ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ರಾಮಮಂದಿರದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಾರಾಷ್ಟ್ರದ ರಾಮಭಕ್ತ ಶ್ರೀ ವಿನಾಯಕ ಸೇಠ್ ಭಾಲಚಂದ್ರ ಕಂಚಿ ಕುಟುಂಬದವರು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ಆರತಿ ಪೂಜೆಯ ನಂತರ ಮೊದಲ ನೈವೇದ್ಯವಾಗಿ ಬಾಲರಾಮನಿಗೆ ಮಾವಿನ ಹಣ್ಣನ್ನು ಅರ್ಪಿಸಲಾಯಿತು.