು ಬಿರಿಯಾನಿ. ಅದಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ. ಬಿರಿಯಾನಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಅಷ್ಟು ಪ್ರಸಿದ್ಧವಾಗಿದೆ ಈ ಬಿರಿಯಾನಿ. ಅದರಲ್ಲೂ ಭಾರತದಲ್ಲಿ ಈ ಭಕ್ಷ್ಯಕ್ಕೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಬಿರಿಯಾನಿಯಲ್ಲೂ ಅನೇಕ ವಿಧಗಳಿವೆ. ಸಾಮಾನ್ಯವಾಗಿ ಮಟನ್ ಮತ್ತು ಚಿಕನ್ ಬಳಸಿ ಬಿರಿಯಾನಿ ತಯಾರಿಸಲಾಗುತ್ತದೆ. ಈಗ ಈ ಬಿರಿಯಾನಿಯ ಮಾತು ಏಕೆಂದರೆ, ಲಕ್ನೋದಲ್ಲಿ ಬಿರಿಯಾನಿ ತಯಾರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರ ಪ್ರಿಯರ ಗಮನವನ್ನು ಸೆಳೆದಿದೆ. ಇನ್ಸ್ಟಾಗ್ರಾಮ್​​​ನಲ್ಲಿ ಜನಪ್ರಿಯ ಫುಡ್ ಬ್ಲಾಗರ್ ಗಳಾದ ಕೋಮಲ್ ಮತ್ತು ಅಭಿಷೇಕ್ ಅವರು ‘ದಿ ಪುಡೀ ಹ್ಯಾಟ್’ ಎಂಬ ಹೆಸರಿನ ಬಿರಿಯಾನಿಯ ತಯಾರಿಕೆಯ ವಿಡೀಯೋ ಕ್ಲಿಪ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬ್ಯಾಂಬೂ ಬಿರಿಯಾನಿ. ನೀವು ಎಂದಾದರೂ ಈ ಬಿರಿಯಾನಿಯನ್ನು ಪ್ರಯತ್ನಿಸಿದ್ದೀರಾ? ಎಂದು ಅವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ದೇಶ ಇದಲ್ಲ; ಎಸ್​ಡಿಪಿಐ ಮುಖಂಡಗೆ ಸಿಟಿ ರವಿ ತಿರುಗೇಟು

ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಿರಿಯಾನಿ ಮಾಡುವ ವಿಧಾನವನ್ನು ತೋರಿಸಲಾಗಿದೆ. ಇದರಲ್ಲಿ ಬಿರಿಯಾನಿಯನ್ನು ಬೇಯಿಸಲು ಬಿದಿರನ್ನು ಬಳಸಲಾಗಿದೆ. ಮೊದಲು ಬಿದಿರಿನ ಒಳಗೆ ಚಿಕನ್ ತುಂಡುಗಳು, ವಿವಿಧ ಮಸಾಲೆಗಳು, ಎಣ್ಣೆ ಉಪ್ಪನ್ನು ಸೇರಿಸಿ ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ. ನಂತರ ಅದಕ್ಕೆ ಬೇಯಿಸಿದ ಬಿರಿಯಾನಿ (ಬಾಸುಮತಿ) ಅನ್ನವನ್ನು ಸೇರಿಸಿ ಅದನ್ನು ಮುಚ್ಚಲಾಗುತ್ತದೆ. ನಂತರ ಅದನ್ನು ಕಲ್ಲಿದ್ದಲಿನಲ್ಲಿ ಕಡಿಮೆ ಜ್ವಾಲೆಯಲ್ಲಿ ಸಂಪೂರ್ಣವಾಗಿ ಬೇಯಿಸಲಾಗುತ್ತದೆ. ಅದು ಸಂಪೂರ್ಣವಾಗಿ ಬೆಂದ ಬಳಿಕ ಒಂದು ಪ್ಲೇಟ್​​ಗೆ ಸರ್ವ್ ಮಾಡಲಾಗುತ್ತದೆ. ಈ ವೀಡಿಯೋ ನೋಡಿದ ಬಿರಿಯಾನಿ ಪ್ರಿಯರ ಬಾಯಲ್ಲಿ ನೀರೂರುವುದಂತೂ ಖಂಡಿತ. ಈ ವಿಡಿಯೋ 7 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹೆಚ್ಚಿನ ಕಮೆಂಟ್​​​ಗಳನ್ನು ಕೂಡಾ ಪಡೆದುಕೊಂಡಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು