ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಕಣ್ಣು ಮುಚ್ಚಿ ತೆರೆಳುವುದರೊಳಗೆ ಯುಗಾದಿ ಹಬ್ಬಕ್ಕೆ ಬಂದೆ ಬಿಟ್ಟಿತು. ಈ ಹಬ್ಬವನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ವಿಜೃಂಭಣೆಯ ಹಬ್ಬವಾಗಿದೆ. ಯುಗಾದಿಯಂದು ಸಾಂಪ್ರದಾಯಿಕವಾಗಿ ಮನೆಯನ್ನು ಸಿಂಗರಿಸಿದರೆ ಹಬ್ಬದ ಕಳೆಯು ಬರುತ್ತದೆ.
* ಮನೆಯ ಮುಂಭಾಗದಲ್ಲಿ ರಂಗೋಲಿಯಿರಲಿ : ಹಬ್ಬದ ರಂಗು ಹೆಚ್ಚಿಸುವುದೇ ಬಣ್ಣ ಬಣ್ಣದ ರಂಗೋಲಿಗಳು. ಆಕರ್ಷಕವಾಗಿ ರಂಗೋಲಿ ಬಿಡಿಸುವುದು ಬರುವುದಿಲ್ಲ ಎಂದಾದರೆ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳನ್ನು ಖರೀದಿಸಿ ಅದಕ್ಕೆ ಬಣ್ಣ ತುಂಬಿದರೆ ಮನೆಯ ಮುಂಭಾಗದಲ್ಲಿ ಸುಂದರವಾದ ರಂಗೋಲಿ ಸಿದ್ಧವಾಗುತ್ತದೆ.
* ಅಲಂಕಾರಕ್ಕಾಗಿ ಮಾವಿನ ಎಲೆ ಮತ್ತು ಬೇವಿನ ಎಲೆಗಳನ್ನು ಬಳಸಿ: ಹೊಸ ವರ್ಷದ ಮೊದಲ ಹಬ್ಬ ಯುಗಾದಿಗೆ ಪ್ರಕೃತಿಯು ಸಜ್ಜಾಗಿರುತ್ತದೆ. ಹೀಗಾಗಿ ಹೊಸ ವರ್ಷಕ್ಕೆ ಮನೆಯ ಬಾಗಿಲಿಗೆ ಮಾವಿನೆಲೆ ತೋರಣ, ಬೇವಿನಎಲೆಯ ಅಲಂಕಾರ ಮಾಡುವುದು ಒಳ್ಳೆಯದು.
* ಬಾಳೆ ಎಲೆಗಳಿಂದ ಅಲಂಕಾರ ಮಾಡಿ: ಸರಳವಾಗಿ ಅಲಂಕಾರವನ್ನು ಇಷ್ಟ ಪಡುವವರು ಈ ಬಾಳೆ ಎಲೆಯನ್ನು ಬಳಸಬಹುದು. ಬಾಳೆ ಎಲೆಗಳಿಂದ ಮನೆಯ ಮುಖ್ಯದ್ವಾರವನ್ನು ಅಲಂಕರಿಸಬಹುದು. ಇಲ್ಲದಿದ್ದರೆ ಮನೆಯ ಮುಂಭಾಗದಲ್ಲಿ ಬಾಳೆಗಿಡಗಳನ್ನು ನೆಟ್ಟರೆ ಹಬ್ಬದ ಕಳೆಯು ತುಂಬಿ ತುಳುಕುತ್ತದೆ.
ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು? ಈ ತಪ್ಪು ಮಾಡಬೇಡಿ
* ಮನೆಯನ್ನು ಹೂವುಗಳಿಂದ ಕೂಡ ಅಲಂಕರಿಸಿ : ಮನೆಯ ಮುಖ್ಯ ಬಾಗಿಲು ಮತ್ತು ಪೂಜಾ ಕೋಣೆಯನ್ನು ಅಲಂಕರಿಸಲು ತಾಜಾ ಹೂವುಗಳನ್ನು ಬಳಸಿದರೆ ಉತ್ತಮ. ಆ ಹೂವುಗಳಿಗೆ ದೀಪಾಲಂಕಾರ ಮಾಡಿದರೆ ಸೌಂದರ್ಯವನ್ನು ಹೆಚ್ಚಿಸಬಹುದು. ಈ ರೀತಿಯ ಅಲಂಕಾರವು ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ