Updated on: Oct 16, 2022 | 10:50 PM
ನಮ್ಮ ಜೀವನಶೈಲಿ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಅನೇಕ ಜನರು ತಮಗಾಗಿ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜನರು ಒತ್ತಡಕ್ಕೆ ಒಳಗಾಗುವುದುಂಟು. ಅಂತಹ ಸಂದರ್ಭದಲ್ಲಿ ಒತ್ತಡವನ್ನು ತಪ್ಪಿಸಲು ನೀವು ಹಲವಾರು ರೀತಿಯ ಯೋಗಾಸನಗಳನ್ನು ಮಾಡಬಹುದು. ಒತ್ತಡದ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಲು ಈ ಯೋಗಾಸನಗಳು ಸಹಕಾರಿ.
ಉತ್ತಾನಾಸನ: ಈ ಆಸನವನ್ನು ಮಾಡಲು, ನೇರವಾಗಿ ನಿಂತುಕೊಳ್ಳಿ. ನಂತರ ಮುಂದಕ್ಕೆ ಬಾಗಿ. ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಪಾದಗಳನ್ನು ಹಿಂದಿನಿಂದ ಹಿಡಿದುಕೊಳ್ಳಿ. ಸ್ವಲ್ಪ ಹೊತ್ತು ಹೀಗೆ ಇರಿ. ನಂತರ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.
ಶವಾಸನ: ಈ ಆಸನವನ್ನು ಮಾಡಲು ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ಪಾದಗಳನ್ನು ಕೆಲವು ಇಂಚುಗಳ ಅಂತರದಲ್ಲಿ ಇರಿಸಿ. ನಿಮ್ಮ ಕೈಗಳನ್ನು ದೇಹದ ಎರಡೂ ಬದಿಗಳಲ್ಲಿ ಇರಿಸಿ. ಅಂಗೈಗಳನ್ನು ಮೇಲ್ಮುಖವಾಗಿ ಇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಈ ಸ್ಥಾನದಲ್ಲಿರಿ.
ಸೇತು ಬಂಧಾಸನ: ಯೋಗ ಚಾಪೆಯ ಮೇಲೆ ನಿಮ್ಮ ಬೆನ್ನಿನ ಮೇಲೆ ಮಲಗಿ. ನಿಮ್ಮ ಅಂಗೈಗಳನ್ನು ದೇಹದ ಎರಡೂ ಬದಿಗಳಲ್ಲಿ ಕೆಳಮುಖವಾಗಿ ಇರಿಸಿ. ಈಗ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಪಾದಗಳನ್ನು ಕೆಲವು ಇಂಚುಗಳ ಅಂತರದಲ್ಲಿ ಇರಿಸಿ. ಸೊಂಟವನ್ನು ನೆಲದಿಂದ ಸ್ವಲ್ಪ ಮೇಲಕ್ಕೆತ್ತಿ. ಸ್ವಲ್ಪ ಸಮಯ ಈ ರೀತಿ ಇದ್ದು ಮತ್ತೆ ಅದೇ ಸ್ಥಿತಿಗೆ ಬನ್ನಿ.
ಬಾಲಸನ: ಬಾಲಸನ ಮಾಡಲು, ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ. ಈಗ ಮುಂದಕ್ಕೆ ಬಾಗಿ. ಕೈಗಳನ್ನು ಮುಂದಕ್ಕೆ ಚಾಚಿ. ಹಣೆಯು ನೆಲವನ್ನು ಸ್ಪರ್ಶಿಸಬೇಕು. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಮತ್ತೆ ಅದೇ ಸ್ಥಾನಕ್ಕೆ ಬನ್ನಿ.