Parenting Tips : ಹಠ ಮಾಡೋ ಮಕ್ಕಳ ವರ್ತನೆಯನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 25, 2024 | 4:23 PM

ಸಣ್ಣ ವಯಸ್ಸಿನಲ್ಲಿ ಮಕ್ಕಳು ಹಠ ಹಿಡಿಯುವುದು, ಕೋಪ ಮಾಡಿಕೊಳ್ಳುವುದು ಸಹಜವಾಗಿರುತ್ತದೆ. ಆದರೆ ಕೆಲ ಮಕ್ಕಳು ವಿಪರೀತ ಹಠಮಾರಿಗಳಾಗಿರುತ್ತಾರೆ. ಇಂತಹ ಮಕ್ಕಳನ್ನು ಬೆಳೆಸುವುದೇ ತಂದೆ ತಾಯಿಯರಿಗೆ ಸವಾಲಿನ ಕೆಲಸ. ಏನೇ ಹೇಳಿದರೂ ಕೇಳುವುದೇ ಇಲ್ಲ, ಎಷ್ಟೇ ಹೊಡೆದರೂ ಹಠಮಾರಿ ಸ್ವಭಾವವು ಕಡಿಮೆಯಾಗುವುದೇ ಇಲ್ಲ. ಒಂದು ವೇಳೆ ನಿಮ್ಮ ಮಕ್ಕಳು ಸಣ್ಣ ಪುಟ್ಟ ವಿಷಯಕ್ಕೂ ಹಠ ಹಿಡಿಯುತ್ತಾರೆ ಎಂದಾದರೆ ಮಗುವಿನ ವರ್ತನೆಯನ್ನು ಬದಲಾಯಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ.

Parenting Tips : ಹಠ ಮಾಡೋ ಮಕ್ಕಳ ವರ್ತನೆಯನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಮಕ್ಕಳನ್ನು ಬೆಳೆಸುವುದು ಹೇಳಿದ್ದಷ್ಟು ಸುಲಭವಲ್ಲ, ಎಷ್ಟು ಮುದ್ದು ಮಾಡ್ತೀವೋ ಮಕ್ಕಳು ಅಷ್ಟೇ ಹಠಮಾರಿಗಳಾಗಿ ಬಿಡುತ್ತಾರೆ. ಬಹುತೇಕರ ತಂದೆ ತಾಯಿಯರು, ನನ್ನ ಮಗು ಹೇಳಿದ ಮಾತು ಸ್ವಲ್ಪವೂ ಕೇಳೋದಿಲ್ಲ. ಏನಾದರೂ ಬೇಕೆಂದರೆ ಅದನ್ನು ಕೊಡಿಸೋವರೆಗೂ ಬಿಡೋದಿಲ್ಲ. ತುಂಬ ಹಠ ಮಾಡ್ತಾನೆ ಎಂದು ಹೇಳಿರುವುದನ್ನು ಕೇಳಿರಬಹುದು. ಇಂತಹ ಮಕ್ಕನ್ನು ಸಮಾಧಾನದಿಂದ ಸಂತೈಸಿಕೊಂಡು ಹೋಗುವುದು ಪೋಷಕರಿಗೆ ಸವಾಲಿನ ವಿಷಯವೇ ಸರಿ. ಆದರೆ ಪೋಷಕರು ಮಕ್ಕಳೊಂದಿಗೆ ಈ ರೀತಿ ವರ್ತಿಸಿದರೆ ಅವರನ್ನು ಕೂಲ್ ಆಗಿಸುವುದು ಕಷ್ಟವೇನಲ್ಲ.

  • ಮಕ್ಕಳು ಹೇಳಿದ್ದನ್ನೆಲ್ಲ ಮಾಡಲೇಬೇಡಿ : ಹೆಚ್ಚಿನ ಪೋಷಕರು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಕೊರತೆ ಆಗಬಾರದು ಎಂದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ಹೇಳಿದ್ದಂತೆ ನಡೆದುಕೊಳ್ಳುತ್ತಾರೆ. ಇದು ಮಕ್ಕಳಲ್ಲಿ ಹಠ ಸ್ವಭಾವ ಬೆಳೆಯಲು ಕಾರಣವಾಗುತ್ತದೆ. ಮಕ್ಕಳನ್ನು ಕೇಳಿದ್ದನ್ನು ಇಲ್ಲ ಎಂದರೆ ಸಾಕು ಹಠ ಮಾಡಿ ಕೋಪಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ಹೇಳಿದ್ದಕ್ಕೆಲ್ಲಾ ಓಕೆ ಎನ್ನುವುದನ್ನು ಆದಷ್ಟು ತಪ್ಪಿಸುವುದು ಉತ್ತಮ.
  • ಮನೆಯ ವಾತಾವರಣವು ಚೆನ್ನಾಗಿರುವಂತೆ ನೋಡಿಕೊಳ್ಳಿ : ಮಕ್ಕಳನ್ನು ಬೆಳೆಸುವಾಗ ಆ ಮನೆಯ ವಾತಾವರಣವು ಉತ್ತಮವಾಗಿರಬೇಕು. ದಿನನಿತ್ಯ ಮನೆಯಲ್ಲಿ ಜಗಳವೇ ಆಗುತ್ತಿದ್ದಂತೆ ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಆದಷ್ಟು ಮನೆಯ ಸದಸ್ಯರೊಂದಿಗೆ ಪ್ರೀತಿ, ಗೌರವ, ವಿಶ್ವಾಸದಿಂದ ನಡೆದುಕೊಂಡರೆ ಈ ನಿಮ್ಮ ನಡವಳಿಕೆಯು ಮಕ್ಕಳು ಕೂಡ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
  • ಅಭಿಪ್ರಾಯವನ್ನು ಹೇಳಲು ಅವಕಾಶ ಕೊಡಿ : ಹೆಚ್ಚಿನ ಪೋಷಕರು ತನ್ನ ಮಕ್ಕಳಿಗೆ ಅಭಿಪ್ರಾಯವನ್ನು ಹೇಳುವ ಸ್ವತಂತ್ರವನ್ನು ಕಿತ್ತುಕೊಂಡು ಬಿಟ್ಟಿರುತ್ತಾರೆ. ಇದು ಕೂಡ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಭಾವನೆಗಳನ್ನು ನಿಗ್ರಹಿಸುವುದರಿಂದ ಹಠಮಾರಿ ಸ್ವಭಾವವು ಬೆಳೆಯುತ್ತದೆ. ಸಾಧ್ಯವಾದಷ್ಟು ಮಕ್ಕಳೊಂದಿಗೆ ಶಾಂತವಾಗಿ ಕುಳಿತು ಮಾತನಾಡುವುದು ಒಳ್ಳೆಯದು.
  • ನಿಮ್ಮ ವರ್ತನೆಯು ಸ್ಥಿಮಿತ ಕಳೆದುಕೊಳ್ಳದೇ ಇರಲಿ : ಮಕ್ಕಳು ಹಠ ಮಾಡುತ್ತಿದ್ದರೆ, ಪೋಷಕರು ಗದರುತ್ತಾರೆ. ಇಲ್ಲವೆಂದರೆ ಕೋಪಗೊಂಡು ಹೊಡೆಯುತ್ತಾರೆ. ಆದರೆ ಮಕ್ಕಳ ಜೊತೆಗೆ ಅತಿಯಾಗಿ ವರ್ತಿಸುವುದು ಒಳ್ಳೆಯದಲ್ಲ. ನಿಮ್ಮ ಕೋಪವು ಮಕ್ಕಳ ಹಠ ಮಾಡಲು ಮತ್ತಷ್ಟು ಪ್ರೇರೇಪಿಸುತ್ತದೆ. ಹೀಗಾಗಿ ತಂದೆ ತಾಯಿಯಂದಿರು ಆದಷ್ಟು ಕೋಪ ಮಾಡಿಕೊಳ್ಳದೇ, ನಿಮ್ಮ ಮಕ್ಕಳು ಹಠಮಾರಿ ಸ್ವಭಾವವನ್ನು ತೋರ್ಪಡಿಸುವುದು ಏಕೆ ಎಂದು ಅರಿತುಕೊಳ್ಳುವುದು ಮುಖ್ಯ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 4:22 pm, Thu, 25 July 24