ಸಾಂದರ್ಭಿಕ ಚಿತ್ರ
ಹಬ್ಬಗಳ ಸಂಭ್ರಮ ಹತ್ತಿರ ಬರುತ್ತಿದೆ. ಜುಲೈನಿಂದ ಸಾಲು ಸಾಲು ಹಬ್ಬಗಳು ಪ್ರಾರಂಭವಾಗುತ್ತದೆ. ಅದರಲ್ಲೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ಹಬ್ಬದ ಕ್ಷಣ ವಿಶೇಷವಾಗಿರುತ್ತದೆ. ಯುಗಾದಿ, ವಿಷು, ಮೈಸೂರು ದಸರಾ, ತ್ರಿಶೂರ್ ಪೂರಂ, ಹಂಪಿ ಉತ್ಸವ ಮತ್ತು ಕಾರ್ತಿಕೈ ದೀಪಂ ಮುಂತಾದ ಹಬ್ಬಗಳು ತಮ್ಮದೇ ಆದ ಅಗತ್ಯ ಭಕ್ಷ್ಯಗಳನ್ನು ಮಾಡುತ್ತಾರೆ. ಸಿಹಿ, ಖಾರ ಎಲ್ಲ ರೀತಿ ಭಕ್ಷ್ಯಗಳನ್ನು (south Indian food) ತಯಾರು ಮಾಡುತ್ತಾರೆ. ಈ ದಕ್ಷಿಣ ಭಾರತೀಯ ನೆಚ್ಚಿನ ಖಾದ್ಯಗಳನ್ನು ತಿನ್ನಲು ನೀವು ಹಬ್ಬಕ್ಕಾಗಿ ಕಾಯಬೇಕಾಗಿಲ್ಲ. ಈ ಖಾದ್ಯಗಳು ಮನೆಯಲ್ಲಿ ಬೇಯಿಸುವುದು ಸರಳವಾಗಿದೆ ಮಾಡಬಹುದು.
6 ದಕ್ಷಿಣ ಭಾರತದ ಹಬ್ಬದ ಭಕ್ಷ್ಯ
- ಮೈಸೂರು ಪಾಕ್: ಮೈಸೂರು ಪಾಕ್ ಕೇವಲ ಸಿಹಿ ತಿಂಡಿಯಲ್ಲ, ಇದು ಸಂಪ್ರದಾಯಕ ಹಾಗೂ ನಂಬಿಕೆಯನ್ನು ಹೊಂದಿರುವ ಸಿಹಿತಿಂಡಿ. ಬೇಸನ್, ತುಪ್ಪ ಮತ್ತು ಸಕ್ಕರೆಯಿಂದ ಈ ಪಾಕವನ್ನು ತಯಾರು ಮಾಡಲಾಗುತ್ತದೆ. ಇದನ್ನು ಪ್ರತಿ ಹಬ್ಬದಂದು ಪ್ರತಿ ಮನೆಯಲ್ಲೂ ಮಾಡಬಹುದು. ಇದನ್ನು ಹೆಚ್ಚಾಗಿ ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಮದುವೆ ಸಂಭ್ರಮದಲ್ಲಿ ಬಳಸುತ್ತಾರೆ. ಇದನ್ನು ಮನೆಯಲ್ಲೂ ಕೂಡ ತಯಾರಿಸಬಹುದು.
- ವೆನ್ ಪೊಂಗಲ್: ಅನ್ನ, ಹಳದಿ ಹೆಸರು ಬೇಳೆ, ಕರಿಬೇವು, ತುಪ್ಪ, ಜೀರಿಗೆ, ಶುಂಠಿ ಮತ್ತು ಕರಿಮೆಣಸಿ ಬಳಸಿ ವೆನ್ ಪೊಂಗಲ್ ಮಾಡಲಾಗಿದೆ. ಇದು ತಮಿಳುನಾಡಿನಲ್ಲಿ ಪೊಂಗಲ್ ಸುಗ್ಗಿಯ ಹಬ್ಬದಂದು ಮಾಡಲಾಗುತ್ತದೆ. ಇದು ತುಪ್ಪ ಬೆರೆಸಿದ ಆಹಾರವಾಗಿದ್ದು. ಇದು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರ ಕ್ರಮವಾಗಿದೆ.
- ಪರುಪ್ಪು ಪಾಯಸಂ: ಪರುಪ್ಪು ಪಾಯಸಂ ಅಥವಾ ಹೆಸರು ಬೇಳೆ ಪಾಯಸಂ, ಕೇರಳದಲ್ಲಿ ಓಣಂ ಆಚರಣೆಯ ಸಮಯದಲ್ಲಿ ಇದನ್ನು ಮಾಡುತ್ತಾರೆ. ಹೆಸರು ಬೇಳೆ, ಬೆಲ್ಲ ಮತ್ತು ತೆಂಗಿನಕಾಯಿಯನ್ನು ಇದಕ್ಕೆ ಬೇಕಾಗುತ್ತದೆ.
- ಮೊಸರು ಅನ್ನ: ಒಂದು ಬಟ್ಟಲು ಮೊಸರು ಅನ್ನ ಆರೋಗ್ಯ ಉತ್ತಮವಾಗಿರುತ್ತದೆ. ಬೇಯಿಸಿದ ಅನ್ನ, ತಾಜಾ ಮೊಸರು, ಕರಿಬೇವು ಮತ್ತು ಮಸಾಲೆಗಳಿಂದ ತಯಾರಿಸಿದ ಈ ದಕ್ಷಿಣ ಭಾರತೀಯ ಕ್ಲಾಸಿಕ್ ಆಹಾರ, ಬೇಸಿಗೆಯಲ್ಲಿ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಮನೆಗಳಲ್ಲಿ ಇದು ಪ್ರಧಾನ ಆಹಾರವಾಗಿದೆ. ಮೊಸರು ಅನ್ನವು ಅನೇಕ ಹಬ್ಬದ ಮೆನುಗಳಲ್ಲಿ ಇರುತ್ತದೆ.
- ಮಾವಿಲಕ್ಕು : ಹಬ್ಬದ ಅತ್ಯಂತ ಪವಿತ್ರ ಆಹಾರ ಮಾವಿಲಕ್ಕು, ಅಕ್ಕಿ ಹಿಟ್ಟು, ಬೆಲ್ಲ, ಏಲಕ್ಕಿ, ಒಣ ಶುಂಠಿ ಮತ್ತು ತುಪ್ಪದಿಂದ ತಯಾರಿಸಿದ ಖಾದ್ಯ. ಇದು ದೀಪದ ಆಕಾರದಲ್ಲಿ ಹತ್ತಿಯ ಬತ್ತಿಯಿಂದ ಬೆಳಗಿಸಿ, ಇದನ್ನು ಕಾರ್ತಿಕ ದೀಪ ಮತ್ತು ಆದಿ ಮಾಸದಲ್ಲಿ ಮಾರಿಯಮ್ಮನ್ ಅಥವಾ ಕುಟುಂಬ ದೇವತೆಗೆ ಅರ್ಪಿಸಲಾಗುತ್ತದೆ. ಖಾದ್ಯವು ಆಧ್ಯಾತ್ಮಿಕ ಮತ್ತು ಹಳೆಯ ನೆನಪುಗಳನ್ನು ತರುತ್ತದೆ.
- ರಸಮ್: ದಕ್ಷಿಣ ಭಾರತೀಯ ಖಾದ್ಯಗಳಲ್ಲಿ ರಸಮ್ ಎನ್ನುವುದು ಬೇಕೆ ಬೇಕು. ಇದು ಹಬ್ಬಗಳಲ್ಲಿ ಹೆಚ್ಚು ಪ್ರಮುಖ್ಯಾತೆ ಪಡೆದಿದೆ. ಹುಣಸೆಹಣ್ಣು, ಟೊಮೆಟೊ, ಮೆಣಸು ಮತ್ತು ಮಸಾಲೆ ಬೆರೆಸಿ ಇದನ್ನು ತಯಾರಿಸುತ್ತಾರೆ. ವಿಶೇಷವಾಗಿ ತಮಿಳು ಮತ್ತು ತೆಲುಗು ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಹಬ್ಬಕ್ಕೂ ಇದನ್ನು ಹೆಚ್ಚು ಮಾಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ