ಕೆಲವೊಮ್ಮೆ ಬಿಕ್ಕಳಿಕೆ (Hiccups) ನಿಮ್ಮನ್ನು ಪಚೀತಿಗೀಡು ಮಾಡುವುದಂತೂ ನಿಜ. ಹೌದು ಕೆಲವೊಮ್ಮೆ ಬಿಕ್ಕಳಿಗೆ ಪ್ರಾರಂಭವಾದರೆ, ಎಷ್ಟೇ ನೀರು ಕುಡಿದರೂ ಕಡಿಮೆಯೇ ಆಗುವುದಿಲ್ಲ. ನೀವೂ ಕೂಡ ಒಂದಲ್ಲ ಒಂದು ಸಲವಾದರೂ ಇಂತಹ ಸಮಸ್ಯೆಯನ್ನು ಅನುಭವಿಸಿರಬಹುದು. ಆದ್ದರಿಂದ ಇನ್ನು ಮುಂದೆ ಬಿಕ್ಕಳಿಗೆಯನ್ನು ತಕ್ಷಣ ನಿಲ್ಲಿಸಲು ಈ ಸುಲಭ ಟಿಪ್ಸ್ ಪ್ರಯತ್ನಿಸಿ ನೋಡಿ.
1. ಸಕ್ಕರೆ:
ನಿಮಗೆ ಬಿಕ್ಕಳಿಕೆ ಬಂದಾಗ ತಕ್ಷಣ ಬಿಕ್ಕಳಿಗೆ ನಿಲ್ಲಿಸಲು ಸಕ್ಕರೆ ಒಂದು ಉತ್ತಮ ಪರಿಹಾರವಾಗಿದೆ. ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿ ಹಾಗೆಯೇ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ . ನೀವು ಈ ತರ ಮಾಡುವುದರಿಂದ ತಕ್ಷಣ ಬಿಕ್ಕಳಿಕೆಯಿಂದ ಮುಕ್ತಿ ಪಡೆಯಬಹುದಾಗಿದೆ.
2. ಜೇನು ತುಪ್ಪ:
ನಿಮಗೆ ತಕ್ಷಣ ಬಿಕ್ಕಳಿಕೆ ನಿಲ್ಲಿಸಲು ಇನ್ನೊಂದು ಸುಲಭವೆಂದರೆ ಜೇನು ತುಪ್ಪ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ತುಪ್ಪ ಹಾಕಿ, ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ನೀವು ಹೀಗೆ ಮಾಡುವುದರಿಂದ ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಬಹುದು.
3. ಲಿಂಬೆ ರಸ:
ನಿಮಗೆ ಬಿಕ್ಕಳಿಕೆ ಬಂದಾಗ ತಕ್ಷಣ ಬಿಕ್ಕಳಿಗೆ ನಿಲ್ಲಿಸಲು ಲಿಂಬೆ ರಸ ಒಂದು ಉತ್ತಮ ಆಯ್ಕೆಯಾಗಿದೆ. ನೀವೂ ಸಾಮಾನ್ಯವಾಗಿ ಬಿಕ್ಕಳಿಕೆ ಬಂದಾಗ ನೀರು ಕುಡಿಯುತ್ತಿರಿ, ಆದರೆ ಇನ್ನು ಮುಂದೆ ನೀರಿಗೆ ಸ್ವಲ್ಪ ಲಿಂಬೆಯ ರಸವನ್ನು ಬೆರೆಸಿ ಕುಡಿಯಿರಿ. ಇದು ತಕ್ಷಣ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಕಾರಿಯಾಗಿದೆ. ಇದರ ಹುಳಿಯಾದ ರುಚಿ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಿ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಇದನ್ನುಓದಿ: ರಾತ್ರಿ ವೇಳೆ ಒದ್ದೆ ಕೂದಲಿನೊಂದಿಗೆ ಎಂದಿಗೂ ಮಲಗಬೇಡಿ
4. ಐಸ್ ವಾಟರ್:
ಐಸ್ ವಾಟರ್ ತಕ್ಷಣ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಕಾರಿಯಾಗಿದೆ. ಬಿಕ್ಕಳಿಗೆ ಬಂದಂತಹ ಸಮಯದಲ್ಲಿ ಒಂದು ಲೋಟ ತಂಪಗಿರುವ ನೀರನ್ನು ಕುಡಿಯುವುದರಿಂದ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಬಿಕ್ಕಳಿಕೆಯ ಕಡಿಮೆಯಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:26 pm, Sat, 3 December 22