AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಕೆಲಸ ಏನಿದ್ರೂ ಮನೆಯವ್ರಿಗೆ ಅಂದ್ರೆ ಪತ್ನಿಗೆ ಸೀಮಿತ ಅನ್ನೋ ಪತಿಯಾ ನೀವು? ಹಾಗಾದರೆ ಇದನ್ನೊಮ್ಮೆ ಓದಿಕೊಳ್ಳಿ!

ಗಂಡ ತನ್ನ ಕಷ್ಟಗಳಿಗೆ ಹೆಗಲು ನೀಡುತ್ತಾನೆ ಎಂಬ ವಿಶ್ವಾಸ ಹೆಂಡತಿಗೆ ಮೂಡುತ್ತದೆ. ಇದು ಆತನ ಕುರಿತು ಆಕೆಯ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ. ಜೊತೆಗೆ ಪತಿ ತನ್ನ ಗುರಿ, ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂಬ ವಿಶ್ವಾಸವೂ ಮೂಡುತ್ತದೆ.

ಮನೆ ಕೆಲಸ ಏನಿದ್ರೂ ಮನೆಯವ್ರಿಗೆ ಅಂದ್ರೆ ಪತ್ನಿಗೆ ಸೀಮಿತ ಅನ್ನೋ ಪತಿಯಾ ನೀವು? ಹಾಗಾದರೆ ಇದನ್ನೊಮ್ಮೆ ಓದಿಕೊಳ್ಳಿ!
ಮನೆ ಕೆಲಸ ಏನಿದ್ರೂ ಪತ್ನಿಗೆ ಎಂಬಂತಹ ಪತಿ ನೀವಾ? ಹಾಗಾದರೆ ಇದನ್ನೊಮ್ಮೆ ಓದಿಕೊಳ್ಳಿ! Image Credit source: eagetutor.com
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 04, 2022 | 6:06 AM

ಮನೆಗೆಲಸ ಹೆಣ್ಣಿಗೆ (housewife) ಮಾತ್ರ ಎಂಬ ಭಾವನೆ ಕುಟುಂಬ, ಸಮಾಜದಲ್ಲಿ ಅನಾದಿಕಾದಿಂದಲೂ ನೆಲೆ ನಿಂತುಬಿಟ್ಟಿದೆ. ಆದರೆ, ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿದು ಸಂಸಾರ ಸಾಗಿಸಬೇಕಾದಂತಹ ಅನಿವಾರ್ಯತೆ ಇಂದಿನ ದಿನಮಾನಗಳಲ್ಲಿ ಪ್ರಚಲಿತದಲ್ಲಿದೆ. ಅಲ್ಲದೆ, ವಿಭಕ್ತ ಕುಟುಂಬವಿರುವ ಕಾರಣ ಗಂಡ-ಹೆಂಡತಿ (wife husband) ಪರಸ್ಪರ ಮನೆಗೆಲಸಗಳಲ್ಲಿ ನೆರವಾದರೆ ಮಾತ್ರ ದಾಂಪತ್ಯದಲ್ಲಿ ಅನುರಾಗ ಅರಳಲು ಸಾಧ್ಯ. ಇಂದಿನ ದಾಂಪತ್ಯಕ್ಕೆ ನಂಬಿಕೆಯ ಜೊತೆಗೆ ಮನೆಗೆಲಸಗಳನ್ನು (housekeeping) ಪರಸ್ಪರ ಹಂಚಿಕೊಂಡು ಮಾಡುವುದು ಕೂಡ ಅಗತ್ಯ.

ಆಕೆ ನೋಡಿ ಗಂಡನ ಕೈಯಲ್ಲಿ ಬಟ್ಟೆ ಒಣ ಹಾಕಿಸ್ತಾಳೆ, ಅವರ ಮನೆಯಲ್ಲಿ ಗಂಡನೇ ಅಡುಗೆ ಮಾಡೋದಂತೆ, ಕಸ ಎಸೆದು ಬರಲೂ ಗಂಡನೇ ಹೋಗ್ತಾನೆ… ಇಂಥ ಮಾತುಗಳು ಆಗಾಗ ನಿಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಇಂಥ ಮಾತುಗಳ ತಾತ್ಪಾರ್ಯವಿಷ್ಟೇ… ಈ ಎಲ್ಲ ಕೆಲಸಗಳನ್ನು ಹೆಣ್ಣೇ ಮಾಡಬೇಕು. ಒಂದು ವೇಳೆ ಗಂಡು ಈ ಕೆಲಸಗಳನ್ನು ಮಾಡಿದರೆ, ಆತನ ಹೆಂಡತಿ ತುಂಬಾ ಘಾಟಿ, ಗಂಡನ ಹತ್ರನೇ ಎಲ್ಲ ಕೆಲಸಗಳನ್ನು ಮಾಡಿಸುತ್ತಾಳೆ, ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ, ಅವನು ಅಮ್ಮಾವ್ರ ಗಂಡ… ಹೀಗೆ ನಾನಾ ಪದಪುಂಜಗಳನ್ನು ಪೋಣಿಸುತ್ತಾರೆ. ನಿಮ್ಮ ಮನೆಯಲ್ಲೇ ಗಮನಿಸಿ ನೋಡಿ, ನಿಮಗೆ ಕೈ ತುಂಬಾ ಕೆಲಸಗಳಿರುವಾಗ ಗಂಡನ ಬಳಿ ಮಗುವಿಗೆ ಊಟ ಮಾಡಿಸಲು ಹೇಳುತ್ತೀರಿ. ಅಲ್ಲೇ ಪಕ್ಕದಲ್ಲಿರುವ ಅತ್ತೆ ಅಥವಾ ಅಮ್ಮ ಆ ಕೂಡಲೇ ‘ಏನಮ್ಮಾ, ಗಂಡಸರಿಗೆ ಅದೆಲ್ಲ ತಿಳಿಯಲ್ಲ. ಅವರ ಹತ್ರ ಅಂಥ ಕೆಲಸಗಳನ್ನೆಲ್ಲ ಹೇಳಬಾರದು. ನೀನೇ ಮಾಡಿಸು, ಹೋಗು’ ಎಂದು ನಿಮಗೇ ಆ ಕೆಲಸ ಹಚ್ಚಿಬಿಡುತ್ತಾರೆ.

ಮನೆಗೆಲಸದಲ್ಲಿ ನೆರವಾಗಲು ಹಿಂಜರಿಕೆ ಏಕೆ?:

ಪತ್ನಿ ಉದ್ಯೋಗಕ್ಕೆ ಹೋಗಿ ಪತಿಯ ಜವಾಬ್ದಾರಿಗಳಿಗೆ ಹೆಗಲು ನೀಡುತ್ತಾಳೆ ಎಂದಾದ ಮೇಲೆ ಮನೆಗೆಲಸದಲ್ಲಿ ಆಕೆಗೆ ಪತಿ ನೆರವು ನೀಡುವುದರಲ್ಲಿ ತಪ್ಪೇನಿದೆ? ಮನೆಗೆಲಸ ಮಾಡಿದರೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆ ಬಹುತೇಕ ಗಂಡಂದಿರಲ್ಲಿರುತ್ತದೆ. ಈ ಕಾರಣಕ್ಕೇ ಹೆಚ್ಚಿನವರು ಪತ್ನಿ ಅದೆಷ್ಟೇ ಒದ್ದಾಟ ನಡೆಸುತ್ತಿದ್ದರೂ ಸುಮ್ಮನೆ ಟಿವಿ ಮುಂದೆಯೋ, ಇಲ್ಲ ಮೊಬೈಲ್ ಹಿಡಿದೋ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿರುತ್ತಾರೆ. ಆದರೆ, ನಿಮ್ಮ ಈ ವರ್ತನೆ ಪತ್ನಿಯ ಮನಸ್ಸಿನ ಮೇಲೆ ಎಂಥ ಪರಿಣಾಮವನ್ನುಂಟು ಮಾಡಬಲ್ಲದು ಎಂಬುದು ನಿಮಗೆ ಗೊತ್ತಾ? ಆಕೆಗೆ ನಿಮ್ಮ ಮೇಲೆ ಸಿಟ್ಟು ಬರಬಹುದು, ಆಕೆಯ ಬಗ್ಗೆ ನಿಮಗೆ ಕಾಳಜಿಯಿಲ್ಲ ಎಂಬ ಭಾವನೆ ಹುಟ್ಟಬಹುದು. ಇಂಥ ಭಾವನೆಗಳು ದಾಂಪತ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ಪತಿಯು ಮನೆಗೆಲಸಗಳಲ್ಲಿ ಪತ್ನಿಗೆ ನೆರವು ನೀಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇದರಿಂದ ಸಂಬಂಧದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಗೊತ್ತಾ?

  1.  ಪ್ರೀತಿ ಹೆಚ್ಚುತ್ತದೆ: ಗಂಡ ಮನೆಗೆಲಸಗಳಲ್ಲಿ ನೀಡುವ ನೆರವು ಪತ್ನಿಗೆ ಆತನೆಡೆಗಿನ ಪ್ರೀತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗಂಡ ತನ್ನನ್ನು ಎಷ್ಟು ಪ್ರೀತಿಸುತ್ತಾನೆ, ಎಷ್ಟು ಕಾಳಜಿ ವಹಿಸುತ್ತಾನೆ ಎಂಬುದು ಆಕೆಗೆ ಅರ್ಥವಾಗುತ್ತದೆ. ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ.
  2.  ಬಾಂಧವ್ಯ ಗಟ್ಟಿಗೊಳ್ಳುತ್ತದೆ: ಗಂಡ ತನ್ನ ಕಷ್ಟಗಳಿಗೆ ಹೆಗಲು ನೀಡುತ್ತಾನೆ ಎಂಬ ವಿಶ್ವಾಸ ಹೆಂಡತಿಗೆ ಮೂಡುತ್ತದೆ. ಇದು ಆತನ ಕುರಿತು ಆಕೆಯ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ. ಜೊತೆಗೆ ಪತಿ ತನ್ನ ಗುರಿ, ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂಬ ವಿಶ್ವಾಸವೂ ಮೂಡುತ್ತದೆ.
  3.  ತಪ್ಪು ತಿಳಿವಳಿಕೆ ತಗ್ಗುತ್ತದೆ: ಗಂಡನ ಕುರಿತು ಹೆಂಡತಿಗೆ ಅಥವಾ ಹೆಂಡತಿ ಕುರಿತು ಗಂಡನಿಗೆ ಒಂದಷ್ಟು ತಪ್ಪು ತಿಳಿವಳಿಕೆಗಳು ಇದ್ದೇಇರುತ್ತವೆ. ಕೆಲವೊಂದು ಸಂದರ್ಭ, ಘಟನೆಗಳಿಂದ ಈ ಭಾವನೆಗಳು ಮೂಡಿರಬಹುದು. ಆದರೆ, ಅಡುಗೆ, ಬಟ್ಟೆ ಒಣ ಹಾಕುವುದು ಸೇರಿದಂತೆ ಕೆಲವೊಂದು ಕೆಲಸಗಳನ್ನು ಜೊತೆ ಜೊತೆಯಾಗಿ ಮಾಡುವಾಗ ಇಬ್ಬರ ನಡುವಿನ ಹೊಂದಾಣಿಕೆ ಹೆಚ್ಚುತ್ತದೆ. ಇದರಿಂದ ಇಬ್ಬರ ನಡುವಿನ ತಪ್ಪು ತಿಳಿವಳಿಕೆಗಳು ದೂರವಾಗುವ ಸಾಧ್ಯತೆಯಿರುತ್ತದೆ.
  4.  ಭಾವನೆಗಳನ್ನು ಹಂಚಿಕೊಳ್ಳಲು ಸಮಯ: ಇಬ್ಬರೂ ಹಂಚಿಕೊಂಡು ಮಾಡುವುದರಿಂದ ಕೆಲಸಗಳು ಬೇಗ ಮುಗಿದು ಹೋಗುತ್ತವೆ. ಉಳಿದ ಸಮಯದಲ್ಲಿ ಇಬ್ಬರೂ ಜೊತೆಯಾಗಿ ಕುಳಿತು ಹರಟುವುದು, ಟಿವಿ ನೋಡುವುದು ಸೇರಿದಂತೆ ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಕಾರ್ಯದಲ್ಲಿ ನಿರತರಾಗಬಹುದು. ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಲು, ಭಾವನೆಗಳನ್ನು ಹಂಚಿಕೊಳ್ಳಲು ಸಮಯ ಸಿಗುತ್ತದೆ.
  5.  ಪರಸ್ಪರ ಗೌರವದ ಭಾವನೆ: ಇದರಿಂದ ಇಬ್ಬರ ನಡುವೆ ಪರಸ್ಪರ ಪ್ರೀತಿ, ಬಾಂಧವ್ಯ ಹೆಚ್ಚುವುದರ ಜೊತೆಗೆ ಗೌರವ ಭಾವನೆ ಕೂಡ ಮೂಡುತ್ತದೆ. ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಗೌರವಿಸಲು ಪ್ರಾರಂಭಿಸುತ್ತಾರೆ.
  6.  ಮನೆಗೆಲಸ ಏನಿದ್ದರೂ ಹೆಣ್ಣಿಗೆ ಸೀಮಿತ ಎಂಬ ಭಾವನೆಯಿದೆ. ಆದರೆ, ಹೊರಗೆ ದುಡಿದು ಕುಟುಂಬ ನಿರ್ವಹಣೆಗೆ ಪತಿಗೆ ಹೆಗಲು ನೀಡುವ ಪತ್ನಿಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಗಂಡಿನ ಕರ್ತವ್ಯ ಅಲ್ಲವೆ? ಮನೆಗೆಲಸಗಳನ್ನು ಪತಿ-ಪತ್ನಿ ಹಂಚಿಕೊಂಡು ಮಾಡುವುದರಿಂದ ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚುತ್ತದೆ.

ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ