- Kannada News Photo gallery Akshay Tritiya, Prabhu Shri Ramlalla Sarkar has been offered the bhog of mangoes
ಅಕ್ಷಯ ತೃತೀಯ; 11000 ಮಾವಿನ ಹಣ್ಣುಗಳಿಂದ ಅಯೋಧ್ಯಾ ರಾಮನಿಗೆ ಅಲಂಕಾರ
ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ರಾಮಮಂದಿರದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಾರಾಷ್ಟ್ರದ ರಾಮಭಕ್ತ ಶ್ರೀ ವಿನಾಯಕ ಸೇಠ್ ಭಾಲಚಂದ್ರ ಕಂಚಿ ಕುಟುಂಬದವರು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ಆರತಿ ಪೂಜೆಯ ನಂತರ ಮೊದಲ ನೈವೇದ್ಯವಾಗಿ ಬಾಲರಾಮನಿಗೆ ಮಾವಿನ ಹಣ್ಣನ್ನು ಅರ್ಪಿಸಲಾಯಿತು.
Updated on: May 11, 2024 | 6:32 PM

ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ರಾಮಮಂದಿರದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

11000 ಮಾವಿನ ಹಣ್ಣುಗಳಿಂದ ಅಯೋಧ್ಯಾ ರಾಮನನ್ನು ಅಲಂಕರಿಸಿದ ಸುಂದರ ಕ್ಷಣದ ಫೋಟೋಗಳನ್ನು ಅಯೋಧ್ಯಾ ರಾಮಮಂದಿರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ದೇವಾಲಯದ ಆವರಣವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದರೆ, ಗರ್ಭಗುಡಿಯ ಮುಖ್ಯದ್ವಾರದಲ್ಲಿ ಹಣ್ಣುಗಳ ಮಾಲೆಗಳು ದೇವಾಲಯದ ವೈಭವವನ್ನು ಹೆಚ್ಚಿಸಿದವು.

ಪುಣೆಯಿಂದ ಅಯೋಧ್ಯೆ ರಾಮಮಂದಿರಕ್ಕೆ 11000 ಅಲ್ಫಾನ್ಸೋ ಮಾವಿನ ಹಣ್ಣುಗಳ ಬುಟ್ಟಿಗಳನ್ನು ಕಳುಹಿಸಲಾಗಿತ್ತು.

ಅಕ್ಷಯ ತೃತೀಯದ ಅಂಗವಾಗಿ ಅಯೋಧ್ಯಾ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಈ ಋತುವಿನಲ್ಲಿ ಬೆಳೆದ ಮೊದಲ ಹಣ್ಣಿನಿಂದ ಗರ್ಭಗುಡಿಯನ್ನು ಅಲಂಕರಿಸಲಾಯಿತು.

ಮಹಾರಾಷ್ಟ್ರದ ರಾಮಭಕ್ತ ಶ್ರೀ ವಿನಾಯಕ ಸೇಠ್ ಭಾಲಚಂದ್ರ ಕಂಚಿ ಕುಟುಂಬದವರು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ರಾಮಲಲ್ಲ ಆರತಿ ಪೂಜೆಯ ನಂತರ ಮೊದಲ ನೈವೇದ್ಯವಾಗಿ ಮಾವಿನ ಹಣ್ಣನ್ನು ಅರ್ಪಿಸಲಾಯಿತು.




