Turmeric Powder : ಅಡುಗೆಗೆ ಬಳಸುವ ಅರಶಿನ ಅಸಲಿಯೇ, ನಕಲಿಯೇ ಪತ್ತೆ ಹಚ್ಚುವುದು ಹೇಗೆ? ಹೀಗೆ ಕಂಡು ಹಿಡಿಯಿರಿ

ನಾವು ತಿನ್ನುವ ಪ್ರತಿಯೊಂದು ವಸ್ತುವು ಕಲಬೆರಕೆಯಿಂದ ಕೂಡಿದೆ. ಹೀಗಾಗಿ ಅಸಲಿ ಹಾಗೂ ನಕಲಿ ವ್ಯತ್ಯಾಸವನ್ನು ಕಂಡುಹಿಡಿಯುವುದೇ ಕಷ್ಟವಾಗಿದೆ. ಕಲಬೆರಕೆಯಾಗಬಲ್ಲ ಆಹಾರ ವಸ್ತುಗಳಲ್ಲಿ ಅರಶಿನವು ಕೂಡ ಒಂದು. ಈ ಶುದ್ಧ ಅರಶಿನದಲ್ಲಿ ಮೆಟಾನಿಲ್ ಹಳದಿ ರಾಸಾಯನಿಕವನ್ನು ಬೆರೆಸಲಾಗುತ್ತದೆ. ಎಲ್ಲಾ ಆಹಾರ ಪದಾರ್ಥಗಳಿಗೂ ಬಳಸುವ ಅರಶಿನ ಪುಡಿ ಶುದ್ಧವಾಗಿದೆಯೇ ಅಥವಾ ಕಲಬೆರಕೆಯಾಗಿದೆಯೇ ಪರೀಕ್ಷಿಸುವುದು ಹೇಗೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Turmeric Powder : ಅಡುಗೆಗೆ ಬಳಸುವ ಅರಶಿನ ಅಸಲಿಯೇ, ನಕಲಿಯೇ ಪತ್ತೆ ಹಚ್ಚುವುದು ಹೇಗೆ? ಹೀಗೆ ಕಂಡು ಹಿಡಿಯಿರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2024 | 4:30 PM

ಭಾರತೀಯರು ಅಡುಗೆಗೆ ಬಳಸುವ ಸಾಮಗ್ರಿಗಳಲ್ಲಿ ಅರಶಿನ ಕೂಡ ಒಂದು. ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ನಂತಹ ಹಲವು ಔಷಧೀಯ ಗುಣ ಹೊಂದಿರುವ ಅರಶಿನದಲ್ಲಿ ಕಲಬೆರಕೆಯನ್ನು ಕಾಣಬಹುದು. ಈ ಕಲಬೆರಕೆಯುಕ್ತ ಅರಶಿನವನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮಾರುಕಟ್ಟೆಯಿಂದ ತಂದ ಅರಶಿನ ಅಸಲಿಯೇ, ನಕಲಿಯೇ ಎಂದು ಪತ್ತೆಹಚ್ಚಲು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.

  1. ಅರಿಶಿನವು ಅಸಲಿಯೇ ನಕಲಿಯೇ ಎಂದು ಬಣ್ಣಗಳ ಮೂಲಕ ಪರೀಕ್ಷಿಸಬಹುದು. ಶುದ್ಧ ಅರಿಶಿನವು ಸಾಮಾನ್ಯವಾಗಿ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅರಶಿನದ ಬಣ್ಣವು ಮಸುಕಾಗಿದ್ದು, ಮಂದ ಹಳದಿ ಬಣ್ಣದಲ್ಲಿದ್ದರೆ ಅದು ನಕಲಿ ಎಂದರ್ಥ.
  2. ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಹೆಬ್ಬೆರಳಿನಿಂದ ಉಜ್ಜಿಕೊಳ್ಳಿ. ಅರಿಶಿನವು ಶುದ್ಧವಾಗಿದ್ದರೆ, ಕೈಯಲ್ಲಿ ಹಳದಿ ಬಣ್ಣವು ಉಳಿಯುತ್ತದೆ ಹಾಗೂ ಕೈಗೆ ಅರಶಿನವು ಅಂಟಿಕೊಳ್ಳುತ್ತದೆ. ಅರಶಿನವು ಕಲಬೆರಕೆಯಾಗಿದ್ದರೆ ಬಣ್ಣ ಬಿಡುವುದಿಲ್ಲ, ಪುಡಿಯು ಕೈಯಿಂದ ಉದುರಿ ಹೋಗುತ್ತದೆ.
  3. ಒಂದು ಚಮಚ ಅರಿಶಿನವನ್ನು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕರಗಿದ ಬಳಿಕ ತಳಭಾಗದಲ್ಲಿ ಅರಿಶಿನದ ಕಣಗಳು ಉಳಿದುಕೊಂಡಿದ್ದರೆ, ಅದು ನಕಲಿ ಎಂದರ್ಥ. ಕಲಬೆರಕೆ ರಹಿತ ಅರಿಶಿನವಾಗಿದ್ದರೆ ನೀರಿನಲ್ಲಿ ಕರಗುವುದಿಲ್ಲ, ಬದಲಾಗಿ ನೀರಿನಲ್ಲಿ ತೇಲುತ್ತದೆ.
  4. ಅರಶಿನ ಅಸಲಿಯೇ ನಕಲಿಯೇ ಎಂದು ಗುರುತಿಸಲು ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಬೆರೆಸಿ ಅರಶಿನವನ್ನು ನೀರಿಗೆ ಹಾಕಬೇಕು. ಆ ವೇಳೆಯಲ್ಲಿ ಅರಿಶಿನದ ಬಣ್ಣವು ನೀಲಿ, ನೇರಳೆ, ಗುಲಾಬಿ ಬಣ್ಣಕ್ಕೆ ತಿರುಗಿದರೆ, ಅರಶಿನ ಶುದ್ಧವಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ