Kitchen Sink Clean Tips in Kannada
ಅಡುಗೆಯೆಲ್ಲಾ ಆದ ಬಳಿಕ ರಾಶಿ ಪಾತ್ರೆಗಳು ಸಿಂಕ್ ಅನ್ನು ತುಂಬಿಕೊಳ್ಳುತ್ತವೆ. ಪಾತ್ರೆಗಳನ್ನು ತೊಳೆದ ಬಳಿಕ ಸಿಂಕ್ ಬೇಗನೇ ಕೊಳಕಾಗುವುದು, ಬ್ಲಾಕ್ ಆಗುವುದು ಸಹಜ. ಅದಲ್ಲದೇ ಕೆಲವೊಮ್ಮೆ ಬೇಡದ ವಸ್ತುಗಳು ಸಿಂಕ್ ಒಳಗೆ ಸೇರಿಕೊಂಡು ಬ್ಲಾಕ್ ಆಗುತ್ತದೆ. ಈ ಸಿಂಕನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಹಲವಾರು ರೋಗಗಳು ಕಾಡುತ್ತವೆ. ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಅಡುಗೆ ಮನೆಯ ಸಿಂಕ್ ನಲ್ಲಿ ತುಂಬಿರುವ ಬ್ಲಾಕ್ ಅನ್ನು ತೆಗೆಯಬಹುದು.
- ಅಡುಗೆ ಮನೆಯ ಸಿಂಕ್ ಬ್ಲಾಕ್ ನಿಂದಾಗಿ ಕಿಚನ್ ಕೆಟ್ಟ ವಾಸನೆ ಬರುತ್ತಿರುತ್ತದೆ. ಸಿಂಕ್ ಬ್ಲಾಕ್ ಆದಾಗ ಕುದಿಯುವ ನೀರನ್ನು ಸಿಂಕ್‌ಗೆ ಸುರಿಯಿರಿ. ಹೀಗೆ ಮಾಡಿದಾಗ ಪೈಪ್‌ನ ಬದಿಗಳಲ್ಲಿ ಅಂಟಿರುವ ಜಿಡ್ಡು, ಸಿಲುಕಿ ಹಾಕಿಕೊಂಡಿರುವ ಪದಾರ್ಥಗಳು ಕೊಚ್ಚಿ ಹೋಗಿ ಪೈಪ್ ಸ್ವಚ್ಛವಾಗುತ್ತದೆ.
- ಬ್ಲಾಕ್ ಆಗಿರುವ ಸಿಂಕನ್ನು ತೆರವುಗೊಳಿಸಲು ಒಂದು ಕಪ್ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಸಿಂಕ್ ಮೇಲೆ ಸುರಿಯಿರಿ. ಆ ತಕ್ಷಣವೇ ವಿನೆಗರ್ ಅನ್ನು ಸುರಿದರೆ ಸಿಂಕ್ ಒಳಗೆ ಬ್ಲಾಕ್ ಆಗಿರುವ ಪದಾರ್ಥಗಳು ಸರಾಗವಾಗಿ ಹರಿದು ಹೋಗುತ್ತದೆ.
- ಸಿಂಕ್ ಬ್ಲಾಕ್ ಆಗಿದ್ದರೆ ಅರ್ಧ ಕಪ್ ಉಪ್ಪು ಹಾಕಿ, ಆ ಬಳಿಕ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಬಿಸಿ ನೀರನ್ನು ಸುರಿಯುವುದರಿಂದ ಬ್ಲಾಕ್ ಸರಿಯಾಗುತ್ತದೆ.
- ಅಡುಗೆ ಮನೆಯ ಸಿಂಕ್ ಗಳನ್ನು ತೆರವುಗೊಳಿಸಲು ಒಂದು ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಬೆರೆಸಿ ಸಿಂಕ್ ಗೆ ಹಾಕಿ, ಸ್ವಲ್ಪ ಸಮಯದ ನಂತರದಲ್ಲಿ ಕುದಿಯುವ ನೀರನ್ನು ಹಾಕಿದರೆ ಪೈಪ್ ಒಳಗಿರುವ ಜಿಡ್ಡು ಹಾಗೂ ಆಹಾರ ಪದಾರ್ಥಗಳು ಸುಲಭವಾಗಿ ಹರಿದು ಹೋಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ