ಭಾರತೀಯರ ಪ್ರತಿ ಮನೆಯಲ್ಲಿ ಅಡುಗೆಗೆ ತೆಂಗಿನ ಕಾಯಿ ಬೇಕೇಬೇಕು. ಅದರಲ್ಲೂ ದಕ್ಷಿಣ ಭಾರತದಲ್ಲಿ, ಕರಾವಳಿ ಪ್ರದೇಶದಲ್ಲಿ ತೆಂಗಿನ ಕಾಯಿ ಎಂಬುದನ್ನು ಇನ್ನು ಪ್ರಮುಖ್ಯತೆಯನ್ನು ಪಡೆಯುತ್ತದೆ. ತೆಂಗಿನ ಕಾಯಿ ಇಲ್ಲದೇ ಅಡುಗೆಯೇ ಇರಲ್ಲ, ಅದರಲ್ಲೂ ಮಂಗಳೂರು, ಉಡುಪಿ, ಮುಂಬೈ, ಚೆನ್ನೈ, ಕೇರಳ, ಹೈದರಬಾದ್ ಇನ್ನು ಅನೇಕ ಕಡೆಯಲ್ಲಿ ಮೀನು, ಹಾಗೂ ಇತರ ಮಾಂಸಾಹಾರಗಳನ್ನು ತಿನ್ನುವ ಕಾರಣ ಈ ತೆಂಗಿನ ಕಾಯಿ ಬೇಕು. ಅದರಲ್ಲೂ, ಒಣ ತೆಂಗಿನಕಾಯಿ (Dry coconut) ಇನ್ನು ಮುಖ್ಯವಾಗಿರುತ್ತದೆ. ಇದು ಆರೋಗ್ಯಕ್ಕೆ ಹೆಚ್ಚು ಉಪಕಾರಿಯಾಗಿರುತ್ತದೆ. ಒಣ ತೆಂಗಿನಕಾಯಿಯಿಂದ ಆರೋಗ್ಯ ಪ್ರಯೋಜನ ನೋಡಿದ್ರೆ, ಇದು ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಮೆದುಳಿನ ಕಾರ್ಯ, ಕರುಳಿನ ಆರೋಗ್ಯ, ಹಾರ್ಮೋನುಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಸಹಾಯ ಮಾಡುತ್ತದೆ. ಹೆಚ್ಚಿನ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನಂತಹ ಅಪಾಯಗಳನ್ನು ತಪ್ಪಿಸುತ್ತದೆ, ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಇಂಡಿಯಾ ಎಕ್ಸ್ಪ್ರೆಸ್ಸ್ಗೆ ನೀಡಿದ ವರದಿ ಪ್ರಕಾರ, ತೆಂಗಿನಕಾಯಿ ಆರೋಗ್ಯಕರ ಕೊಬ್ಬಿನ ಅಂಶಗಳು ದಟ್ಟವಾಗಿರುತ್ತದೆ. ಜತೆಗೆ ತೆಂಗಿನಕಾಯಿ ಆರೋಗ್ಯಕರ ಕೊಬ್ಬಿನ ಉತ್ತಮವಾಗಿದ್ದು, ಲಾರಿಕ್ ಆಮ್ಲದಂತಹ ಫೈಬರ್, ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ತಾಮ್ರ, ಸೆಲೆನಿಯಮ್, ಸತುವುಗಳಂತಹ ಖನಿಜಗಳು ಮತ್ತು ಉರಿಯೂತ ಮತ್ತು ವಯಸ್ಸಾದ ನಂತರ ಉಂಟಾಗುವ ರೋಗಗಳನ್ನು ಹೋಗಲಾಡಿಸುತ್ತದೆ.
ಇದನ್ನೂ ಓದಿ: ಮೈಸೂರು ಪಾಕ್ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ, ಇದು ಕನ್ನಡಿಗರ ಹೆಮ್ಮೆ
1.8–10 ತುಂಡುಗಳು ಸುಲಭವಾಗಿ 250–300 ಕ್ಯಾಲೊರಿಗಳನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ ಇದು ಹೆಚ್ಚಾದರೆ ತೂಕ ಹೆಚ್ಚು ಮಾಡಬಹುದು. ತೂಕ/ಕೊಬ್ಬಿನ ಯಕೃತ್ತಿನ ಸಮಸ್ಯೆಯಿರುವವರಿಗೆ ಅಪಾಯಕಾರಿ.
2.ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬು ಕೆಲವು ವ್ಯಕ್ತಿಗಳಲ್ಲಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಉತ್ಪಾದನೆಯನ್ನು ಮಾಡುತ್ತದೆ.
3.ಒಣ ತೆಂಗಿನಕಾಯಿ ಭಾರವಾದ ಅಂಶಗಳನ್ನು ಹೊಂದಿರುತ್ತದೆ. ನಿಧಾನಗತಿಯ ಜೀರ್ಣಕ್ರಿಯೆ, ಪಿತ್ತರಸ ಸಮಸ್ಯೆಗಳು ಅಥವಾ ಕಡಿಮೆ ಹೊಟ್ಟೆಯ ಆಮ್ಲ ಹೊಂದಿರುವ ಜನರು ಉಬ್ಬುವುದು ಅಥವಾ ವಾಕರಿಕೆ ಅನುಭವಿಸಬಹುದು.
4.ಅತಿಯಾದ ಸೇವನೆಯಿಂದ ಕಫವನ್ನು ಹೆಚ್ಚಿಸಬಹುದು,
5.ಒಣಗಿದ ತೆಂಗಿನಕಾಯಿಯನ್ನು ಸೇವಿಸಲು ಉತ್ತಮ ಸಮಯ ಬೆಳಿಗ್ಗೆ ಮತ್ತು ಮಧ್ಯಾಹ್ನ. ಇದನ್ನು ಗಿಡಮೂಲಿಕೆ ಚಹಾ, ಜೀರಿಗೆ ಅಥವಾ ಸಂಜೆಯ ತಿಂಡಿ ಜತೆಗೆ ಸೇವನೆ ಮಾಡಬಹುದು. ಇದನ್ನು ರಾತ್ರಿಯಲ್ಲಿ ಸೇವನೆ ಮಾಡಬೇಡಿ.
6.ಇದು ಭಾರ ಮತ್ತು ಎಣ್ಣೆಯುಕ್ತವಾಗಿರುವುದರಿಂದ, ಇದು ನಿಮ್ಮ ಜೀರ್ಣಕ್ರಿಯೆ ಮತ್ತು ನಿದ್ರೆಯನ್ನು ಹಾಳುಮಾಡುತ್ತದೆ
7.ದಿನಕ್ಕೆ 4–6 ಸಣ್ಣ ತುಂಡುಗಳು ಹೆಚ್ಚಿನ ಜನರಿಗೆ ಸುರಕ್ಷಿತವಾಗಿದೆ ಮತ್ತು ಇದರ ಜತೆಗೆ ನೀವು ದೈಹಿಕವಾಗಿ ಸಕ್ರಿಯರಾಗಿದ್ದರೆ ಊಟ ಸಮಯದಲ್ಲೂ ಸೇವನೆ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 26 May 25