Sign In

By signing in or creating an account, you agree with Associated Broadcasting Company's Terms & Conditions and Privacy Policy.

Teddy Day 2025: ಟೆಡ್ಡಿ ಡೇ ಏಕೆ ಆಚರಿಸಲಾಗುತ್ತದೆ? ಟೆಡ್ಡಿ ಡೇಗೂ ಪ್ರೇಮಿಗಳ ದಿನಕ್ಕೂ ಇರುವ ಸಂಬಂಧದ ಬಗ್ಗೆ ತಿಳಿಯಿರಿ

Valentine’s Week 2025: ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮ ಪಕ್ಷಿಗಳಿಗೆ ಪ್ರೇಮಿಗಳ ದಿನದ ಸಂಭ್ರಮ. ರೋಸ್‌ ಡೇ, ಚಾಕೊಲೇಟ್‌ ಡೇ, ಪ್ರಪೋಸ್‌ ಡೇ ಟೆಡ್ಡಿ ಡೇ, ಪ್ರಾಮಿಸ್‌ ಡೇ, ಕಿಸ್‌ ಡೇ ಅಂತ ಪ್ರೇಮಿಗಳು ಇಡೀ ವ್ಯಾಲೆಂಟೈನ್ಸ್‌ ವೀಕ್‌ನ್ನು ಬಹಳ ವಿಶೇಷವಾಗಿ ಸೆಲೆಬ್ರೇಟ್‌ ಮಾಡುತ್ತಾರೆ. ಈ ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಅಂದರೆ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಟೆಡ್ಡಿ ಉಡುಗೊರೆಯಾಗಿ ನೀಡುತ್ತಾರೆ. ಹಾಗಾದ್ರೆ ಫೆಬ್ರವರಿ 10 ರಂದೇ ಏಕೆ ಈ ದಿನವನ್ನು ಆಚರಿಸಲಾಗುತ್ತದೆ? ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ನೋಡೋಣ ಬನ್ನಿ.

Teddy Day 2025: ಟೆಡ್ಡಿ ಡೇ ಏಕೆ ಆಚರಿಸಲಾಗುತ್ತದೆ? ಟೆಡ್ಡಿ ಡೇಗೂ ಪ್ರೇಮಿಗಳ ದಿನಕ್ಕೂ ಇರುವ ಸಂಬಂಧದ ಬಗ್ಗೆ ತಿಳಿಯಿರಿ
Teddy Day
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Feb 09, 2025 | 2:48 PM

ಫೆಬ್ರವರಿ ತಿಂಗಳು ಪ್ರೇಮ ಪಕ್ಷಿಗಳಿಗೆ ಬಹಳ ವಿಶೇಷವಾದ ತಿಂಗಳು ಅಂತಾನೇ ಹೇಳಬಹುದು. ಈ ತಿಂಗಳನ್ನು ಪ್ರೀತಿಯ ತಿಂಗಳು ಎಂದೂ ಕರೆಯುತ್ತಾರೆ. ಈ ತಿಂಗಳಲ್ಲಿ ಪ್ರೇಮಿಗಳ ದಿನ ಮಾತ್ರವಲ್ಲ ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್‌ ವೀಕ್‌ನ್ನೂ ಕೂಡಾ ಸೆಲೆಬ್ರೇಟ್‌ ಮಾಡಲಾಗುತ್ತದೆ. ರೋಸ್‌ ಡೇ, ಚಾಕೊಲೇಟ್‌ ಡೇ, ಪ್ರಪೋಸ್‌ ಡೇ ಟೆಡ್ಡಿ ಡೇ, ಪ್ರಾಮಿಸ್‌ ಡೇ, ಕಿಸ್‌ ಡೇ ಅಂತೆಲ್ಲಾ ವ್ಯಾಲೆಂಟೈನ್‌ ವೀಕ್‌ನಲ್ಲಿ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. . ಈ ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಅಂದರೆ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಸಂಗಾತಿ, ಸ್ನೇಹಿತ ಅಥವಾ ವಿಶೇಷ ವ್ಯಕ್ತಿಗೆ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಫೆಬ್ರವರಿ 10 ರಂದು ಮಾತ್ರ ಟೆಡ್ಡಿ ದಿನವನ್ನು ಏಕೆ ಆಚರಿಸಲಾಗುತ್ತದೆ ಅದರ ಇತಿಹಾಸ ಮತ್ತು ಮಹತ್ವ ಏನು ಎಂಬುದನ್ನು ತಿಳಿಯೋಣ.

ಟೆಡ್ಡಿ ದಿನವನ್ನು ಏಕೆ ಆಚರಿಸಲಾಗುತ್ತದೆ?

ಟೆಡ್ಡಿ ಬೇರ್‌ಗಳು ಪ್ರೀತಿ, ವಾತ್ಸಲ್ಯ ಮತ್ತು ಬಾಲ್ಯದ ಮುಗ್ಧತೆಯನ್ನು ಪ್ರತಿನಿಧಿಸುವಂತ ಒಂದು ಸಾಫ್ಟ್‌ ಟಾಯ್‌ ಅಂತಾನೇ ಹೇಳಬಹುದು. ಇದು ಒತ್ತಡವನ್ನು ಕಡಿಮೆ ಮಾಡಲು, ಸಂತೋಷವನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ದಂಪತಿಗಳು ಮತ್ತು ಪ್ರೇಮಿಗಳು ಟೆಡ್ಡಿಯನ್ನು ಪ್ರೀತಿ ಮತ್ತು ಕಾಳಜಿಯ ಸಂಕೇತವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಪ್ರೇಮಿಗಳು ಟೆಡ್ಡಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಟೆಡ್ಡಿ ಬೇರ್‌ ಇತಿಹಾಸ:

ನವೆಂಬರ್ 14, 1902 ರಂದು, ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್, ಮಿಸ್ಸಿಸ್ಸಿಪ್ಪಿಯ ಕಾಡಿಗೆ ಬೇಟೆಯಾಡಲು ಹೋಗಿದ್ದರು. ಅವರೊಂದಿಗೆ ಸಹಾಯಕ ಹೋಲ್ಟ್ ಕೊಲಿಯರ್ ಕೂಡಾ ಇದ್ರು. ಇಲ್ಲಿ ಕೊಲಿಯರ್ ಗಾಯಗೊಂಡ ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ನಂತರ ಅವರು ಕರಡಿಗೆ ಗುಂಡು ಹಾರಿಸಲು ರಾಷ್ಟ್ರಪತಿಗಳಿಂದ ಅನುಮತಿ ಕೋರಿದರು. ಆದರೆ ಗಾಯಗೊಂಡ ಕರಡಿಯನ್ನು ನೋಡಿದಾಗ ಅಧ್ಯಕ್ಷ ರೂಸ್ವೆಲ್ಟ್ ಅವರ ಹೃದಯ ಕರಗಿ, ಕರಡಿಯನ್ನು ಕೊಲ್ಲಲು ನಿರಾಕರಿಸಿದರು. ನಂತರ ನವೆಂಬರ್ 16 ರಂದು, ದಿ ವಾಷಿಂಗ್ಟನ್ ಪೋಸ್ಟ್‌ನ ವ್ಯಂಗ್ಯಚಿತ್ರಕಾರ ಕ್ಲಿಫರ್ಡ್ ಕೆ ಬೆರ್ರಿಮನ್ ಅವರು ನಡೆದ ಈ ಘಟನೆಯನ್ನು ಆಧರಿಸಿ ವ್ಯಂಗ್ಯಚಿತ್ರವನ್ನು ರಚಿಸಿದರು.

ಇದನ್ನೂ ಓದಿ: ಚಾಕೋಲೇಟ್ ದಿನ ಯಾವಾಗ? ಈ ದಿನದ ಇತಿಹಾಸ ಹಾಗೂ ವಿಶೇಷತೆಯೇನು? ಇಲ್ಲಿದೆ ಮಾಹಿತಿ

ಆಟಿಕೆ ತಯಾರಿಕಾ ಉದ್ಯಮಿ ಮಾರಿಸ್ ಮಿಚ್ಟಮ್ ಪತ್ರಿಕೆಯಲ್ಲಿ ಈ ವ್ಯಂಗ್ಯ ಚಿತ್ರವನ್ನು ನೋಡಿ ಕರಡಿ ಮರಿಯ ಆಕಾರದ ಆಟಿಕೆ ಮಾಡುವ ಬಗ್ಗೆ ಯೋಚಿಸಿದರು. ಅವರು ಅದನ್ನು ತಮ್ಮ ಪತ್ನಿ ರೋಸ್ ಅವರೊಂದಿಗೆ ವಿನ್ಯಾಸಗೊಳಿಸಿದರು ಮತ್ತು ಆ ಆಟಿಕೆಗೆ ‘ಟೆಡ್ಡಿ ಬೇರ್‌ʼ ಎಂದು ಹೆಸರಿಟ್ಟರು. ಟೆಡ್ಡಿ ಎಂಬ ಹೆಸರು ಇಡಲು ಕಾರಣವೆಂದರೆ ಅಧ್ಯಕ್ಷ ರೂಸ್ವೆಲ್ಟ್ ಅವರ ಅಡ್ಡಹೆಸರು ಟೆಡ್ಡಿ, ಆ ಆಟಿಕೆಗೆ ಟೆಡ್ಡಿ ಎಂಬ ಹೆಸರಿಡುವ ಮೂಲಕ ಆಟಿಕೆಯನ್ನು ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಸಮರ್ಪಿಸಿದರು. ನಂತರ ಅದು ಬಹಳ ಜನಪ್ರಿಯವಾಯಿತು. ಅದಲ್ಲದೆ ಟೆಡ್ಡಿ ಬೇರ್ ಪ್ರೀತಿಯ ಸಂಕೇತವಾಯಿತು ಮತ್ತು ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲು ಪ್ರಾರಂಭಿಸಲಾಯಿತು.

ಟೆಡ್ಡಿ ಡೇ ಮಹತ್ವ:

ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಡೇಯಂದು ದಂಪತಿಗಳು, ಪ್ರೇಮಿಗಳು ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ. ಹೀಗೆ ಪ್ರೀತಿಯನ್ನು ವ್ಯಕ್ತಪಡಿಸಲು ಟೆಡ್ಡಿ ಡೇ ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್