Updated on: Jan 17, 2024 | 2:16 PM
ಹಲ್ಲುಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವುದು, ಹಲ್ಲುಗಳ ಮೇಲೆ ಕಲೆ ಮೂಡುವುದು ಸಾಮಾನ್ಯ.
ಆದರೆ, ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಬಿಳಿಯಾದ, ಹೊಳೆಯುವ ಹಲ್ಲುಗಳನ್ನು ಪಡೆಯಲು 8 ಸುಲಭ ಮಾರ್ಗಗಳು ಇಲ್ಲಿವೆ.
ಅಡಿಗೆ ಸೋಡಾ ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳಿ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಇದು ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.
ಪೈನಾಪಲ್ ಹಣ್ಣುಗಳನ್ನು ಹಸಿಯಾಗಿಯೇ ತಿನ್ನುವುದರಿಂದ ಹಲ್ಲುಗಳು ನೈಸರ್ಗಿಕವಾಗಿ ಸ್ವಚ್ಛಗೊಂಡು, ಬಿಳಿಯಾಗಿ ಹೊಳೆಯುತ್ತದೆ. ಸಿಟ್ರಸ್ ಹಣ್ಣಾದ ಪೈನಾಪಲ್ ಬ್ರೊಮೆಲೈನ್ ಅಂಶವನ್ನು ಹೊಂದಿರುತ್ತದೆ. ಇದು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುವ ಕಿಣ್ವವಾಗಿದೆ.
ಆಯಿಲ್ ಪುಲ್ಲಿಂಗ್ ಒಂದು ಸಾಂಪ್ರದಾಯಿಕ ಪರಿಹಾರವಾಗಿದ್ದು ಇದು ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಸ್ವಿಶ್ ಮಾಡುವುದರಿಂದ ಹಲ್ಲುಗಳು ಬಿಳಿಯಾಗುತ್ತದೆ.
ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆಚ್ಚಗಿನ ನೀರಿಗೆ ಹಾಕಿಕೊಂಡು ನೈಸರ್ಗಿಕ ಮೌತ್ವಾಶ್ ಆಗಿ ಬಳಸಬಹುದು. ಆದರೆ, ಇದು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುವುದರಿಂದ, ಇದನ್ನು ನೇರವಾಗಿ ಹಲ್ಲಿಗೆ ಹಚ್ಚಬೇಡಿ. ನೀರು ಬೆರೆಸಿದ ನಂತರವೇ ಹಲ್ಲಿಗೆ ಹಚ್ಚಿಕೊಳ್ಳಿ.
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ನಿಮ್ಮ ಬಾಯಿಯ ಆರೋಗ್ಯವನ್ನು ಅತ್ಯುತ್ತಮವಾಗಿಟ್ಟು, ಹಲ್ಲುಗಳನ್ನು ಬಿಳಿಯಾಗಿಡಲು ಸಹಾಯ ಮಾಡುತ್ತದೆ. ನೀರು ನೈಸರ್ಗಿಕ ಕ್ಲೆನ್ಸರ್ ಆಗಿದೆ ಮತ್ತು ಊಟದ ನಂತರ ಅಥವಾ ತಿಂಡಿಗಳ ನಡುವೆ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡ ಆಹಾರವನ್ನು ಇದು ಕ್ಲೀನ್ ಮಾಡುತ್ತದೆ.
ಇದ್ದಿಲಿನಿಂದ ಹಲ್ಲುಜ್ಜುವುದರಿಂದ ಹಲ್ಲುಗಳನ್ನು ಬಿಳಿಯಾಗಿಸಬಹುದು. ಇದು ಹಲ್ಲಿನ ದಂತಕವಚವವನ್ನು ಹಾನಿಯನ್ನುಂಟುಮಾಡುವ ಸಾಧ್ಯತೆಯೂ ಇರುವುದರಿಂದ ಇದನ್ನು ಹೆಚ್ಚಾಗಿ ಬಳಸಬೇಡಿ.
ಒಂದು ಟೀಚಮಚ ಅಡಿಗೆ ಸೋಡಾದೊಂದಿಗೆ ಸ್ಟ್ರಾಬೆರಿಗಳನ್ನು ಬೆರೆಸಿಕೊಂಡು ಹಲ್ಲಿಗೆ ಹಚ್ಚುವುದರಿಂದ ನಿಮ್ಮ ಹಲ್ಲುಗಳನ್ನು ತ್ವರಿತವಾಗಿ ಬಿಳುಪಾಗುತ್ತದೆ. ಸ್ಟ್ರಾಬೆರಿಗಳು ಮಾಲಿಕ್ ಆಮ್ಲದಿಂದ ತುಂಬಿವೆ. ಇದು ಹಾನಿಕಾರಕ ರಾಸಾಯನಿಕಗಳನ್ನು ತೊಡೆದುಹಾಕುತ್ತದೆ.
ಸಾಸಿವೆ ಎಣ್ಣೆ, ಉಪ್ಪು ಮತ್ತು ಅರಿಶಿನ ಮಿಶ್ರಣವನ್ನು ನಿಯಮಿತವಾಗಿ ಬಳಸುವುದರಿಂದ ಹಲ್ಲುಗಳು ಬೆಳ್ಳಗಾಗಲು ಮತ್ತು ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.