AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವೇಕೆ ಆಗಾಗ ದಂತ ತಪಾಸಣೆ ಮಾಡಿಸಿಕೊಳ್ಳಬೇಕು?

ಚೆಕಪ್​ಗೆ ಹೋದಾಗ ನಿಮ್ಮ ದಂತವೈದ್ಯರು ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಲು ವಿವಿಧ ವಿಧಾನಗಳ ಬಗ್ಗೆ ನಿಮಗೆ ತಿಳಿಸಬಹುದು. ಇದರಿಂದ ನಿಮ್ಮ ಹಲ್ಲುಗಳ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಲು ಸಹಾಯಕವಾಗುತ್ತದೆ.

ನಾವೇಕೆ ಆಗಾಗ ದಂತ ತಪಾಸಣೆ ಮಾಡಿಸಿಕೊಳ್ಳಬೇಕು?
ಹಲ್ಲುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 19, 2024 | 4:59 PM

ನಮ್ಮ ಕೆಲವೊಂದು ಅಭ್ಯಾಸಗಳು ಬಾಯಿಯ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ದಿನಕ್ಕೆ 2 ಬಾರಿ ಹಲ್ಲುಗಳನ್ನು ಉಜ್ಜದೇ ಇರುವುದು, ಸರಿಯಾಗಿ ನೀರು ಕುಡಿಯದಿರುವುದು, ಆಹಾರ ಸೇವಿಸಿದ ಬಳಿಕ ಬಾಯಿ ತೊಳೆಯದಿರುವುದು, ಹಲ್ಲು ಹುಳುಕಾದರೂ ಚಿಕಿತ್ಸೆ ಪಡೆಯದಿರುವುದು ಹೀಗೆ ನಮ್ಮ ಕೆಲವು ನಿರ್ಲಕ್ಷ್ಯದಿಂದ ಬಾಯಿಯ ಆರೋಗ್ಯ ಕೆಡುತ್ತದೆ. ನಿಯಮಿತವಾಗಿ ಆಗಾಗ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಿಯಮಿತ ಹಲ್ಲಿನ ತಪಾಸಣೆಗಳು ನಿಮ್ಮ ಒಸಡುಗಳಲ್ಲಿನ ಎಲ್ಲ ರೀತಿಯ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚಲು ಮತ್ತು ಸೂಕ್ತವಾಗಿ ತಡೆಗಟ್ಟಲು ಅನುಕೂಲ ಮಾಡಿಕೊಡುತ್ತದೆ. ಚೆಕಪ್​ಗೆ ಹೋದಾಗ ನಿಮ್ಮ ದಂತವೈದ್ಯರು ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಲು ವಿವಿಧ ವಿಧಾನಗಳ ಬಗ್ಗೆ ನಿಮಗೆ ತಿಳಿಸಬಹುದು. ಇದರಿಂದ ನಿಮ್ಮ ಹಲ್ಲುಗಳ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಹಲ್ಲು ಉಜ್ಜುವುದರಿಂದ ಏನು ಪ್ರಯೋಜನ?

ನಿಮ್ಮ ಹಲ್ಲಿನ ಆರೈಕೆಯನ್ನು ಅತ್ಯುತ್ತಮವಾಗಿಸಲು ವೈಯಕ್ತಿಕಗೊಳಿಸಿದ ಸಲಹೆಯನ್ನು ಪಡೆಯಲು ದಂತ ತಪಾಸಣೆಯು ಒಂದು ಪರಿಪೂರ್ಣ ಅವಕಾಶವಾಗಿದೆ. ನಿಮ್ಮ ಹಲ್ಲುಗಳಲ್ಲಿನ ಎಲ್ಲ ರೀತಿಯ ಸಮಸ್ಯೆಗಳಿಗೂ ತಪಾಸಣೆಯಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಬಹುದು. ನಿಯಮಿತವಾಗಿ ಹಲ್ಲಿನ ಪರೀಕ್ಷೆಗಳನ್ನು ನೀವು ತಪ್ಪಿಸಿಕೊಳ್ಳಬಾರದು. ಏಕೆಂದರೆ ಅವುಗಳು ಹೆಚ್ಚಿದ ನೋವಿಗೆ ಕಾರಣವಾಗಬಹುದು.

ಹಲ್ಲು ನೋವು ಬಹಳ ಸಮಯ ಇದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಮನೆಮದ್ದುಗಳಿಂದಲೂ ಕಡಿಮೆ ಆಗದಿದ್ದರೆ ಆ ನೋವಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬೇಡಿ. ಇದು ಗಂಭೀರವಾದ ಹಲ್ಲಿನ ಸಮಸ್ಯೆಗಳನ್ನು ತಡೆದು, ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಕೂಡ ಉಳಿಸುತ್ತದೆ.

ಇದನ್ನೂ ಓದಿ: ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಮನೆಯಲ್ಲೇ ಇದೆ 8 ಸುಲಭ ಮಾರ್ಗ

ನೀವು ದಂತ ತಪಾಸಣೆಗೆ ಹೋದ ಸಮಯದಲ್ಲಿ, ನಿಮ್ಮ ಒಸಡುಗಳನ್ನು ವೃತ್ತಿಪರವಾಗಿ ಪ್ಲೇಕ್ ಸಹಾಯದಿಂದ ಸ್ವಚ್ಛಗೊಳಿಸಲಾಗುತ್ತದೆ. ಇದರಿಂದ ನಿಮ್ಮ ಹಲ್ಲುಗಳಲ್ಲಿರುವ ಕಲ್ಮಶ ದೂರವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ