Guava vs Banana: ಪೇರಳೆ ಅಥವಾ ಬಾಳೆಹಣ್ಣು, ಇದರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?
ಇತ್ತೀಚೆಗಿನ ದಿನಗಳಲ್ಲಿ ಒತ್ತಡ ಭರಿತ ಜೀವನ ಶೈಲಿ ಹಾಗೂ ಆರೋಗ್ಯದ ಕಡೆಗಿನ ನಿರ್ಲಕ್ಷ್ಯದಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಹೀಗಾಗಿ ಪೋಷಕಾಂಶಭರಿತ ಆಹಾರ ಹಾಗೂ ಹಣ್ಣುಗಳ ಸೇವನೆಯೂ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಿದೆ. ಅದರಲ್ಲಿಯೂ ಹೆಚ್ಚಿನವರು ಊಟವಾದ ಬಳಿಕ ಬಾಳೆಹಣ್ಣನ್ನು ಸೇವಿಸುತ್ತಾರೆ. ಆದರೆ ನೀವೇನಾದ್ರೂ ಬಾಳೆಹಣ್ಣು ಹಾಗೂ ಪೇರಳೆಯನ್ನು ಸೇವಿಸುತ್ತಿದ್ದರೆ ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಯಾವ ಉತ್ತಮ ಗೊತ್ತಾ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನನಿತ್ಯ ಸೇವಿಸುವ ಆಹಾರಗಳಲ್ಲಿ ಹಣ್ಣುಗಳನ್ನು ಸೇರಿಸುವುದು ಬಹಳ ಮುಖ್ಯ. ಎಲ್ಲರೂ ದಿನನಿತ್ಯ ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಪೇರಳೆ ಕೂಡ ಸೇರಿದೆ. ಎರಡೂ ಹಣ್ಣುಗಳು ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹಲವಾರು ಪ್ರಯೋಜನಗಳಿವೆ. ಆದರೆ ಪೇರಳೆ ಹಾಗೂ ಬಾಳೆಹಣ್ಣು, ಈ ಎರಡರಲ್ಲಿ ಆರೋಗ್ಯಕ್ಕೆ ಉತ್ತಮವಾದದ್ದು ಯಾವುದು ಎನ್ನುವ ಗೊಂದಲವಿರಬಹುದು? ಆ ಎಲ್ಲದಕ್ಕೂ ಉತ್ತರ ಈ ಕೆಳಗಿದೆ.
ಪೇರಳೆ ಹಣ್ಣಿನ ಅರೋಗ್ಯ ಲಾಭಗಳು
ಪೇರಳೆಯೂ ವಿಟಮಿನ್ ಸಿ, ಫೈಬರ್, ವಿಟಮಿನ್ ಎ, ಬಿ ಹಾಗೂ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಈ ಹಣ್ಣು ಆಮ್ಲೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ವೈರಸ್‌ಗಳಿಂದ ರಕ್ಷಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೀಗಾಗಿ ತೂಕ ನಿಯಂತ್ರಿಸಲು ಬಯಸುವವರಿಗೆ ಈ ಹಣ್ಣಿನ ಬೆಸ್ಟ್ ಆಯ್ಕೆ ಎನ್ನಬಹುದು. ಫೈಬರ್ ನಿಂದ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದರಿಂದ ಅತಿಯಾಗಿ ಸೇವಿಸುವುದನ್ನು ತಡೆಯುತ್ತದೆ. ಅದಲ್ಲದೇ, ಸೂರ್ಯನ ನೇರಳಾತೀತ ಕಿರಣಗಳಿಂದ ಉಂಟಾಗುವ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕ ಗುಣ ಇದರಲ್ಲಿ ಹೇರಳವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವಲ್ಲಿ ಮತ್ತು ಮುಟ್ಟಿನ ನೋವಿನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿಯಾಗಿದೆ. ಅದಲ್ಲದೇ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನ ಅರೋಗ್ಯ ಪ್ರಯೋಜನಗಳು ಇವು
ಹೆಚ್ಚಿನವರು ದಿನನಿತ್ಯ ಒಂದಾದರೂ ಬಾಳೆ ಹಣ್ಣನ್ನು ಆಹಾರದ ಭಾಗವಹಿಸಿಕೊಂಡಿರುತ್ತಾರೆ.ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ನಿಯಾಸಿನ್, ಮೆಗ್ನೀಸಿಯಮ್, ರಿಬೋಫ್ಲಾವಿನ್ ಮತ್ತು ವಿಟಮಿನ್ ಬಿ 6 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯೂ ಹಸಿವನ್ನು ಕಡಿಮೆ ಮಾಡಿ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಈ ಮೂಲಕ ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಹಾಗೂ ಹಲ್ಲುಗಳ ಆರೋಗ್ಯ ಬಹಳನೇ ಪ್ರಯೋಜನಕಾರಿಯಾಗಿದೆ. ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಾಗಿಸಲು ಸಹಾಯಕವಾಗಿದೆ.
ಇದನ್ನೂ ಓದಿ: ಅಪ್ಪುಗೆ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಹಗ್ ಡೇ ಯಾಕೆ ಮುಖ್ಯ ತಿಳಿದುಕೊಳ್ಳಿ
ಪೇರಳೆ ಅಥವಾ ಬಾಳೆಹಣ್ಣಿನಲ್ಲಿ ಯಾವುದು ಉತ್ತಮ?
ಪೇರಳೆ ಮತ್ತು ಬಾಳೆಹಣ್ಣು ಈ ಎರಡು ಹಣ್ಣುಗಳ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ನೀವೇನಾದ್ರೂ ಕಡಿಮೆ ಕ್ಯಾಲೋರಿ ಹೊಂದಿದ್ದು, ತೂಕ ನಿಯಂತ್ರಣಕ್ಕೆ ಸಹಾಯ ಮಾಡುವ ಹಣ್ಣನ್ನು ಹುಡುಕುತ್ತಿದ್ದರೆ ಪೇರಳೆಯೂ ಉತ್ತಮ ಆಯ್ಕೆಯಾಗಿದೆ ಎನ್ನಬಹುದು. ಆದರೆ ಈ ಬಾಳೆಹಣ್ಣು ದೇಹದ ಶಕ್ತಿಗಾಗಿ ಉತ್ತಮ ಆಯ್ಕೆಯಾಗಿದೆ, ವ್ಯಾಯಾಮದ ಮೊದಲು ಅಥವಾ ನಂತರ ಈ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಸಿಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




