Mango Lassi: ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ
ಬಿಸಿಲಿನ ಬೇಗೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಜ್ಯೂಸ್‌ಗಳಲ್ಲಿ ರುಚಿಕರವಾದ ಮ್ಯಾಂಗೋ ಲಸ್ಸಿ ಕೂಡಾ ಒಂದು. ಇದು ಹಲವಾರು ರೀತಿಯ ಪೌಷ್ಟಿಕ ಸತ್ವಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಒಳ್ಳೆಯದು. ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಹಣ್ಣುಗಳ ರಾಜ ಮಾವಿನ ಹಣ್ಣು, ಇದು ಹಲವಾರು ರೀತಿಯ ಪೌಷ್ಟಿಕ ಸತ್ವಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಒಳ್ಳೆಯದು. ಈಗ ಮಾವಿನ ಸೀಸನ್ ಆಗಿರುವುದರಿಂದ ಸುಲಭವಾಗಿ ಮಾವಿನ ಹಣ್ಣು ಲಭ್ಯವಿದೆ. ಆದ್ದರಿಂದ ಮನೆಯಲ್ಲೇ ಸುಲಭ ವಿಧಾನದ ಮೂಲಕ ಮಾವಿನ ಲಸ್ಸಿ ತಯಾರಿಸಿ ಕುಡಿಯಿರಿ. ಬಿಸಿಲಿನ ಬೇಗೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಜ್ಯೂಸ್‌ಗಳಲ್ಲಿ ರುಚಿಕರವಾದ ಮ್ಯಾಂಗೋ ಲಸ್ಸಿ ಕೂಡಾ ಒಂದು. ನೀವು ಮಧುಮೇಹಿಗಳಾಗಿದ್ದಲ್ಲಿ ನೀವು ಸಕ್ಕರೆಯನ್ನು ಬಳಕೆ ಮಾಡದೆ ಕೂಡಾ ಲಸ್ಸಿಯನ್ನು ತಯಾರಿಸಬಹುದಾಗಿದೆ.
ಮನೆಯಲ್ಲಿ ಮಾವಿನ ಹಣ್ಣಿನ ಲಸ್ಸಿ ಮಾಡುವ ಸುಲಭ ವಿಧಾನ:
ಈ ಲಸ್ಸಿಯನ್ನು ಮಾಡಲು, ಮಾವಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಅದನ್ನು ಮಿಕ್ಸರ್ ಜಾರ್‌ನಲ್ಲಿ ಸೇರಿಸಿ ಮತ್ತು ಅದಕ್ಕೆ ಮೊಸರು, ಹಾಲು ಮತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ . ಈಗ ಇದನ್ನು ಒಂದು ಗ್ಲಾಸಿಗೆ ಜಾಕಿ ಫ್ರಿಡ್ಜ್ನಲ್ಲಿ ಇರಿಸಿ. ಬಳಿಕ ಸ್ಪಲ್ಪ ಹೊತ್ತಿನ ನಂತರ ಕುಡಿಯಿರಿ. ಇಲ್ಲದಿದ್ದರೆ ಹಾಗೆಯೂ ಕುಡಿಯಬಹುದು.
ಇದನ್ನೂ ಓದಿ: ಚಹಾದ ಜೊತೆ ರಸ್ಕ್ ತಿನ್ನುತ್ತೀರಾ? ಅದರ ತೊಂದರೆ ಬಗ್ಗೆಯೂ ತಿಳಿದಿರಲಿ
ಮಾವಿನ ಹಣ್ಣಿನ ಲಸ್ಸಿ ಜೀವಸತ್ವಗಳು ಮತ್ತು ಇತರ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದರಲ್ಲಿಮೊಸರನ್ನು ಬಳಸಲಾಗುವುದರಿಂದ ಹೊಟ್ಟೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ನೀವು ದಿನನಿತ್ಯ ಮಾವು ಲಸ್ಸಿಯನ್ನು ಕುಡಿಯುತ್ತಿದ್ದರೆ, ಅದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನಿಯಮಿತವಾಗಿ ಕುಡಿಯಿರಿ. ಇದಲ್ಲದೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಮಾವಿನ ಹಣ್ಣಿನ ಲಸ್ಸಿ ಸೇವಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ