ನಿಮ್ಮ ಪ್ರೇಮಿಗೆ ಈ ರೀತಿ ಗಿಫ್ಟ್ ಕೊಟ್ಟು ಅಪ್ಪುಗೆಯ ದಿನ ಆಚರಿಸಿ

Valentine's Week 2025: ಫೆಬ್ರವರಿ 12 ರಂದು ಹಗ್ ಡೇ. ಅಪ್ಪಿಕೊಳ್ಳುವುದರಿಂದ ದೈಹಿಕ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಪ್ರೇಮಿಗಳ ವಾರದಲ್ಲಿ ಆರನೇ ದಿನ ಆಚರಿಸಲಾಗುವ ಅಪ್ಪುಗೆಯ ದಿನದಂದು ನಿಮ್ಮ ಪ್ರೀತಿಪಾತ್ರರು, ಸಂಗಾತಿ, ಪ್ರೇಮಿಗೆ ಒಂದು ಬೆಚ್ಚಗಿನ ಅಪ್ಪುಗೆ ನೀಡಿ ನಿಮ್ಮ ಜೀವನದಲ್ಲಿ ಅವರೆಷ್ಟು ಮುಖ್ಯ ಎಂದು ತಿಳಿಸಿ. ಅದಲ್ಲದೇ, ನಿಮ್ಮ ಪ್ರೇಮಿಗೆ ಹಾಗೂ ಸಂಗಾತಿಗೆ ಈ ಬಾರಿಯ ಅಪ್ಪುಗೆಯ ದಿನದಂದು ಈ ರೀತಿ ಉಡುಗೊರೆ ನೀಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಈ ರೀತಿ ಉಡುಗೊರೆ ನೀಡುವ ಕ್ಷಣಗಳು ನೆನಪಿನ ಬುತ್ತಿನಲ್ಲಿ ಸದಾ ಇರುತ್ತದೆ. ಈ ಕುರಿತಾದ ಕೆಲವು ಗಿಫ್ಟ್ ಟಿಪ್ಸ್ ಗಳು ಇಲ್ಲಿವೆ.

ನಿಮ್ಮ ಪ್ರೇಮಿಗೆ ಈ ರೀತಿ ಗಿಫ್ಟ್ ಕೊಟ್ಟು ಅಪ್ಪುಗೆಯ ದಿನ ಆಚರಿಸಿ
ಸಾಂದರ್ಭಿಕ ಚಿತ್ರ
Edited By:

Updated on: Feb 11, 2025 | 5:59 PM

ಪ್ರೇಮಿಗಳ ವಾರ ಆರಂಭವಾಗಿದ್ದು, ವಿಶೇಷತೆಯನ್ನೊಳಗೊಂಡ ಪ್ರತಿಯೊಂದು ದಿನವನ್ನು ಪ್ರೇಮಿಗಳು ಹಾಗೂ ಸಂಗಾತಿಗಳಿಬ್ಬರೂ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಫೆಬ್ರವರಿ 12 ರಂದು ಅಪ್ಪುಗೆಯ ದಿನ. ಒಂದೇ ಒಂದು ಪ್ರೀತಿಯ ಅಪ್ಪುಗೆ ನಮ್ಮೆಲ್ಲಾ ನೋವಗಳನ್ನು ಮರೆಸುವ ಶಕ್ತಿ ಅಪ್ಪುಗೆಯಲ್ಲಿದೆ. ಹೀಗಾಗಿ ಈ ವಿಶೇಷ ದಿನದಂದು ಪ್ರೀತಿಯಿಂದ ಅಪ್ಪುಗೆ ನೀಡಿ ನಾನು ನಿನ್ನೊಂದಿಗೆ ಇರುವೆ ಎಂಬ ಧೈರ್ಯವನ್ನು ನೀಡುತ್ತಾರೆ. ತಮ್ಮ ಮನದರಸಿ ಅಥವಾ ಪ್ರೇಮಿಗೆ ಈ ಗಿಫ್ಟ್ ನೀಡುವ ಮೂಲಕ ಹಗ್ ಡೇಯನ್ನು ಇನ್ನಷ್ಟು ಸುಂದರ ಹಾಗೂ ರೋಮಾಂಚನಗೊಳಿಸುತ್ತಾರೆ.

  • ಜೊತೆಗೆ ಸಮಯ ಕಳೆಯಿರಿ : ಸಮಯಕ್ಕಿಂತ ದುಬಾರಿ ಬೆಲೆಯ ಗಿಫ್ಟ್ ಮತ್ತೊಂದಿಲ್ಲ. ಹೀಗಾಗಿ ಈ ವಿಶೇಷ ದಿನದಂದು ಕಡಿಮೆ ಬೆಳಕು, ಆರಾಮದಾಯಕ ಕುರ್ಚಿ ಮತ್ತು ನಿಮ್ಮ ಸಂಗಾತಿಯ ಮೆಚ್ಚಿನ ತಿಂಡಿಗಳು ಅಥವಾ ಪಾನೀಯ ರೆಡಿ ಮಾಡಿಕೊಳ್ಳಿ. ಇಬ್ಬರೂ ಜೊತೆಗೆ ಕುಳಿತುಕೊಂಡು ಹಳೆಯ ನೆನಪುಗಳನ್ನು ಕೆದಕುತ್ತ ಸಮಯ ಕಳೆಯಿರಿ.ಈ ರೀತಿ ಸಮಯ ಕೊಟ್ಟರೆ ಸಂಗಾತಿಗೆ ನಿಜಕ್ಕೂ ಖುಷಿಯಾಗುತ್ತದೆ.
  • ಕೂಪನ್‌ ವಿನ್ಯಾಸಗೊಳಿಸಿ ಸರ್ಪ್ರೈಸ್ ನೀಡಿ : ದಿನವಿಡೀ ಅಪ್ಪುಗೆಗಾಗಿ ನಿಮ್ಮ ಸಂಗಾತಿ ಪಡೆದುಕೊಳ್ಳಬಹುದಾದ ವಿಶೇಷ ಕೂಪನ್‌ಗಳನ್ನು ವಿನ್ಯಾಸಗೊಳಿಸಿ. ಇದನ್ನು ಸಂಗಾತಿಯೇ ಹುಡುಕುವಂತೆ ಮಾಡಿ. ಈ ಕೂಪನ್ ಮೇಲೆ ಒಂದಷ್ಟು ಮನಸ್ಸಿನ ಮಾತುಗಳನ್ನು ಅಕ್ಷರ ರೂಪದಲ್ಲಿ ಇಳಿಸಿ. ಈ ಕೂಪನ್ ನೊಂದಿಗೆ ನಿಮ್ಮ ಸಂಗಾತಿಯ ಇಷ್ಟದ ಒಂದೊಂದು ವಸ್ತುಗಳಿರಲಿ. ಈ ರೀತಿ ಸರ್ಪ್ರೈಸ್ ಗಿಫ್ಟ್ ಗಳು ನಿಮ್ಮನ್ನು ಪ್ರೀತಿಸುವ ವ್ಯಕ್ತಿಯ ಮನಸ್ಸಿಗೆ ಹತ್ತಿರವಾಗುತ್ತದೆ.
  • ಹಗ್ ಡೇ ಕುಶನ್ : ಅಪ್ಪುಗೆಯ ದಿನದಂದು ನಿಮ್ಮ ಸಂಗಾತಿಗೆ ಹಗ್ ಡೇ ಕುಶನ್ ಅನ್ನು ಉಡುಗೊರೆಯಾಗಿ ನೀಡಬಹುದು. ನಿಮಗೆ ಆನ್‌ಲೈನ್‌ನಲ್ಲಿಯೇ ಹಲವು ಆಯ್ಕೆಗಳು ಸಿಗುತ್ತವೆ. ವಿಶೇಷವೆಂದರೆ ಈ ದಿನ ಮುಗಿದರೂ ಈ ಉಡುಗೊರೆ ಅವರಿಗೆ ನಿಮ್ಮನ್ನು ನೆನಪಿಸುತ್ತಲೇ ಇರುತ್ತದೆ. ಅಪ್ಪುಗೆಯನ್ನು ಸಂಕೇತಿಸುವ ಈ ಉಡುಗೊರೆಯು ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾಗುತ್ತದೆ.
  • ಪ್ರೇಮ ಪತ್ರ : ದುಬಾರಿ ಬೆಲೆಯ ಉಡುಗೊರೆಗಿಂತ ಅಪ್ಪುಗೆಯ ದಿನಕ್ಕೆ ಪ್ರೇಮ ಪತ್ರ ನೀಡುವುದು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಸಂಗಾತಿಗಾಗಿ ಬರೆಯುವ ಈ ಪ್ರೇಮ ಪತ್ರದಲ್ಲಿ ನಿಮ್ಮ ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿ. ಒಟ್ಟಿಗೆ ಹಂಚಿಕೊಂಡ ವಿಶೇಷ ಅಪ್ಪುಗೆಗಳ ನೆನಪುಗಳನ್ನು ಕೆದಕಿ. ಇದು ಮಧುರವಾದ ಭಾವನೆಯನ್ನು ಉಂಟು ಮಾಡುವುದಲ್ಲದೇ ಮನಸ್ಸಿಗೆ ಖುಷಿ ನೀಡುತ್ತದೆ.
  • ಮಗ್ : ಈ ದಿನ ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವುದರ ಜೊತೆಗೆ, ನೀವು ವಿಶೇಷ ಉಡುಗೊರೆಯಾಗಿ ಮಗ್ ಆಯ್ಕೆ ಮಾಡಿಕೊಳ್ಳಬಹುದು. ಈ ಅನಿರೀಕ್ಷಿತ ಉಡುಗೊರೆ ನಿಮ್ಮ ಸಂಗಾತಿಯನ್ನು ತುಂಬಾ ಸಂತೋಷಪಡಿಸಬಹುದು. ಈ ಮಗ್ ಮೇಲೆ ನಿಮ್ಮಿಬ್ಬರ ಫೋಟೋ ಇರಲಿ, ಈ ಗಿಫ್ಟನ್ನು ದೀರ್ಘಕಾಲದವರೆಗೆ ಜೋಪಾನವಾಗಿ ಇಟ್ಟುಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ