ಮುಖದ ಅಂದಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಅರಶಿನ, ಇಲ್ಲಿದೆ ಸಿಂಪಲ್ ಮನೆ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2024 | 11:18 AM

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುವ ಮಸಾಲ ಪದಾರ್ಥಗಳಲ್ಲಿ ಅರಶಿನ ಕೂಡ ಒಂದು. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣ, ಸತು ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿದ್ದು, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಮತ್ತು ನಂಜುನಿರೋಧಕ ಗುಣವನ್ನು ಹೊಂದಿದೆ. ಹೀಗಾಗಿ ಹೆಚ್ಚಿನವರು ಮನೆ ಮದ್ದುಗಳಲ್ಲಿ ಅಡುಗೆ ಮನೆಯಲ್ಲಿ ಸಿಗುವ ಈ ಅರಶಿನವನ್ನು ಬಳಸಿ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತಾರೆ.

ಮುಖದ ಅಂದಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಅರಶಿನ, ಇಲ್ಲಿದೆ ಸಿಂಪಲ್ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us on

ನಮ್ಮ ಹಿರಿಯರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದರೆ ಅಡುಗೆ ಮನೆಯಲ್ಲಿರುವ ಸಾಂಬಾರು ಪದಾರ್ಥಗಳಿಂದ ಮನೆ ಮದ್ದನ್ನು ತಯಾರಿಸಿ ಗುಣ ಪಡಿಸಿಕೊಳ್ಳುತ್ತಿದ್ದರು. ಇವತ್ತಿಗೂ ಹಳ್ಳಿಗಳಲ್ಲಿ ಅಜ್ಜ ಅಜ್ಜಿಯಂದಿರು ಇದ್ದರೆ, ಆರೋಗ್ಯ ಸಮಸ್ಯೆಗೆ ಕೆಲವು ಮನೆ ಮದ್ದುಗಳನ್ನು ಹೇಳುವುದನ್ನು ನೋಡಿರಬಹುದು. ಅದರಲ್ಲಿಯು ಮನೆ ಮದ್ದುಗಳಲ್ಲಿ ಹೆಚ್ಚು ಬಳಸಲ್ಪಡುವ ಸಾಂಬಾರ್ ಪದಾರ್ಥಗಳಲ್ಲಿ ಅರಶಿನ ಕೂಡ ಒಂದು. ಮುಖದ ಕಾಂತಿಯ ಜೊತೆಗೆ ಆರೋಗ್ಯ ಸಮಸ್ಯೆಯನ್ನು ಹೋಗಲಾಡಿಸುವ ತಾಕತ್ತು ಈ ಅರಶಿನಕ್ಕಿದೆ.

ಅರಶಿನವನ್ನು ಬಳಸಿ ತಯಾರಿಸುವ ಮನೆ ಮದ್ದುಗಳು ಇಲ್ಲಿವೆ

* ಅರಶಿನದ ಕೋಡನ್ನು ಸುಟ್ಟು ಪುಡಿ ಮಾಡಿಕೊಂಡು, ಉಪ್ಪು ಬೆರೆಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಯು ಕಡಿಮೆಯಾಗುತ್ತದೆ.

* ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅಪ್ಪಟವಾದ ಅರಶಿನ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ನೆಗಡಿ ಮತ್ತು ಗಂಟಲು ನೋವಿಗೆ ಪರಿಣಾಮಕಾರಿಯಾಗಿದೆ.

* ಮಹಿಳೆಯರು ಸ್ನಾನ ಮಾಡುವಾಗ ಕೆನ್ನೆಗೆ ಅರಶಿನದ ಪುಡಿಯನ್ನು ಹಚ್ಚಿ ಕೊಂಡು ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮುಖದಲ್ಲಿ ಬೇಡದ ಕೂದಲು ಬೆಳೆಯುವುದಿಲ್ಲ ಹಾಗೂ ಮುಖವು ಕಾಂತಿಯುತವಾಗಿರುತ್ತದೆ.

* ಅರಶಿನದ ಪುಡಿಯನ್ನು ಹರಳೆಣ್ಣೆಯೊಂದಿಗೆ ಮಿಶ್ರಮಾಡಿ ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೆ ಚರ್ಮದ ಕಾಂತಿ ಹೆಚ್ಚಾಗಿ, ಚರ್ಮರೋಗ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಪರಿಸರ ಸಮತೋಲನಕ್ಕೆ ಸಾಧುಜೀವಿ ಜೀಬ್ರಾಗಳ ಸಂರಕ್ಷಣೆ ಅಗತ್ಯ

* ಅರಶಿನದ ಪುಡಿಯನ್ನು ಮೊಸರಿನಲ್ಲಿ ಕದಡಿ ಬೆಳಗಿನ ಹೊತ್ತಿನಲ್ಲಿ ಒಂದು ವಾರಗಳ ಕಾಲ ಸೇವಿಸಿದರೆ ಕಾಮಾಲೆ ರೋಗವು ಕಡಿಮೆಯಾಗುತ್ತದೆ.

* ಅರಶಿನ, ಮರದನ, ಮಂಜಿಷವನ್ನು ಹಾಲು, ತುಪ್ಪ ಬೆರೆಸಿ ಅರೆದು ಮೊಡವೆಗಳಿಗೆ ಹಚ್ಚಿಕೊಂಡರೆ ಮೊಡವೆಗಳು ಮಾಯಾವಾಗುತ್ತದೆ.

* ಅರಿಶಿನದ ಕೋಡನ್ನು ನಿಂಬೆರಸದಲ್ಲಿ ತೇಯ್ದು ದಿನಕ್ಕೆ ನಾಲ್ಕರಿಂದ ಐದು ಬಾರಿ ಕಾಲಿನಲ್ಲಿರುವ ಆಣಿಗೆ ಲೇಪಿಸಿದರೆ ಉದುರಿ ಹೋಗುತ್ತದೆ.

* ಅರಶಿನವನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರವು ಬೇಗನೇ ಜೀರ್ಣವಾಗುತ್ತದೆ.

* ಒಣ ಅರಶಿನದ ಕೋಡನ್ನು ಪುಡಿ ಮಾಡಿ ಕೆಂಡದ ಮೇಲೆ ಹಾಕಿ ಅದರ ಹೊಗೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ ಯು ಗುಣಮುಖವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ