AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೀಸ್​ನಲ್ಲಿ ಕೈಯಿಟ್ಟು ಓಡಿದ ರಿಝ್ವಾನ್: ನಗೆಪಾಟಲಿಗೀಡಾದ ಪಾಕ್ ಆಟಗಾರ..!

New Zealand vs Pakistan: ಈ ಪಂದ್ಯದಲ್ಲಿ ನ್ಯೂಝಿಲೆಂಡ್​ ನೀಡಿದ 225 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು 7 ವಿಕೆಟ್ ಕಳೆದುಕೊಂಡು 179 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನ್ಯೂಝಿಲೆಂಡ್ ತಂಡವು 45 ರನ್​ಗಳ ಭರ್ಜರಿ ಜಯ ಸಾಧಿಸಿದೆ.

TV9 Web
| Updated By: ಝಾಹಿರ್ ಯೂಸುಫ್|

Updated on: Jan 17, 2024 | 2:53 PM

Share
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ (Mohammad Rizwan) ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರ ಮಾಡಿದ ಎಡವಟ್ಟು.

1 / 6
ಡ್ಯುನೆಡಿನ್​ನ ಯೂನಿವರ್ಸಿಟಿ ಓವಲ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಾಕ್ ತಂಡದ ಪರ ಮೊಹಮ್ಮದ್ ರಿಝ್ವಾನ್ ಇನಿಂಗ್ಸ್ ಆರಂಭಿಸಿದ್ದರು.

2 / 6
ಅದರಂತೆ ಪಾಕ್ ಇನಿಂಗ್ಸ್​ನ 6ನೇ ಓವರ್​ನಲ್ಲಿ ರನ್ ಓಡುವ ಯತ್ನದಲ್ಲಿದ್ದ ರಿಝ್ವಾನ್ ಅವರ ಕೈಯಿಂದ ಬ್ಯಾಟ್ ಕೆಳಗೆ ಬಿದ್ದಿದೆ. ಆದಾಗ್ಯೂ, ಅವರು ತಮ್ಮ ಕೈಯನ್ನು ಕ್ರೀಸ್​ನಲ್ಲಿಟ್ಟು ಎರಡನೇ ರನ್ ಓಡಿದ್ದಾರೆ.

3 / 6
ಆದರೆ ಮೊಹಮ್ಮದ್ ರಿಝ್ವಾನ್ ಅವರ ಗ್ಲೌಸ್‌ಗಳು ನಾನ್‌ಸ್ಟ್ರೈಕರ್‌ನ ತುದಿಯಲ್ಲಿನ ಕ್ರೀಸ್‌ಗೆ ತಾಗಿರಲಿಲ್ಲ. ಹೀಗಾಗಿ ರನ್ ಕಡಿತ ಮಾಡಲಾಯಿತು. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

4 / 6
ಇಲ್ಲಿ ಬ್ಯಾಟ್​ ಇಲ್ಲದಿದ್ದರೂ ಮೊಹಮ್ಮದ್ ರಿಝ್ವಾನ್ ಕೈಯಿಂದ ಕ್ರೀಸ್​ ಮುಟ್ಟಲು ಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ. ಅಂದರೆ ಅವರು ನೇರವಾಗಿ ಓಡಿ ಬಂದು ಕಾಲಿಂದಲೇ ಕ್ರೀಸ್ ಟಚ್ ಮಾಡಿ ಓಡಿದ್ದರೂ ಒಂದು ರನ್ ಸಿಗುತ್ತಿತ್ತು. ಆದರೆ ರಿಝ್ವಾನ್ ಮೈ ಬಗ್ಗಿಸಿ ಕೈಯಿಂದಲೇ ಕ್ರೀಸ್ ಮುಟ್ಟಲು ಯತ್ನಿಸಿರುವುದು ಅಚ್ಚರಿಯೇ ಸರಿ.

5 / 6
ಇಂತಹದೊಂದು ಎಡವಟ್ಟು ಮಾಡಿರುವ ಮೊಹಮ್ಮದ್ ರಿಝ್ವಾನ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇನ್ನು ಈ ಪಂದ್ಯದಲ್ಲಿ ನ್ಯೂಝಿಲೆಂಡ್​ ನೀಡಿದ 225 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು 7 ವಿಕೆಟ್ ಕಳೆದುಕೊಂಡು 179 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನ್ಯೂಝಿಲೆಂಡ್ ತಂಡವು 45 ರನ್​ಗಳ ಭರ್ಜರಿ ಜಯ ಸಾಧಿಸಿದೆ.

6 / 6