ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ. ಈಗಲೂ ಕೂಡ ಮಲೆನಾಡಿನ ಕಡೆಗಳ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಕಟ್ಟಿಗೆಯ ಒಲೆಯ ಮೇಲೆ ಮಡಿಕೆಯನ್ನು ತಲೆಕೆಳಗಾಗಿ ಇಟ್ಟು ಅಂದರೆ ಅದಕ್ಕೆ ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ. ಈ ರೀತಿಯಾಗಿ ಖಾದ್ಯವನ್ನು ತಯಾರಿಸಲಾಗುತ್ತದೆ. ಸಾಗರ, ಯಲ್ಲಾಪುರ, ಶಿರಸಿ, ಸಿದ್ಧಾಪುರ, ಗೋಕರ್ಣಾ, ಕುಮುಟಾ ಸುತ್ತಮುತ್ತಲಲ್ಲಿ ಈ ತಿಂಡಿ ಭಾರೀ ಜನಪ್ರಿಯತೆಯನ್ನು ಹೊಂದಿದೆ. ಇತ್ತೀಚೆಗಷ್ಟೇ ಗರಿ ಗರಿಯಾದ ತೊಡೆದೇವು ಮಾಡುವ ವಿಧಾನವನ್ನು ಗಗನ್ ಶರ್ಮರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಇಲ್ಲಿದೆ.
ಮೊದಲಿಗೆ ಅಕ್ಕಿಯನ್ನು ಮುಂಚಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಿ. ಮರುದಿನ ಅಕ್ಕಿಯನ್ನು ಚೆನ್ನಾಗಿ ತೊಳೆದಿಡಿ. ನಂತರ ನೆನೆಸಿಟ್ಟ ಅಕ್ಕಿ , ಜೋನಿ ಬೆಲ್ಲ, ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಹಿಟ್ಟು ಸಿದ್ಧವಾಗಿದೆ.
ನಂತರ ಒಲೆ ಮೇಲೆ ಒಂದು ಮಡಕೆಯನ್ನು ತಲೆಕೆಳಗಾಗಿ ಇಟ್ಟುಕೊಂಡು, ಇದನ್ನು ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ. ನಂತರ ಒಂದು ಸಣ್ಣ ಕೋಲಿಗೆ ಕಾಟನ್ ಬಟ್ಟೆಯನ್ನು ಸುತ್ತಿ ರುಬ್ಬಿದ ಹಿಟ್ಟಿನಲ್ಲಿ ಅದ್ದಿ, ಒಲೆಯ ಮೇಲಿಟ್ಟ ಕಾದ ಮಡಿಕೆಯ ಮೇಲೆ ತುಂಬಾ ತೆಳ್ಳಗೆ ಹಚ್ಚಿ. ಇದು ಬೇಯಲು ಸಮಯ ಬೇಡ. ಒಂದೇ ಕ್ಷಣದಲ್ಲಿ ಇದು ಬೆಂದು ಹೋಗುತ್ತದೆ. ನಂತರ ಇದನ್ನು ನಾಜೂಕಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಡಚಿಡಿ.
ನಂತರ ಒಲೆಯಿಂದ ಕೆಳಗಿಳಿಸಿ ಕೆಲವು ನಿಮಿಷಗಳ ವರೆಗೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಗಾಳಿಯಾಡದ ಕವರ್ ಒಳಗಡೆ ಶೇಖರಿಸಿಡಿ. ಇದು 15 ರಿಂದ 20 ದಿನಗಳ ವರೆಗೆ ಹಾಳಾಗದೇ ಹಾಗೆಯೇ ಉಳಿದು ಬಿಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ: