ಬಯಲು ಪ್ರದೇಶಗಳಲ್ಲಿ ಬಿಸಿಲಿನ ದಗೆ ಏರುತ್ತಿದ್ದಂತೆ, ಪ್ರವಾಸಿಗರು ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಏಕೆಂದರೆ ಅಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ಧರ್ಮ ಶಾಲಾದಲ್ಲಿ 8.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಪ್ರವಾಸದ ಜೊತೆ ಜೊತೆಗೆ ಬೌದ್ಧ ಧರ್ಮದ ಬಗ್ಗೆ ಆಸಕ್ತಿ ಇರುವವರು ಅದನ್ನು ಕಲಿಯುವ ಸಲುವಾಗಿ ಸಾಕಷ್ಟು ಮಂದಿ ಧರ್ಮಶಾಲಾಕ್ಕೆ ಬರುತ್ತಾರೆ. ನಿಮಗೆ ತಿಳಿದಂತೆ ಈ ನಗರವು ದಲೈ ಲಾಮಾ ಮತ್ತು ಟಿಬೆಟಿಯನ್ ಸರ್ಕಾರದ ನೆಲೆಯಾಗಿದೆ.
ದೆಹಲಿಯಿಂದ ಬಂದ ರಾಘವ್ ಎಂಬ ಪ್ರವಾಸಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು “ಇತ್ತೀಚೆಗೆ ಹವಾಮಾನವು ಸಾಕಷ್ಟು ಹೆಚ್ಚಾಗಿದೆ. ನಾವು ಬಿಸಿಯಾಗಿರುವ ಬಯಲು ಪ್ರದೇಶಗಳಿಂದ ಇಲ್ಲಿಗೆ ಬಂದಿದ್ದೇವೆ. ಆದ್ದರಿಂದ ನಾವು ಹಿಮಾಚಲ ಪ್ರದೇಶದ ಬೆಟ್ಟಗಳನ್ನೂ ಹತ್ತುವಂತೆ ಯೋಜಿಸಿದ್ದೇವೆ. ಹಗಲಿನಲ್ಲಿ ತಾಪಮಾನವು ಸುಮಾರು 18 ಡಿಗ್ರಿಗಳಷ್ಟಿದ್ದರೆ, ರಾಜಸ್ಥಾನ ಅಥವಾ ಇತರ ಕೆಲವು ಪ್ರದೇಶಗಳಲ್ಲಿ ಇದು 40 ಡಿಗ್ರಿಗಳಿಗಿಂತ ಹೆಚ್ಚಾಗಿರುವುದರಿಂದ ನಾವು ಇಲ್ಲಿಯೇ ಆನಂದಿಸಲು ಬಂದಿದ್ದೇವೆ” ಎಂದಿದ್ದಾರೆ. ಜೊತೆಗೆ “ಬೌದ್ಧ ಧರ್ಮದ ಬಗ್ಗೆ ತಿಳಿದುಕೊಳ್ಳಲು ಅಲ್ಲಿನ ಮಠಗಳಿಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ” ಎಂದು ರಾಘವ್ ಹೇಳಿದ್ದು. “ಪ್ರವಾಸದ ಜೊತೆ ಜೊತೆಗೆ ಬೌದ್ಧರ ಬಗೆಗಿನ ಹಲವು ಆಸಕ್ತಿ ದಾಯಕ ವಿಷಯಗಳನ್ನು ತಿಳಿದುಕೊಳ್ಳುವುದು ನಮ್ಮ ಹಂಬಲವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: Tips for Flight Travel: ವಿಮಾನ ಪ್ರಯಾಣದಲ್ಲಿ ಆರಾಮದಾಯಕ, ಆಕರ್ಷಕವಾಗಿ ಕಾಣಲು ಇಲ್ಲಿದೆ ಐಡಿಯಾಗಳು!
ಮತ್ತೊಬ್ಬ ಪ್ರವಾಸಿ ಸೂರಜ್ ಎನ್ನುವವರು, “ನಾವು ಇಲ್ಲಿನ ಹವಾಮಾನವನ್ನು ಆನಂದಿಸಲು ಬಂದಿದ್ದೇವೆ. ನಮ್ಮಂತೆ ಈ ಸೌಂದರ್ಯವನ್ನು ಅನುಭವಿಸುವ ಉದ್ದೇಶವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ಜನರು ಇಲ್ಲಿಗೆ ಬರುತ್ತಿದ್ದಾರೆ” ಎಂದು ಹೇಳಿದ್ದಾರೆ. “ನಾನು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದೇನೆ” ಎಂದು ವಿದೇಶಿ ಪ್ರವಾಸಿಗರೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಮೆರಿಕದ ಡೇನಿಯಲ್ ಬರ್ಗರ್ ಎನ್ನುವವರು, “ನಾನು ದಲೈ ಲಾಮಾ ಅವರನ್ನು ಭೇಟಿ ಮಾಡಲು ಮತ್ತು ಟಿಬೆಟಿಯನ್ ಬೌದ್ಧ ಧರ್ಮದ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಹವಾಮಾನ ಅನುಭವಿಸಲು ಸಾಕಷ್ಟು ಜನರು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಇದೊಂದು ಒಳ್ಳೆಯ ಸಮಯ. ಆದರೆ ಕೆಲವರು ಟಿಬೆಟಿಯನ್ ಬೌದ್ಧಧರ್ಮದ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಇದು ಮತ್ತು ಒಳ್ಳೆಯ ವಿಷಯ” ಎಂದರು
ಹವಾಮಾನ ಕೇಂದ್ರದ ಪ್ರಕಾರ ಶಿಮ್ಲಾ ಮತ್ತು ಭುಂಟರ್ ನಲ್ಲಿ ಕಳೆದ 30 ವರ್ಷಗಳಲ್ಲಿ ಈ ವರ್ಷ ಅತೀ ಹೆಚ್ಚು ಮಳೆಯಾಗಿದೆ. ಮೇ ತಿಂಗಳಲ್ಲಿ, ಸೋಲನ್ ಮತ್ತು ಕಾಂಗ್ರಾದಲ್ಲಿ ಕ್ರಮವಾಗಿ 157.3 ಮಿ.ಮೀ ಮತ್ತು 189.8 ಮಿ.ಮೀ ಮಾಸಿಕ ಮಳೆಯಾಗಿದೆ, ಮತ್ತು ಧರ್ಮಶಾಲಾದಲ್ಲಿ ಕನಿಷ್ಠ ತಾಪಮಾನ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದಲ್ಲದೆ ಶಿಮ್ಲಾ ಮತ್ತು ಭುಂಟರ್ ಅತೀ ಹೆಚ್ಚು ಮಳೆಯನ್ನು ದಾಖಲಿಸಿದೆ ಎಂದು ಹವಾಮಾನ ಕೇಂದ್ರ ಶಿಮ್ಲಾ ಟ್ವೀಟ್ ಮಾಡಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: