Teddy Day: ನಿಮ್ಮ ಮನದರಸಿಗೆ ಈ ಕೆಕ್ಯೂಟ್ ಟೆಡ್ಡಿ ಬೇರ್‌ಗಳನ್ನು ಗಿಫ್ಟ್ ನೀಡಿ
Valentine’s Week 2025: ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ವಿಶೇಷವಾಗಿ ಪ್ರೇಮಪಕ್ಷಿಗಳು ಪ್ರೇಮಿಗಳ ವಾರದಲ್ಲಿ ಪರಸ್ಪರ ಕ್ಯೂಟ್ ಗಿಫ್ಟ್‌ಗಳನ್ನು ನೀಡುವ ಮೂಲಕ ವ್ಯಾಲೆಂಟೈನ್ ವೀಕ್‌ನ್ನು ಬಹಳ ವಿಶೇಷವಾಗಿ ಸೆಲೆಬ್ರೇಟ್ ಮಾಡ್ತಾರೆ. ಹೀಗೆ ಫೆಬ್ರವರಿ 10 ರಂದು ಟೆಡ್ಡಿ ಡೇಯನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದಂದು ನಿಮ್ಮ ಮನದರಸಿಗೆ ಏನಾದ್ರೂ ಗಿಫ್ಟ್ ಕೊಟ್ಟು ಸಂತೋಷ ಪಡಿಸಬೇಕು ಎಂದು ಯೋಚಿಸುತ್ತಿದ್ದೀರಾ? ನಿಮಗಾಗಿ ಇಲ್ಲಿವೆ ಕೆಲವೊಂದು ಕ್ಯೂಟ್ ಗಿಫ್ಟ್ ಐಡಿಯಾ.

ಪ್ರೇಮಿಗಳಿಗೆಂದೇ ಇರುವ ಪ್ರೇಮಿಗಳ ದಿನ ಹತ್ತಿರವಾಗುತ್ತಿವೆ. ಪ್ರೇಮಿಗಳ ದಿನದ ಮೊದಲು ರೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಕಿಸ್ ಡೇ ಅಂತೆಲ್ಲಾ ವ್ಯಾಲೆಂಟೈನ್ ವೀಕ್‌ನ್ನು ಕೂಡಾ ಪ್ರೇಮಿಗಳು ಬಹಳ ಸಂಭ್ರಮದಿಂದ ಸೆಲೆಬ್ರೇಟ್ ಮಾಡ್ತಾರೆ. ಕೆಲ ಪ್ರೇಮಿಗಳಂತೂ ವ್ಯಾಲೆಂಟೈನ್ ವೀಕ್‌ನ ಪ್ರತಿ ದಿನ ಕೂಡಾ ಕೆಲವೊಂದು ವಿಶೇಷ ಗಿಫ್ಟ್‌ಗಳನ್ನು ನೀಡುವ ಮೂಲಕ ಸಂಗಾತಿಯನ್ನು ಖುಷಿ ಪಡಿಸುತ್ತಾರೆ. ಇನ್ನೂ ಫೆಬ್ರವರಿ 10 ರಂದು ಟೆಡ್ಡಿ ಡೇಯನ್ನು ಆಚರಿಸಲಾಗುತ್ತಿದ್ದು, ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲು ಟೆಡ್ಡಿ ಡೇಯನ್ನು ಪ್ರೇಮಿಗಳು ಆಚರಿಸುತ್ತಾರೆ. ಈ ವಿಶೇಷ ದಿನದಂದು ನಿಮ್ಮ ಸಂಗಾತಿಗೆ ಏನಾದ್ರೂ ಮುದ್ದು ಮುದ್ದಾದ ಗಿಫ್ಟ್ ನೀಡ್ಬೇಕು ಎಂಬ ಪ್ಲಾನ್‌ನಲ್ಲಿದ್ರೆ ನಿಮಗಾಗಿ ಇಲ್ಲಿವೆ ಕೆಲವೊಂದು ಕ್ಯೂಟ್ ಗಿಫ್ಟ್ ಐಡಿಯಾ.
ಟೆಡ್ಡಿ ಡೇಯಂದು ನಿಮ್ಮ ಪ್ರೀತಿಯ ಸಂಗಾತಿಗೆ ಕ್ಯೂಟ್ ಗಿಫ್ಟ್ ಕೊಡಲು ಇಲ್ಲಿವೆ ಐಡಿಯಾ:
ಗಾಢ ಕೆಂಪು ಬಣ್ಣದ ಕ್ಯೂಟ್ ಟೆಡ್ಡಿ:
ಹುಡುಗಿಯರಿಗಂತೂ ಟೆಡ್ಡಿ ಬೇರ್‌ಗಳೆಂದರೆ ಪಂಚಪ್ರಾಣ. ಹಾಗಿರುವಾಗ ಈ ಟೆಡ್ಡಿ ಡೇಯಂದು ಮುದ್ದಾದ ಕೆಂಪು ಬಣ್ಣದ ಟೆಡ್ಡಿ ಬೇರ್‌ಗಳನ್ನು ಗಿಫ್ಟ್ ನೀಡುವ ಮೂಲಕ ನಿಮ್ಮ ಮನದರಸಿಯನ್ನು ಸಂತೋಷಪಡಿಸಬಹುದು. ಇನ್ನೂ ಕೆಂಪು ಬಣ್ಣ ಪ್ರೀತಿಯ ಸಂಕೇತವಾಗಿರುವುದರಿಂದ ನೀವು ಪ್ರಪೋಸ್ ಮಾಡಲು ಬಯಸಿದರೆ ಕೆಂಪು ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಿ.
ಹಾರ್ಟ್ ಶೇಪ್ ಇರುವ ದೊಡ್ಡ ಟೆಡ್ಡಿ ಬೇರ್:
ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಐ ಲವ್ ಯು ಎಂದು ಬರೆದಿರುವ ಹಾರ್ಟ್ ಶೇಪ್ ಇರುವ ಕ್ಯೂಟ್ ಟೆಡ್ಡಿ ಬೇರ್‌ಗಳನ್ನು ಗಿಫ್ಟ್ ನೀಡಬಹುದು. ಈ ಒಂದು ಮುದ್ದಾದ ಉಡುಗೊರೆ ನಿಮ್ಮ ಸಂಗಾತಿಯ ಮನ ಗೆಲ್ಲುವುದಂತು ಗ್ಯಾರಂಟಿ.
ಸಣ್ಣ ಟೆಡ್ಡಿ ಬೇರ್:
ಬಜೆಟ್ ಕಡಿಮೆಯಿದ್ದರೆ, ನೀವು ಮುದ್ದಾದ ಸಣ್ಣ ಟೆಡ್ಡಿ ಬೇರ್ ಅನ್ನು ಸಹ ಉಡುಗೊರೆಯಾಗಿ ನೀಡಬಹುದು. ಇದಕ್ಕಾಗಿ ನೀವು ಮನೆಯಲ್ಲಿಯೇ ಉಡುಗೊರೆ ಬಾಕ್ಸ್ ತಯಾರಿಸಬಹುದು. ಚಾಕೊಲೇಟ್‌ಗಳು ಮತ್ತು ರಿಬ್ಬನ್‌ನಿಂದ ಅಲಂಕರಿಸಿ, ಅದರಲ್ಲಿ ಸಣ್ಣ ಟೆಡ್ಡಿ ಬೇರ್ ಇರಿಸಿ ಮತ್ತು ಅದನ್ನು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು.
ಟೆಡ್ಡಿ ಬೊಕೆ
ವ್ಯಾಲೆಂಟೈನ್ ವೀಕ್‌ನ ಟೆಡ್ಡಿ ಡೇ ಸಂದರ್ಭದಲ್ಲಿ ಏನಾದ್ರೂ ವಿಶೇಷ ಉಡುಗೊರೆ ನೀಡಲು ಬಯಸಿದರೆ ನೀವು ಟೆಡ್ಡಿ ಬೊಕೆಗಳನ್ನು ಗಿಫ್ಟ್ ನೀಡಬಹುದು. ಹೂ ಗುಚ್ಛದ ಹಾಗೆ ಟೆಡ್ಡಿ ಬೊಕೆಗಳನ್ನು ರೆಡಿ ಮಾಡಿ ಈ ಸುಂದರವಾದ ಹಾಗೂ ಮುದ್ದಾದ ಗಿಫ್ಟ್ ಉಡುಗೊರೆ ನೀಡಿ.
ಇದನ್ನೂ ಓದಿ: ಟೆಡ್ಡಿ ಡೇ ಏಕೆ ಆಚರಿಸಲಾಗುತ್ತದೆ? ಟೆಡ್ಡಿ ಡೇಗೂ ಪ್ರೇಮಿಗಳ ದಿನಕ್ಕೂ ಇರುವ ಸಂಬಂಧದ ಬಗ್ಗೆ ತಿಳಿಯಿರಿ
ಟೆಡ್ಡಿ ಕೀ ಚೈನ್
ಟೆಡ್ಡಿ ಬೇರ್ ಮಾತ್ರವಲ್ಲದೆ ಟೆಡ್ಡಿ ಕೀ ಚೈನ್‌ಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಈ ಒಂದು ಉಡುಗೊರೆ ಕಡಿಮೆ ಬಜೆಟ್ ಮಾತ್ರವಲ್ಲದೆ ತುಂಬಾ ಕ್ಯೂಟ್ ಆಗಿರುವಂತಹ ಉಡುಗೊರೆಗಳಲ್ಲಿ ಒಂದಾಗಿದೆ.
ಟೆಡ್ಡಿ ಡೈರಿ
ನಿಮ್ಮ ಸಂಗಾತಿ ದಿನಚರಿಯನ್ನು ಬರೆದಿಟ್ಟುಕೊಳ್ಳಲು ಇಷ್ಟಪಡುವವಳಾಗಿದ್ದರೆ, ನೀವು ಅವರಿಗೆ ಒಂದು ಟೆಡ್ಡಿ ಚಿತ್ರವಿರು ಕ್ಯೂಟ್ ಡೈರಿ ಬುಕ್ ಉಡುಗೊರೆಯಾಗಿ ನೀಡಬಹುದು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ಟೆಡ್ಡಿ ಬೇರ್ ಬದಲಿಗೆ ನೀವು ನಿಮ್ಮ ಸಂಗಾತಿಗೆ ಟೆಡ್ಡಿ ಡೈರಿ, ಸ್ಟಿಕಿ ನೋಟ್ಸ್, ಸ್ಟೇಷನರಿ ಕಿಟ್‌ಗಳು ಇತ್ಯಾದಿ ಉಪಯುಕ್ತ ಉಡುಗೊರೆಗಳನ್ನು ನೀಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ