
ಪ್ರೇಮಿಗಳ ವಾರ ಶುರುವಾಗಿದ್ದು, ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಒಂದೊಂದು ದಿನವು ಒಂದೊಂದು ವಿಶೇಷತೆ ಹೊಂದಿದೆ. ಫೆಬ್ರವರಿ 9ಕ್ಕೆ ಚಾಕೋಲೇಟ್ ದಿನ. ಪ್ರೇಮಿಗಳು ಈ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹೌದು, ಬದುಕಿನಲ್ಲಿ ಖುಷಿ ಇದ್ದರೆ ಬದುಕು ಸಿಹಿಯಾಗಿರುವುದು, ಅದೇ ರೀತಿ ಪ್ರೀತಿ ನೀಡುವ ಖುಷಿ ಬದುಕುನ್ನು ಸಿಹಿಯಾಗಿಸುತ್ತದೆ ಎಂಬ ಸಂದೇಶ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಚಾಕೊಲೇಟ್‌ನ ಇತಿಹಾಸದ ಕಡೆಗೆ ಕಣ್ಣಾಯಿಸಿದರೆ ಪ್ರಾಚೀನ ಮೆಸೊಅಮೆರಿಕನ್ ನಾಗರಿಕತೆಗಳಿಗೂ ಹಿಂದಿನದ್ದು ಎನ್ನಬಹುದು. ಈ ಚಾಕೊಲೇಟ್ ಮಾಯಾ ಮತ್ತು ಅಜ್ಟೆಕ್‌ಗಳ ಕಾಲದಲ್ಲಿ ಆರಂಭವಾಯಿತು. ಆ ಸಮಯದಲ್ಲಿ ಚಾಕೊಲೇಟ್ ಕಹಿಯಾದ ದ್ರವರೂಪದಲ್ಲಿತ್ತು. ಸ್ಪ್ಯಾನಿಪ್ಟ್ ಸಂಶೋಧಕ ಹೆರ್ನಾನ್ ಕಾರ್ಟೆಸ್ ಅವರ ಮೂಲಕ ಈ ದ್ರವ ರೂಪದ ಚಾಕೊಲೇಟ್ ಯರೋಪ್‌ನಾದ್ಯಂತ ಜನಪ್ರಿಯತೆ ಗಳಿಸಿತು. 17ನೇ ಶತಮಾನದಲ್ಲಿ ಚಾಕೊಲೇಟ್‌ಗೆ ಸಕ್ಕರೆ ಹಾಗೂ ಹಾಲು ಸೇರಿಸುವ ಮೂಲಕ ಗಟ್ಟಿಯಾದ ಚಾಕೊಲೇಟ್ ವಿನ್ಯಾಸ ಪಡೆಯಿತು.1828ರಲ್ಲಿ ಕಾನ್ರಾಡ್ ವ್ಯಾನ್ ಹೌಟೆನ್ ಅವರು ಕೊಕೊ ಪೌಡರ್ ಉತ್ಪಾದನೆಗೆ ಕೈ ಹಾಕಿದರು. 19ನೇ ಶತಮಾನದಲ್ಲಿ ಮೊದಲ ಬಾರಿಗೆ ಘನ ರೂಪ ಚಾಕೊಲೇಟ್ ರಚನೆಗೆ ಕಾರಣವಾಯಿತು. ಸ್ಪಿಸ್ ಚಾಕೊಲೇಟಿಯರ್‌ಗಳು ಚಾಕೊಲೇಟ್‌ಗೆ ಒಂದು ಪರಿಪೂರ್ಣ ರೂಪ ನೀಡುವಲ್ಲಿ ಯಶಸ್ವಿಯಾದರು. 20ನೇ ಶತಮಾನದಲ್ಲಿ ಕಾಡ್‌ಬರಿ, ಹರ್ಷಿಸ್, ಮಾರ್ಸ್‌ನಂತಹ ವಿವಿಧ ಚಾಕೊಲೇಟ್ ಬ್ರ್ಯಾಂಡ್‌ಗಳು ವಿವಿಧ ರೀತಿಯ ಚಾಕೊಲೇಟ್‌ಗಳನ್ನು ತಯಾರಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ವಿವಿಧ ಚಾಕೊಲೇಟ್ ಗಳು ಚಾಕೊಲೇಟ್ ಪ್ರಿಯರ ಗಮನ ಸೆಳೆದಿದೆ.
ಅನೇಕ ವರ್ಷಗಳ ಹಿಂದೆ ಸೇಂಟ್ ವ್ಯಾಲೆಂಟೈನ್ಸ್ ಎಂಬ ಕ್ರಿಶ್ಚಿಯನ್ ಸಂತರಿಗೆ ಗೌರವ ನೀಡುವ ಉದ್ದೇಶದಿಂದ ವ್ಯಾಲೆಂಟೈನ್ಸ್ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಅದರಲ್ಲಿಯೂ ಈ ವಿಕೋರಿಯನ್ ಯುಗದಲ್ಲಿ ಜನರು ಪ್ರೀತಿಯಲ್ಲಿ ಇದ್ದಾಗ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಆ ಸಮಯದಲ್ಲಿ ಚಾಕೊಲೇಟನ್ನು ಉಡುಗೊರೆ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ, 19ನೇ ಶತಮಾನದಲ್ಲಿ ಬ್ರಿಟಿಪ್ ಕುಟುಂಬವೊಂದು ಚಾಕೊಲೇಟ್ ಹೊಸ ರೂಪ ನೀಡುವ ಬಗ್ಗೆ ಯೋಚಿಸಿತ್ತು. 1861ರಲ್ಲಿ ಕ್ಯುಪಿಡ್ ಹಾಗೂ ರೋಸ್ಟಡ್‌ಗಳೊಂದಿಗೆ ಹೃದಯಾಕಾರದ ಚಾಕೊಲೇಟ್‌ಗಳ ಉತ್ಪಾದನೆ ಮಾಡಿದರು. ವಾಷಿಂಗ್ಟನ್ ಡಿಸಿ ಯ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಪ್ರಕಾರ, 19ನೇ ಶತಮಾನದಲ್ಲಿ ಚಾಕೊಲೇಟ್ ದಿನದ ಆಚರಣೆ ಶುರುವಾಯಿತು. ಅಂದಿನಿಂದ ವಿಶ್ವದಾದಂತ್ಯ ಜನರು ವಿಭಿನ್ನವಾಗಿ ಚಾಕೋಲೇಟ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದ್ದಾರೆ.
ಇದನ್ನೂ ಓದಿ: ಚಾಕೊಲೇಟ್ ಡೇಗೆ ಸ್ಪೆಷಲ್ ವ್ಯಕ್ತಿಗೆ ಈ ಉಡುಗೊರೆ ನೀಡಿ ಖುಷಿ ಪಡಿಸಿ
ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಈ ಚಾಕೊಲೇಟ್ ಮೇಲಿನ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರೀತಿ ಮತ್ತು ಮಾಧುರ್ಯದ ಸವಿಯನ್ನು ಅನುಭವಿಸುವ ಸಲುವಾಗಿ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ದಿನದಂದು ತಮ್ಮ ಪ್ರೇಮಿಗಳು ವಿವಿಧ ಉಡುಗೊರೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ