Updated on: Apr 23, 2023 | 6:30 AM
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಾಗುತ್ತದೆ. ಅದರಂತೆಯೇ ಈ ಹಣ್ಣಿನ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುವುದಂತೂ ಖಂಡಿತಾ. ಈ ಹಣ್ಣಿನಲ್ಲಿ ಸಾಕಷ್ಟು ವಿಧಗಳನ್ನು ಕಾಣಬಹುದು. ಆದ್ದರಿಂದ ಭಾರತದ ಪ್ರಮುಖ ಮಾವಿನ ಹಣ್ಣಿನ ತಳಿಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಅಲ್ಫೋನ್ಸೋ: ಮಾವಿನ ಹಣ್ಣಿನ ರಾಜ ಎಂದು ಕರೆಯಲ್ಪಡುವ ಅಲ್ಫೋನ್ಸೋ ತನ್ನ ರುಚಿ ಹಾಗೂ ಸುವಾಸನೆಯಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಿಶಿಷ್ಟವಾದ ಪರಿಮಳ ಮತ್ತು ಆಕರ್ಷಕ ಕೇಸರಿ ಬಣ್ಣವನ್ನು ಈ ಹಣ್ಣು ಹೊಂದಿದೆ.
ಕೇಸರ್: ಸಿಹಿತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುವ ಈ ಮಾವಿನ ಹಣ್ಣನ್ನು ಗುಜರಾತಿನಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ.
ಚೌನ್ಸ: ಭಾರತದ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಸುವ ಚೌನ್ಸ ತಳಿಯ ಮಾವಿನ ಹಣ್ಣು, ಅದರ ಸುವಾಸನೆಯಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ದಾಶೇರಿ: ಈ ಮಾವಿನ ಹಣ್ಣನ್ನು ಹೆಚ್ಚಾಗಿ ಐಸ್ ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೂಲತಃ ಉತ್ತರ ಪ್ರದೇಶದಲ್ಲಿ ಈ ಹಣ್ಣು ಬಂದಿದೆ.
ಲಾಂಗ್ರಾ: ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿರುವ ಮಾವಿನ ತಳಿ ಲಾಂಗ್ರಾ. ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರುವ ಈ ಹಣ್ಣಿನಲ್ಲಿ ನಾರಿನಾಂಶಗಳು ಹೆಚ್ಚಾಗಿ ಕಂಡುಬರುತ್ತದೆ.
ತೋತಾಪುರಿ: ಈ ಹಣ್ಣು ಆಕಾರದಲ್ಲಿ ದೊಡ್ಡದಾಗಿದ್ದು, ಹೆಚ್ಚಾಗಿ ಉಪ್ಪಿನಕಾಯಿ ಹಾಗೂ ಚಟ್ನಿ ಮಾಡಲು ಉಪಯೋಗಿಸುತ್ತಾರೆ.