ಅಡುಗೆ ಮನೆ ಹಾಗೂ ಆಹಾರ ತಯಾರಿಸುವ ಪಾತ್ರೆಗಳು ಸ್ವಚ್ಛತೆಯಿಂದ ಕೂಡಿದ್ದರೆ ಅಡುಗೆ ಮನೆಯತ್ತ ಹೋಗಲು ಮನಸ್ಸಾಗುತ್ತದೆ. ರುಚಿ ರುಚಿಯಾದ ಅಡುಗೆ ತಯಾರಿಸಿದ ಬಳಿಕ ಈ ಮಿಕ್ಸಿ, ಗ್ರೈಂಡರ್ ಉಪಕರಣಗಳನ್ನು ತೊಳೆಯುವುದು ಸ್ವಲ್ಪ ಕಷ್ಟವೇ. ಎಷ್ಟೇ ತೊಳೆದರೂ ಬ್ಲೇಡ್‌ಗಳ ಮಧ್ಯದಲ್ಲಿ ಸಿಲುಕಿ ಕೊಂಡ ಆಹಾರದ ಅಂಶಗಳು ಹೋಗುವುದೇ ಇಲ್ಲ. ಹೀಗಾಗಿ ಮಿಕ್ಸಿಯಲ್ಲಿ ಕೆಟ್ಟ ವಾಸನೆಯೊಂದು ಬರುತ್ತಿರುತ್ತದೆ. ಹೀಗಾದಾಗ ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳಿಂದ ಈ ಕೆಟ್ಟ ವಾಸನೆಯಿಂದ ಮುಕ್ತಿ ಪಡೆಯಬಹುದು.
* ಬೇಕಿಂಗ್ ಸೋಡಾ: ಮಿಕ್ಸಿ ಜಾರಿನಲ್ಲಿ ಬ್ಲೇಡುಗಳ ನಡುವೆ ಸಿಕ್ಕಿ ಹಾಕಿಕೊಂಡ ಆಹಾರ ಅಥವಾ ಹಳೆಯ ಆಹಾರದ ವಾಸನೆ ಇದ್ದಲ್ಲಿ, ನೀರಿನ ಜೊತೆ ಬೇಕಿಂಗ್ ಸೋಡಾ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಇಟ್ಟು ಬಿಸಿನೀರಿನಿಂದ ತೊಳೆದರೆ ಕೆಟ್ಟ ವಾಸನೆಯು ಹೋಗುತ್ತದೆ.
* ನಿಂಬೆಹಣ್ಣಿನ ಸಿಪ್ಪೆ: ಮಿಕ್ಸಿ ಜಾರಿಗೆ ನಿಂಬೆಹಣ್ಣಿನ ಸಿಪ್ಪೆಯೊಂದಿಗೆ ನೀರು ಹಾಕಿ ಗ್ರೈಂಡ್ ಮಾಡಿಕೊಂಡು ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ತೊಳೆದರೆ ಮಿಕ್ಸಿಯಲ್ಲಿರುವ ಕೆಟ್ಟ ವಾಸನೆಯು ಇಲ್ಲವಾಗುತ್ತದೆ.
ಇದನ್ನೂ ಓದಿ: ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ
* ವಿನೆಗರ್: ಒಂದು ಲೋಟ ನೀರಿಗೆ ಎರಡು ಚಮಚ ವಿನೆಗರನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ಸಮಯದ ಬಳಿಕ ತೊಳೆಯುವುದರಿಂದ ಮಿಕ್ಸಿ ಜಾರು ಸ್ವಚ್ಛವಾಗುವುದಲ್ಲದೆ, ಕೆಟ್ಟ ವಾಸನೆಯು ಮಾಯವಾಗುತ್ತದೆ
* ಆಲ್ಕೋಹಾಲ್: ಆಲ್ಕೋಹಾಲನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಉಳಿದ ಆಹಾರ ಪದಾರ್ಥಗಳು ಹಾಗೂ ವಾಸನೆಯು ಇಲ್ಲದಂತಾಗುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Thu, 16 May 24