ದಿನನಿತ್ಯ ದೋಸೆ ಇಡ್ಲಿ ಮಾಡಲು ಬಳಸುವ ಈ ಅಕ್ಕಿ ಹಿಟ್ಟನ್ನು ಅಡುಗೆಗೆ ಮಾತ್ರ ಸೀಮಿತ ಎಂದು ಹಲವರು ಅಂದುಕೊಂಡಿದ್ದಾರೆ. ರುಚಿ ರುಚಿಯಾಗಿ ತಿಂಡಿ ತಿನಿಸುಗಳನ್ನು ಮಾಡಲು ಬಳಸುವ ಈ ಅಕ್ಕಿಹಿಟ್ಟು ಮುಖದ ಸೌಂದರ್ಯದಲ್ಲಿಯೂ ಪ್ರಯೋಜನಕಾರಿಯಾಗಿದೆ. ಈ ಅಕ್ಕಿಯಲ್ಲಿ ವಿಟಮಿನ್ ಬಿಯಂತಹ ಪೋಷಕಾಂಶಗಳ ಸಮೃದ್ಧವಾಗಿದ್ದು, ಹೀಗಾಗಿ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಂದವನ್ನು ಹೆಚ್ಚಿಸಲು ಬಯಸುವವರು ಮನೆಯಲ್ಲಿರುವ ಅಕ್ಕಿ ಹಿಟ್ಟಿನಿಂದ ತ್ವಚೆಗೆ ನಾನಾ ರೀತಿಯ ಫೇಸ್ ಪ್ಯಾಕ್ ಅನ್ನು ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು.
* ಅಕ್ಕಿ ಹಿಟ್ಟಿನ ಫೇಸ್ ಸ್ಕ್ರಬ್: ಎರಡು ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನೀರು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಒಂದೆರಡು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಆ ಬಳಿಕ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದರೆ ಚರ್ಮವು ಮೃದುವಾಗುವುದಲ್ಲದೆ ಸತ್ತಜೀವ ಕೋಶಗಳನ್ನು ತೆಗೆದುಹಾಕುತ್ತವೆ.
*ಕಪ್ಪು ಕಲೆಯ ನಿವಾರಣೆಗೆ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ : ಎರಡು ಚಮಚ ಅಕ್ಕಿ ಹಿಟ್ಟನ್ನು ಒಂದು ಚಮಚ ಮೊಸರು ಮತ್ತು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ, 15-20 ನಿಮಿಷಗಳ ಕಾಲ ನಂತರದಲ್ಲಿ ತಣ್ಣಗಿನ ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ನ ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.
*ಎಣ್ಣೆಯುಕ್ತ ತ್ವಚೆಗೆ ಅಕ್ಕಿ ಹಿಟ್ಟು ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ : ಗ್ರೀನ್ ಟೀ ಬ್ಯಾಗ್ ಅನ್ನು ಸೋಸುವ ಮೊದಲು 5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಸಮಯವರೆಗೆ ತಣ್ಣಗಾಗಲು ಬಿಡಿ. ಇದಕ್ಕೆ ಅಕ್ಕಿ ಹಿಟ್ಟು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಿ, 20 ನಿಮಿಷಗಳ ನಂತರದಲ್ಲಿ ತಣ್ಣೀರಿನಿಂದ ಮುಖ ತೊಳೆಯಿರಿ.
*ಡಾರ್ಕ್ ಸರ್ಕಲ್ ಗೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಹಾಗೂ ಟೊಮೆಟೊ ರಸದ ಫೇಸ್ ಪ್ಯಾಕ್ : ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಕಡಲೆ ಹಿಟ್ಟು, ಅರ್ಧ ಕಪ್ ಟೊಮೆಟೊ ರಸ ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಣ್ಣುಗಳ ಸುತ್ತಲಿನ ಪ್ರದೇಶಕ್ಕೆ ಅನ್ವಯಿಸಿ. 30 ನಿಮಿಷಗಳ ಕಾಲ ಹಾಗೆ ಬಿಟ್ಟು, ತಣ್ಣೀರಿನಿಂದ ತೊಳೆಯಿರಿ. ನಂತರ ಮಾಯಿಶ್ಚರೈಸರ್ ಮುಖಕ್ಕೆ ಹಚ್ಚಿಕೊಳ್ಳಿ.
ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಶುಂಠಿ
*ಮೊಡವೆಗಳಿಗೆ ಅಲೋವೆರಾ ಫೇಸ್ ಪ್ಯಾಕ್: ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಅಲೋವೆರಾ ಜೆಲ್ ಹಾಗೂ ಒಂದು ಚಮಚದಷ್ಟು ತುರಿದ ಸೌತೆಕಾಯಿಯನ್ನು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ. ಆ ಬಳಿಕ ತಣ್ಣೀರಿನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದರೆ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ