Hair Care: ದಿನನಿತ್ಯ ಇಂತಹ ಹೇರ್ ಸ್ಟೈಲ್ ಬಳಸುವುದರಿಂದ ಕೂದಲಿನ ಸಮಸ್ಯೆ ಉಂಟಾಗಬಹುದು; ವಿವರ ಇಲ್ಲಿದೆ

| Updated By: preethi shettigar

Updated on: Jul 05, 2021 | 9:15 AM

ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ದಿನಾಲೂ ಒಂದೇ ಹೇರ್ ಸ್ಟೈಲ್ ಬಳಸುವುದು ಕೂಡ ಕಾರಣ ಆಗಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

Hair Care: ದಿನನಿತ್ಯ ಇಂತಹ ಹೇರ್ ಸ್ಟೈಲ್ ಬಳಸುವುದರಿಂದ ಕೂದಲಿನ ಸಮಸ್ಯೆ ಉಂಟಾಗಬಹುದು; ವಿವರ ಇಲ್ಲಿದೆ
ಹೇರ್​ಸ್ಟೈಲ್
Follow us on

ಈಗೀಗ ಸ್ಟೈಲ್ ಎಂದು ಬಂದಾಗ ಬಹುತೇಕ ಯುವಸಮುದಾಯದ ಜನರು ಸೆಲೆಬ್ರಿಟಿಗಳ ಬೆನ್ನು ಬೀಳುತ್ತಾರೆ. ಅವರಂತೆಯೇ ಉಂಗುರ, ವಾಚ್, ಚಪ್ಪಲಿಯಿಂದ ಹಿಡಿದು, ಬಟ್ಟೆ ತೊಡುವುದು, ಆಭರಣ ಧರಿಸುವುದನ್ನೂ ಅನುಕರಿಸುತ್ತಾರೆ. ಅದರಲ್ಲೂ ತಮ್ಮ ಉಡುಗೆ ತೊಡುಗೆಯ ಬಗ್ಗೆ ಹೆಚ್ಚೇ ಗಮನಹರಿಸುವ ಹೆಣ್ಣುಮಕ್ಕಳು, ಹುಡುಗಿಯರು ತಮ್ಮ ಜೀವನಶೈಲಿಯ ವಿಧಾನದ ಬಗ್ಗೆ ವಿವಿಧ ಪ್ರಯೋಗ ಮಾಡುತ್ತಾ ಕಾಳಜಿಯನ್ನೂ ಹೊಂದಿರುತ್ತಾರೆ. ಬಹುತೇಕರು ತಮ್ಮ ಕೇಶವಿನ್ಯಾಸವನ್ನೂ ವಿಶೇಷವಾಗಿ ಇರಬೇಕು ಎಂದು ಬಯಸುತ್ತಾರೆ.

ಆದರೆ ಕೆಲವೊಮ್ಮೆ ಹೀಗೆ ಭಿನ್ನ ಹೇರ್ ಸ್ಟೈಲ್​ಗಳನ್ನು ನಿತ್ಯವೂ ಅನುಸರಿಸುವುದರಿಂದ ಕೂದಲಿಗೆ ಸಮಸ್ಯೆ ಆಗುವ ಸಾಧ್ಯತೆಯೂ ಇದೆ ಎಂದು ಗಮನದಲ್ಲಿ ಇಟ್ಟುಕೊಳ್ಳಬೇಕು. ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ದಿನಾಲೂ ಒಂದೇ ಹೇರ್ ಸ್ಟೈಲ್ ಬಳಸುವುದು ಕೂಡ ಕಾರಣ ಆಗಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಟೈಟ್ ಬನ್
ಲಾಕ್​ಡೌನ್ ಹಾಗೂ ಕೊರೊನಾ ಕಾರಣದಿಂದ ನಾವು ಅನಾವಶ್ಯಕವಾಗಿ ಹೊರಗೆ ಹೋಗುತ್ತಿಲ್ಲ. ಹೀಗಾಗಿ ನಾವು ದಿನದ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುತ್ತಿದ್ದೇವೆ. ಅಷ್ಟೇ ಅಲ್ಲದೆ ಕೆಲವರು ಮಲಗುವಾಗಲೂ ಟೈಟ್ ಬನ್ ಹೇರ್ ಸ್ಟೈಲ್ ಇಟ್ಟುಕೊಂಡೇ ಮಲಗುತ್ತಾರೆ. ಮಾರನೇ ದಿನ ಅದನ್ನು ಬಿಡಿಸಿ ಇಡದೇ ಮತ್ತೆ ಟೈಟ್ ಬನ್ ಹಾಕಿಕೊಳ್ಳುತ್ತಾರೆ. ಬಹಳ ದಿನಗಳವರೆಗೆ ಹೀಗೆ ಮಾಡುವುದರಿಂದ ತಲೆಸ್ನಾನ ಅಥವಾ ತಲೆಬಾಚಲು ಹೊರಟಾಗ ಕೂದಲು ಉದುರುವಿಕೆ ಉಂಟಾಗಬಹುದು. ಹಾಗೊಂದು ವೇಳೆ ಬನ್ ಹಾಕಿಕೊಳ್ಳಲೇಬೇಕು ಎಂದು ಇದ್ದರೆ, ಲೂಸ್ ಬನ್ ಧರಿಸಬಹುದು.

ಪೋನಿ ಟೈಲ್
ಬೇಸಿಗೆ ಕಾಲದಲ್ಲಿ ಹೈ ಪೋನಿ ಟೈಲ್ ಧರಿಸುವುದನ್ನು ಮಹಿಳೆಯರು ಇಷ್ಟಪಡುತ್ತಾರೆ. ಇದರಿಂದ ದಿನನಿತ್ಯದ ದಿನಚರಿಗೆ ಸಹಾಯವೂ ಆಗುತ್ತದೆ. ಹಾಗೆಂದು ಈ ಹೇರ್ ಸ್ಟೈಲ್ ಕೂಡ ದಿನನಿತ್ಯ ಬಳಸಿದರೆ ಹೇರ್ ಫಾಲ್ ಸಮಸ್ಯೆ ಕಂಡುಬರಬಹುದು. ಕೂದಲನ್ನು ಹೀಗೆ ಕಟ್ಟುವಾಗ ಎಳೆದು ಕಟ್ಟಬೇಕಾಗುತ್ತದೆ ಹಾಗೂ ರಬ್ಬರ್ ಬ್ಯಾಂಡ್ ಬಳಸಬೇಕಾಗುತ್ತದೆ. ಇದರಿಂದ ಕೂದಲು ಉದುರಬಹುದು.

ಟೈಟ್ ಬ್ರೆಡ್ಸ್
ಮನೆಯಲ್ಲೇ ಉಳಿದುಕೊಳ್ಳುವಾಗ ಸಾಮಾನ್ಯವಾಗಿ ಲೂಸ್ ಬ್ರೆಡ್ಸ್​ಗಳನ್ನು ಬಳಸುವುದಿದೆ. ಆದರೆ, ಹೊರಗೆ ಹೋಗುವ ಸಂದರ್ಭ ಬಂದಾಗ ಲೂಸ್ ಬ್ರೆಡ್ಸ್​ ಬಳಸುವುದು ಜಾಸ್ತಿ ಹಾಗೂ ವಿವಿಧ ರೀತಿಯ ಬ್ರೆಡ್ ಹೇರ್ ಸ್ಟೈಲ್ ಬಳಸಲಾಗುತ್ತದೆ. ವಾಟರ್​ಫಾಲ್ ಬ್ರೆಡ್ಸ್, ರಿವರ್ಸ್ ಬ್ರೆಡ್ಸ್ ಇತ್ಯಾದಿ. ಇಂತಹ ಹೇರ್ ಸ್ಟೈಲ್ ಮಾಡುತ್ತಿದ್ದೀರಿ ಅಂತಾದರೂ ಆಗಾಗ ಕೂದಲನ್ನು ಲೂಸ್ ಆಗಿ ಕಟ್ಟಿಕೊಳ್ಳಿ. ಬಿಡಿಸಿಕೊಳ್ಳಿ. ಇದರಿಂದ ಕೂದಲಿಗೆ ಕಡಿಮೆ ಹಾನಿ ಉಂಟಾಗಬಹುದು.

ಇದನ್ನೂ ಓದಿ: ಧೋನಿಯ ದಾಂಪತ್ಯ ಜೀವನಕ್ಕೆ ಭರ್ತಿ 11 ವರ್ಷ; ಈ ಜೋಡಿ ಹಕ್ಕಿಗಳ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ?

ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ