ಸಾಂದರ್ಭಿಕ ಚಿತ್ರ
ಪ್ರೀತಿಸುವ ಹೃದಯಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ತಿಂಗಳೇ ಈ ಫೆಬ್ರವರಿ. ಪ್ರೇಮಿಗಳು ಒಂದು ವಾರಗಳ ಕಾಲ ರೋಸ್ ಡೇ, ಪ್ರಪೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿ ಡೇ, ಹಗ್ ಡೇ, ಪ್ರಾಮಿಸ್ ಡೇ, ಒಂದೊಂದು ದಿನವನ್ನು ಹೀಗೆ ವಿಶೇಷವಾಗಿ ಆಚರಿಸುತ್ತಾರೆ. ಪ್ರೇಮಿಗಳ ವಾರದಲ್ಲಿ ಏಳನೇ ದಿನ ಬರುವ ದಿನವೇ ಕಿಸ್ ಡೇ. ಫೆಬ್ರವರಿ 13 ರಂದು ಆಚರಿಸಲಾಗುವ ಕಿಸ್ ಡೇ ಪ್ರೇಮಿಗಳ ಪಾಲಿಗೆ ರೋಮ್ಯಾಂಟಿಕ್ ದಿನವಾಗಿದೆ. ಪ್ರೇಮಿಗೆ ಅಥವಾ ಸಂಗಾತಿಗೆ ಮುತ್ತನ್ನು ವಿವಿಧ ರೀತಿಯಲ್ಲಿ ನೀಡಿ ಖುಷಿ ಪಡಿಸಬಹುದು. ಅದಲ್ಲದೇ, ಕೊನೆಯ ದಿನವಾದ ಕಿಸ್ ಡೇಯಂದು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು.
- ರೆಡ್ ಫ್ಯೂರಿ ಕುಶನ್ : ಚುಂಬನದ ದಿನ ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಗೆ ಅರ್ಥಪೂರ್ಣ ಸಂದೇಶವಿರುವ ರೆಡ್ ಫ್ಯೂರಿ ಕುಶನ್ ಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಲ್ಲಿ ಒಂದು. ಈ ಕುಶನ್ ನಲ್ಲಿ ‘ಲವ್ ಯು’ ಸಂದೇಶವಿರುವ ಕುಶನ್ ನೀಡುವ ಬದಲು, ಈ ದಿನಕ್ಕೆ ಹೊಂದಿಕೆಯಾಗುವ ಕ್ವೋಟ್ಸ್ ಗಳನ್ನು ಒಳಗೊಂಡ ಕುಶನ್ ಸಿಕ್ಕರೆ ನೀಡಬಹುದು. ಇಲ್ಲವಾದರೆ ನಿಮ್ಮ ಮನಸ್ಸಿನ ಮಾತನ್ನು ಆ ಕುಶನ್ ಮೇಲೆ ಬರೆದರೆ ನಿಜಕ್ಕೂ ಈ ಗಿಫ್ಟ್ ನಿಮ್ಮವರಿಗೆ ಇಷ್ಟವಾಗುತ್ತದೆ.
- ರೋಮ್ಯಾಂಟಿಕ್ ಡಿನ್ನರ್ ಆಯೋಜಿಸಿ : ಕಿಸ್ ಡೇ ರೋಮ್ಯಾಂಟಿಕ್ ದಿನಗಳಲ್ಲಿ ಒಂದಾಗಿದೆ. ಈ ವಿಶೇಷ ದಿನದಂದು ನಿಮ್ಮವರಿಗಾಗಿ ರೋಮ್ಯಾಂಟಿಕ್ ಡಿನ್ನರ್ ಆಯೋಜಿಸುವುದು ಕೂಡ ಒಂದೊಳ್ಳೆ ಉಡುಗೊರೆಯಾಗಿದೆ. ಇಬ್ಬರೂ ರೆಸ್ಟೋರೆಂಟ್‌ನಲ್ಲಿ ಕುಳಿತು ನಿಮ್ಮ ನೆಚ್ಚಿನ ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದ ಒಟ್ಟಿಗೆ ಸಮಯ ಕಳೆದಂತೆ ಆಗುತ್ತದೆ. ಹಾಗೂ ಸಂಬಂಧದಲ್ಲಿನ ಪ್ರೀತಿಯೂ ಹೆಚ್ಚಾಗುತ್ತದೆ. ರೋಮ್ಯಾಂಟಿಕ್ ಡಿನ್ನರ್ ವೇಳೆ ನಿಮ್ಮ ಸರ್ಪ್ರೈಸ್ ಉಡುಗೊರೆ ನೀಡಬಹುದು. ಅದಲ್ಲದೇ, ನಿಮ್ಮ ಸಂಗಾತಿಯ ನೆಚ್ಚಿನ ಆಹಾರ ಮತ್ತು ಪಾನೀಯಗಳನ್ನು ಆರ್ಡರ್ ಮಾಡಿ ಸಂಗಾತಿಯನ್ನು ಖುಷಿ ಪಡಿಸಬಹುದು.
- ಉಡುಗೊರೆಯಾಗಿ ಹೂಗುಚ್ಛ ನೀಡಿ : ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಹೀಗಾಗಿ ಹೂಗುಚ್ಛ ನೀಡುವುದು ಸಂಬಂಧದಲ್ಲಿ ಸಕಾರಾತ್ಮಕತೆ ಉಂಟು ಮಾಡುತ್ತದೆ. ನಿಮ್ಮ ಸಂಗಾತಿ ಹೂಗುಚ್ಛ ಅಥವಾ ಹೂವುಗಳನ್ನು ಉಡುಗೊರೆಯಾಗಿ ನೀಡಬಹುದು. ಒಂದು ವೇಳೆ ನೀವು ಡೇಟಿಂಗ್‌ಗೆ ಹೋಗುತ್ತಿದ್ದರೆ, ಉಡುಗೊರೆಯೊಂದಿಗೆ ಹೂಗುಚ್ಛವನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ. ಪ್ರೇಮಿ ಅಥವಾ ಸಂಗಾತಿಗೆ ತಿಳಿಯದಂತೆ ಸರ್ಪ್ರೈಸ್ ಆಗಿ ಹೂಗುಚ್ಛ ನೀಡಿದರೆ ಆ ಕ್ಷಣವು ಸದಾ ನೆನಪಿನಲ್ಲಿ ಉಳಿಯುತ್ತದೆ. ನಿಮ್ಮ ಮೇಲಿನ ಪ್ರೀತಿಯೂ ಕೂಡ ಹೆಚ್ಚಾಗುತ್ತದೆ.
- ಆಭರಣಗಳು : ಹೆಣ್ಣು ಮಕ್ಕಳಿಗೆ ಆಭರಣಗಳೆಂದರೆ ಬಹಳ ಇಷ್ಟ. ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಬೆಸ್ಟ್ ಆಯ್ಕೆಯಾಗಿದೆ. ಪೆಡೆಂಟ್ ಅಥವಾ ಗೋಲ್ಡ್ ರಿಂಗ್ ಮೇಲೆ ನಿಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳಿಂದ ಕೂಡಿದ ವಿನ್ಯಾಸಗಳಿದ್ದರೆ ಇನ್ನು ಉತ್ತಮ. ಇಲ್ಲದಿದ್ದರೆ ಮದುವೆಯ ದಿನಾಂಕ ಅಥವಾ ಸಿಹಿ ಸಂದೇಶದೊಂದಿಗೆ ಆಭರಣಗಳನ್ನು ನೀಡಬಹುದು. ಈ ರೀತಿಯ ಉಡುಗೊರೆಗಳು ಕಿಸ್ ಡೇಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ