ಚಳಿಗಾಲದಲ್ಲಿ ತೇವಾಂಶಭರಿತವಾದ ತ್ವಚೆ ನಿಮ್ಮದಾಗಬೇಕೆ? ಈ ಆಹಾರಗಳನ್ನು ಸೇವಿಸಿ
ಚಳಿಗಾಲವನ್ನು ಕೆಲವರು ಇಷ್ಟ ಪಟ್ಟರೆ, ಇನ್ನು ಕೆಲವರು ಯಾಕಾದರೂ ಚಳಿಗಾಲ ಬರುತ್ತದೆ ಎಂದುಕೊಳ್ಳುತ್ತಾರೆ. ಮುಖದ ಕಾಂತಿಯ ಬಗ್ಗೆ ಹೆಚ್ಚು ಗಮನ ಕೊಡುವ ಮಹಿಳೆಯರಂತೂ ಈ ಚಳಿಗಾಲವನ್ನು ಹೆಚ್ಚು ಇಷ್ಟ ಪಡುವುದೇ ಇಲ್ಲ. ಈ ಸಮಯದಲ್ಲಿ ಬಿಡದೇ ಕಾಡುವ ನೂರಾರು ಆರೋಗ್ಯ ಸಮಸ್ಯೆಗಳು ಒಂದೆಡೆಯಾದರೆ ಚರ್ಮದ ಅಂದವು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ತ್ವಚೆಯನ್ನು ತೇವಾಂಶ ಭರಿತವಾಗಿಟ್ಟುಕೊಳ್ಳಬಹುದು.
ಚಳಿಗಾಲದಲ್ಲಿ ಆರೋಗ್ಯ ಹಾಗೂ ತ್ವಚೆಯ ಕಡೆಗೆ ಗಮನ ಕೊಡುವುದು ಬಹುಮುಖ್ಯ. ಈ ಸಮಯದಲ್ಲಿ ತಂಪಾದ ವಾತಾವರಣವಿರುವ ಕಾರಣ ತ್ವಚೆ ಹಾಗೂ ಚರ್ಮವು ಒಣಗಿದಂತಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ತ್ವಚೆಯ ರಕ್ಷಣೆಗೆ ಬಳಸುವುದರ ಜೊತೆಗೆ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡು, ತ್ವಚೆಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದು ಅಗತ್ಯ.
ತ್ವಚೆಯ ಆರೈಕೆಗೆ ಈ ಆಹಾರಗಳನ್ನು ಸೇವಿಸಿ
* ಟೊಮ್ಯಾಟೊ : ಚಳಿಗಾಲದಲ್ಲಿ ತ್ವಚೆಯನ್ನು ತೇವಾಂಶಭರಿತವಾಗಿ ಇಡಲು ಟೊಮೆಟೊವನ್ನು ಸೇವಿಸುವುದು ಬಹಳ ಉತ್ತಮ. ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಈ ಟೊಮೊಟೊದಲ್ಲಿ ವಿಟಮಿನ್ ಸಿ ಲೈಕೋಪೀನ್‌ನಲ್ಲಿ ಸಮೃದ್ಧವಾಗಿದ್ದು, ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಈ ಗುಣಗಳು ನಿಮ್ಮ ಚರ್ಮವನ್ನು ಪರಿಸರದಿಂದ ಹಾಗೂ ವಿಕಿರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೀರಿನ ಅಂಶವು ಹೆಚ್ಚಾಗಿರುವುದರಿಂದ ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿರಿಸುತ್ತದೆ. ಹೀಗಾಗಿ ಟೊಮೊಟೊವನ್ನು ಸಲಾಡ್ ಗಳು, ಸೂಪ್ ಗಳು ಹಾಗೂ ಸಾಸ್ ಗಳನ್ನು ಮಾಡಿ ಸೇವಿಸಬಹುದು.
* ಚಿಯಾ ಬೀಜಗಳು : ಈ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಈ ಬೀಜಗಳು ಚರ್ಮದ ನೈಸರ್ಗಿಕ ತೈಲವನ್ನು ಕಾಪಾಡುವುದರೊಂದಿಗೆ ತೇವಾಂಶವು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದಲ್ಲದೇ, ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಈ ಬೀಜಗಳನ್ನು ಮೊಸರು ಅಥವಾ ಸಲಾಡ್ ಗಳಿಗೆ ಬೆರೆಸಿ ಸೇವಿಸಬಹುದು.
* ಬಾದಾಮಿ : ಬಾದಾಮಿಯಲ್ಲಿ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್, ವಿಟಮಿನ್ ಇ ಹೇರಳವಾಗಿದ್ದು,ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ. ಈ ಬಾದಾಮಿ ಸೇವನೆ ಮಾಡುವುದರಿಂದ ಚರ್ಮವನ್ನು ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಚರ್ಮದಲ್ಲಿ ತೇವಾಂಶವು ಕುಂದದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: ಮುಖದ ಅಂದಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಅರಶಿನ, ಇಲ್ಲಿದೆ ಸಿಂಪಲ್ ಮನೆ ಮದ್ದು
* ತೆಂಗಿನ ನೀರು: ತೆಂಗಿನ ನೀರಿನಲ್ಲಿ ಸೈಟೊಕಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್ ಗಳಿದ್ದು, ವಯಸ್ಸಾಗದಂತೆ ನೈಸರ್ಗಿಕವಾಗಿ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಈ ಸಮಯದಲ್ಲಿ ಈ ತೆಂಗಿನ ನೀರನ್ನು ಕುಡಿಯಬಹುದು, ಇಲ್ಲವಾದರೆ ಜ್ಯೂಸ್ ಅಥವಾ ಚಟ್ನಿಗಳಿಗೆ ಬಳಸಬಹುದು.
* ಮೊಸರು : ಮೊಸರಿನಲ್ಲಿ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದು, ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೇ ಚರ್ಮವನ್ನು ನೈಸರ್ಗಿಕವಾಗಿ ಕಾಪಾಡುವುದರೊಂದಿಗೆ ತೇವಾಂಶದ ನಷ್ಟವನ್ನು ತಡೆದು, ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಈ ಮೊಸರನ್ನು ಆಹಾರವಾಗಿ ಸೇವಿಸಬಹುದು. ಇಲ್ಲದಿದ್ದರೆ ಮೊಸರಿನ ಫೇಸ್ ಮಾಸ್ಕ್ ಅಥವಾ ಮಾಯಿಶ್ಚರೈಸರ್ ಆಗಿ ಬಳಸುವ ಮೂಲಕ ತ್ವಚೆಯ ರಕ್ಷಣೆಯನ್ನು ಮಾಡಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ