ಚಳಿಗಾಲ(Winter) ದಲ್ಲಿ, ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಚಳಿಗಾಲದಲ್ಲಿ ಸೋಂಕುಗಳನ್ನು ತಡೆಗಟ್ಟಲು ಮತ್ತು ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅವುಗಳ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ. ಚಳಿಗಾಲದಲ್ಲಿ ಹೊರಗಿನ ಶೀತಗಾಳಿಗೆ ದೇಹವು ಸಾಕಷ್ಟು ತಣ್ಣಗಾಗುವುದರಿಂದ ನಿಮ್ಮ ದೇಹವನ್ನು ಬೆಚ್ಚಗಿಡುವುದು ಅಗತ್ಯವಾಗಿದೆ. ಈ ಕ್ಯಾರೆಟ್, ಬೀಟ್ರೂಟ್ ಮತ್ತು ಟೊಮೆಟೊ ಸೂಪ್ ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ. ಜೊತೆಗೆ ದೇಹದ ಅತಿಯಾದ ತೂಕದಿಂದ ನೀವು ಬಳಲುತ್ತಿದ್ದರೆ ತೂಕ ನಷ್ಟಗೊಳಿಸಲು ಇದು ಸಹಾಯವಾಗಿದೆ.
ಕ್ಯಾರೆಟ್, ಬೀಟ್ರೂಟ್ ಮತ್ತು ಟೊಮೆಟೊ ಸೂಪ್ ಮಾಡುವ ವಿಧಾನದ ವೀಡಿಯೋ ಇಲ್ಲಿದೆ
2 ಕ್ಯಾರೆಟ್
1 ಬೀಟ್ರೂಟ್
4 ಟೊಮೆಟೊ
1 ಚಮಚ ಆಲಿವ್ ಎಣ್ಣೆ
ಚಿಕ್ಕ ತುಂಡು ಶುಂಠಿ
ರುಚಿಗೆ ಉಪ್ಪು
1 ಚಮಚ ಮೆಣಸಿನ ಹುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಇದನ್ನೂ ಓದಿ: ಭಾರತೀಯ ಕರೆನ್ಸಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ವಿದೇಶಿ ತಾಣಗಳು ಇಲ್ಲಿವೆ
ಮೊದಲಿಗೆ 2 ಕ್ಯಾರೆಟ್, 1 ಬೀಟ್ರೂಟ್ ಮತ್ತು 4 ಟೊಮೆಟೊಗಳನ್ನು ತೆಗೆದುಕೊಳ್ಳಿ. ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ. ನಂತರ ಒಂದು ಕುಕ್ಕರ್ ತೆಗೆದುಕೊಂಡು ಸ್ವಲ್ಪ ಆಲಿವ್ ಎಣ್ಣೆ ಮತ್ತು ಕತ್ತರಿಸಿದ ಶುಂಠಿಯನ್ನು ಬಿಸಿ ಮಾಡಿ. ನಂತರ ಇದಕ್ಕೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಮತ್ತು ಮೆಣಸಿನ ಹುಡಿಯನ್ನು ಹಾಕಿ ಮತ್ತು 2-3 ಗ್ಲಾಸ್ ನೀರು ಸೇರಿಸಿ. ತರಕಾರಿಗಳು ಬೇಯುವ ವರೆಗೆ ಕುಕ್ ಮಾಡಿ. ಕೊನೆಯದಾಗಿ ಒಂದು ಬೌಲ್ಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:28 am, Thu, 22 December 22