ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ

ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ.

ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ
Tulsi plant
Image Credit source: Pinterest

Updated on: Jan 30, 2024 | 6:01 PM

ಚಳಿಗಾಲದಲ್ಲಿ ವಿವಿಧ ಕಾರಣಗಳಿಂದ, ತುಳಸಿ ಗಿಡದ ಎಲೆಗಳು ಕೊಳೆತು ಅಥವಾ ಒಣಗಿ ಉದುರಲು ಪ್ರಾರಂಭವಾಗುತ್ತದೆ. ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ. ತುಳಸಿ ಎಲೆಗಳಲ್ಲಿ ಆಯುರ್ವೇದದ ಅಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಳಿಗಾಲದಲ್ಲಿ ತುಳಸಿ ಎಲೆಯ ರಸವನ್ನು ಕುಡಿಯುವುದರಿಂದ ದೇಹವು ಆರೋಗ್ಯವಾಗಿರುವುದರ ಜೊತೆಗೆ ರೋಗಗಳಿಂದ ಮುಕ್ತವಾಗಿರುತ್ತದೆ.

ಚಳಿಗಾಲದಲ್ಲಿ ತುಳಸಿ ಗಿಡ ಹಚ್ಚಹಸಿರಾಗಿ ಬೆಳೆಯಲು ಈ ಸಲಹೆ ಅನುಸರಿಸಿ:

  • ಚಳಿಗಾಲದಲ್ಲಿ ತುಳಸಿ ಗಿಡವು ಒಣಗಲು ಪ್ರಾರಂಭಿಸಿದರೆ, ಮಡಕೆಯಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ. ಮಡಕೆ ತುಂಬಾ ಚಿಕ್ಕದಾಗದಂತೆ ಎಚ್ಚರಿಕೆ ವಹಿಸಬೇಕು. ಮಡಕೆಯ ಕೆಳಗಿನಿಂದ ಚಿಕ್ಕದಾಗಿ ತೂತು ಮಾಡಬೇಕು. ಇದರೊಳಗೆ ತುಳಸಿ ಗಿಡವನ್ನು ನೆಡಿ.
  • ತುಳಸಿ ಸಸ್ಯವು ಶಿಲೀಂಧ್ರ ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ. ಸಸ್ಯಗಳ ಮೇಲೆ ಶಿಲೀಂಧ್ರ ಸೋಂಕನ್ನು ತಡೆಗಟ್ಟಲು ಬೇವಿನ ಬೀಜದ ಪುಡಿಯನ್ನು ಸಿಂಪಡಿಸಿ. ಇದಕ್ಕಾಗಿ ಬೇವಿನ ಸೊಪ್ಪಿನ ರಸವನ್ನು ಸಿಂಪಡಿಸಬಹುದು.
  • ಚಳಿಗಾಲದಲ್ಲಿ ಇಬ್ಬನಿಯಿಂದ ತುಳಸಿ ಗಿಡ ಒಣಗಬಹುದು, ಆದ್ದರಿಂದ ಈ ಋತುವಿನಲ್ಲಿ ತುಳಸಿ ಗಿಡವನ್ನು ಸ್ವಚ್ಛವಾದ ಕೆಂಪು ಬಟ್ಟೆಯಿಂದ ಮುಚ್ಚಿ. ನೀವು ಬಯಸಿದರೆ, ನೀವು ಅದನ್ನು ಒಳಾಂಗಣದಲ್ಲಿ ಇರಿಸಬಹುದು.
  • ಇದಲ್ಲದೇ ತುಳಸಿ ಗಿಡಕ್ಕೆ ಕನಿಷ್ಟ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳುವಂತಹ ಜಾಗದಲ್ಲಿ ನೆಡುವುದು ಉತ್ತಮ. ಚಳಿಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಗಿಡಕ್ಕೆ ಹೆಚ್ಚು ನೀರು ಹಾಕಬೇಡಿ. ಹೆಚ್ಚು ನೀರು ಹಾಕುವುದು ಗಿಡ ಕೊಳೆತು ಹೋಗಲು ಕಾರಣವಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ