Tulsi Benefits for Skin: ಕಾಂತಿಯುತ ತ್ವಚೆಗೆ ದುಬಾರಿ ಚಿಕಿತ್ಸೆ ಅಗತ್ಯವಿಲ್ಲ, ತುಳಸಿ ಎಲೆ ಬಳಸಿ

ತುಳಸಿ ಮೊಡವೆಗಳನ್ನು, ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Tulsi Benefits for Skin: ಕಾಂತಿಯುತ ತ್ವಚೆಗೆ ದುಬಾರಿ ಚಿಕಿತ್ಸೆ ಅಗತ್ಯವಿಲ್ಲ, ತುಳಸಿ ಎಲೆ ಬಳಸಿ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Jan 08, 2023 | 1:07 PM

ಹೊಳೆಯುವ, ಕಾಂತಿಯುತ ಚರ್ಮವನ್ನು ಎಲ್ಲರೂ ಬಯಸುತ್ತಾರೆ. ಆದರೆ ಅದಕ್ಕಾಗಿ ಸಾಕಷ್ಟು ದುಬಾರಿ ಚಿಕಿತ್ಸೆಯನ್ನು ಮಾಡಿಕೊಳ್ಳುವವರು ಇದ್ದಾರೆ. ಆದರೆ ನೀವು ಅತ್ಯಂತ ಸುಲಭವಾಗಿ ಮನೆಯಲ್ಲಿಯೇ ಇರುವ ಗಿಡಮೂಲಿಕೆ ಬಳಸಿ ಕಾಂತಿಯುತ ತ್ವಚೆಯನ್ನು ಪಡೆಯಬಹುದಾಗಿದೆ. ಭಾರತೀಯ ಆಯುರ್ವೇದ ಚಿಕಿತ್ಸಾ ಸಂಪ್ರದಾಯವು ಚರ್ಮ ಮತ್ತು ಕೂದಲ ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿದೆ. ಇಂತಹ ಗಿಡಮೂಲಿಕಾ ಸೌಂದರ್ಯ ಚಿಕಿತ್ಸೆಯನ್ನು ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ. ಅಂತಹ ಗಿಡಮೂಲಿಕೆಗಳಲ್ಲಿ ತುಳಸಿಯೂ ಒಂದು.

ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ತುಳಸಿಯ ಪ್ರಯೋಜನ:

ತುಳಸಿ ಮೊಡವೆಗಳನ್ನು, ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಜೀವಶಕ್ತಿಯ ಹರಿವನ್ನು ಬೆಂಬಲಿಸುತ್ತದೆ. ಒತ್ತಡವನ್ನು ತಡೆಗಟ್ಟಲು ಸಹಕಾರಿಯಾಗಿದೆ. ಜೊತೆಗೆ ತೂಕ ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ ಎಂದು ಆರ್ಯುವೇದ ತಜ್ಞರು ಹೇಳುತ್ತಾರೆ.

ತುಳಸಿಯ ಮೇಲೆ ಸೀಮಿತ ಗುಣಮಟ್ಟದ ಅಧ್ಯಯನಗಳಿದ್ದರೂ, ಕೆಲವು ಸಂಶೋಧನೆಗಳು ತುಳಸಿ ಚರ್ಮ ಮತ್ತು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡಬಹುದು ಎಂದು ಸೂಚಿಸುತ್ತದೆ. ಅವುಗಳೆಂದರೆ ಮೊಡವೆಗಳ ವಿರುದ್ಧ ಹೋರಾಡುತ್ತದೆ. ಆರೋಗ್ಯಕರ ಚರ್ಮದ ವಯಸ್ಸನ್ನು ಬೆಂಬಲಿಸುತ್ತದೆ. ಪಿಗ್ಮೆಂಟೇಷನ್‌ನ್ನು ಕಡಿಮೆ ಮಾಡುತ್ತದೆ.ಕೂದಲು ಉದುರುವಿಕೆ ಅಥವಾ ತೆಳುವಾಗುವಿಕೆಯನ್ನು ತಡೆಯುತ್ತದೆ. ತಲೆಹೊಟ್ಟು ತಡೆಯುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ತಲೆಹೊಟ್ಟಿನ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದುಗಳು

ಹೊಳೆಯುವ ತ್ವಚೆಗಾಗಿ ತುಳಸಿ ಬಳಸುವುದು ಹೇಗೆ?

ತುಳಸಿಯನ್ನು ನಿಮ್ಮ ಚರ್ಮದ ಆರೆಕೈಯಲ್ಲಿ ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ದಿನಚರಿಯಲ್ಲಿ ಬಳಸಲು ಹಲವು ಮಾರ್ಗಗಳಿವೆ. ತುಳಸಿಯನ್ನು ಉಪಯೋಗಿಸಿ ಮುಖಕ್ಕೆ ಸ್ಟೀಮ್ ಮಾಡಬಹುದು. ಫೇಸ್ ಪ್ಯಾಕ್, ಕೂದಲ ಪ್ಯಾಕ್, ಕ್ಲೆನ್ಸರ್ ಮಾಡಿಕೊಳ್ಳುವ ಮೂಲಕ ಕೂಡಾ ಉಪಯೋಗ ಮಾಡಬಹುದು. ಇದಲ್ಲದೆ ತುಳಸಿಯ ಚಹಾ ಮಾಡಿ ಕೂಡಾ ಕುಡಿಯಬಹುದು. ಫೇಸ್ ಮಾಸ್ಕ್ ಮತ್ತು ಸ್ಪಾಟ್ ಟ್ರೀಟ್‌ಮೆಂಟ್‌ಗಳಂತಹ ತ್ವಚೆಯ ಆರೈಕೆ ಉತ್ಪನ್ನಗಳಲ್ಲಿ ತುಳಸಿಯನ್ನು ಬಳಸುವುದು ನಿರ್ಧಿಷ್ಟ ತ್ವಚೆಯ ಕಾಳಜಿಗೆ ಸಹಾಯವಾಗುತ್ತದೆ. ತುಳಸಿ ಅಥವಾ ತುಳಸಿಯ ಅಂಶ ಹೊಂದಿರುವ ಉತ್ಪನ್ನಗಳನ್ನು ನಿಮ್ಮ ಚರ್ಮಕ್ಕೆ ಅನ್ವಯಿಸುವ ಮೊದಲು ಯಾವಾಗಲೂ ಪ್ಯಾಕ್​ ಪರೀಕ್ಷೆಯನ್ನು ಮಾಡಿ. ತುಳಸಿಯನ್ನು ಸೇವಿಸುವ ಮೊದಲು ಗಿಡಮೂಲಿಕೆ ಔಷಧದಲ್ಲಿ ಪರಿಣಿತಿ ಹೊಂದಿರುವ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?