Hug Day 2025 Date: ಅಪ್ಪುಗೆ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಹಗ್ ಡೇ ಯಾಕೆ ಮುಖ್ಯ ತಿಳಿದುಕೊಳ್ಳಿ
Valentine’s Week 2025: ಹಗ್ ಡೇ ಪ್ರೇಮಿಗಳಿಗೆ ಮಾತ್ರವಲ್ಲ, ಸ್ನೇಹಿತರು, ಕುಟುಂಬ ಮತ್ತು ಸಂಗಾತಿ ಎಲ್ಲರೂ ಆಚರಿಸಬಹುದಾದ ದಿನವಾಗಿದೆ. ಅಪ್ಪುಗೆಯು ಕೇವಲ ದೈಹಿಕ ಕ್ರಿಯೆಯಲ್ಲ; ಅದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ ಜನರು ವಿವಿಧ ಕಾರಣಗಳಿಗಾಗಿ ಪರಸ್ಪರ ತಬ್ಬಿಕೊಳ್ಳುತ್ತಾರೆ. ಯಾರನ್ನಾದರೂ ಸ್ವಾಗತಿಸಲು, ಬೇಕಾದ ವ್ಯಕ್ತಿಯ ಯಶಸ್ಸನ್ನು ಸಂಭ್ರಮಿಸಲು, ಯಾರನ್ನಾದರೂ ಸಮಾಧಾನಪಡಿಸಲು ಅಥವಾ ಅವರ ಪ್ರೀತಿಯನ್ನು ತೋರಿಸಲು. ಹೀಗೆ ಅಪ್ಪುಗೆ ಒಂದು ರೀತಿಯ ಪ್ರೀತಿ ವ್ಯಕ್ತಪಡಿಸುವ ಪರಿಯಾಗಿದೆ.

ಹಗ್ ಡೇಯನ್ನು (Hug Day 2025) ಪ್ರೇಮಿಗಳ ವಾರದ 6ನೇ ದಿನದಂದು ಅಂದರೆ ಫೆ. 12ರಂದು ಆಚರಿಸಲಾಗುತ್ತದೆ. ಇದು ಪ್ರೇಮಿಗಳಿಗೆ ಮಾತ್ರವಲ್ಲ, ಸ್ನೇಹಿತರು, ಕುಟುಂಬ ಮತ್ತು ಸಂಗಾತಿ ಎಲ್ಲರೂ ಆಚರಿಸಬಹುದಾದ ದಿನವಾಗಿದೆ. ಅಪ್ಪುಗೆಯು ಕೇವಲ ದೈಹಿಕ ಕ್ರಿಯೆಯಲ್ಲ; ಅದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ ಜನರು ವಿವಿಧ ಕಾರಣಗಳಿಗಾಗಿ ಪರಸ್ಪರ ತಬ್ಬಿಕೊಳ್ಳುತ್ತಾರೆ. ಯಾರನ್ನಾದರೂ ಸ್ವಾಗತಿಸಲು, ಬೇಕಾದ ವ್ಯಕ್ತಿಯ ಯಶಸ್ಸನ್ನು ಸಂಭ್ರಮಿಸಲು, ಯಾರನ್ನಾದರೂ ಸಮಾಧಾನಪಡಿಸಲು ಅಥವಾ ಅವರ ಪ್ರೀತಿಯನ್ನು ತೋರಿಸಲು. ಹೀಗೆ ಅಪ್ಪುಗೆ ಒಂದು ರೀತಿಯ ಪ್ರೀತಿ ವ್ಯಕ್ತಪಡಿಸುವ ಪರಿಯಾಗಿದೆ.
ಯಾಕಾಗಿ ಅಪ್ಪುಗೆ ಮುಖ್ಯವಾಗುತ್ತದೆ?
ಸಂಬಂಧಗಳಲ್ಲಿ ಕೆಲವೊಮ್ಮೆ ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ ಮತ್ತು ತಬ್ಬಿಕೊಳ್ಳುವುದು ಅಂತಹ ಒಂದು ಪ್ರಕ್ರಿಯೆ. ಆ ವ್ಯಕ್ತಿಯ ಸುಖ, ದುಃಖಗಳಲ್ಲಿ ನೀವಿದ್ದೀರಿ ಎಂಬುದನ್ನು ತೋರ್ಪಡಿಸುವ ವಿಧಾನ ಎಂದರೆ ತಪ್ಪಾಗುವುದಿಲ್ಲ. ಇದು ಭರವಸೆಯ ಭಾವನೆಯನ್ನು ನೀಡುತ್ತದೆ. ನಿಮಗೆ ತಿಳಿದಿರಬಹುದು ಅಪ್ಪುಗೆ ನಮ್ಮ ಮನಸ್ಸಿನ ಸಂತೋಷ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ. ಇದು ಮೌಖಿಕ ಸಂವಹನದ ಪ್ರಬಲ ಸಾಧನವಾಗಿದೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಆಕ್ಸಿಟೋಸಿನ್- ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತದೆ. ಈ ಅಪ್ಪುಗೆಯಲ್ಲಿ ವಿಭಿನ್ನ ಪ್ರಕಾರಗಳಿದ್ದು ಬಿಗಿಯಾದ ಹಗ್, ಸೈಡ್ ಹಗ್, ಬ್ಯಾಕ್ ಹಗ್ ಹೀಗೆ ನಾನಾ ರೀತಿಯ ಪ್ರಕಾರಗಳಿವೆ.
ಇದನ್ನೂ ಓದಿ: ನಿಮ್ಮ ಪ್ರೇಮಿಗೆ ಈ ರೀತಿ ಗಿಫ್ಟ್ ಕೊಟ್ಟು ಅಪ್ಪುಗೆಯ ದಿನ ಆಚರಿಸಿ
ಅಪ್ಪುಗೆಯ ದಿನದ ಮಹತ್ವ:
ಹಗ್ ಡೇ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ಉಷ್ಣತೆ, ಪ್ರೀತಿ ಮತ್ತು ಭಾವನಾತ್ಮಕ ಸಂಪರ್ಕವನ್ನು ಉತ್ತೇಜಿಸುತ್ತದೆ. ಅಪ್ಪುಗೆ ಸರಳವಾಗಿದ್ದರೂ ಅದರ ಶಕ್ತಿಯುತವಾದ ವಿಧಾನದ ಮೂಲಕ ಕಾಳಜಿ ಮತ್ತು ಬೆಂಬಲವನ್ನು ವ್ಯಕ್ತಪಡಿಸಬಹುದಾಗಿದೆ. ಅಪ್ಪುಗೆ ಒತ್ತಡವನ್ನು ಕಡಿಮೆ ಮಾಡುವ ಮತ್ತು ವ್ಯಕ್ತಿಗಳ ನಡುವಿನ ಬಂಧಗಳನ್ನು ಬಲಪಡಿಸುವ ಮಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ಅದು ಪದಗಳ ಅಗತ್ಯವಿಲ್ಲದೆ ಪ್ರೀತಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ವಿನಿಮಯ ಮಾಡುತ್ತದೆ. ಅದಲ್ಲದೆ ಅಪ್ಪಿಕೊಳ್ಳುವುದು ಒಳ್ಳೆಯ ಭಾವನೆ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ವೈಜ್ಞಾನಿಕವಾಗಿ ಸಾಬೀತಾಗಿರುವ ಪ್ರಯೋಜನಗಳನ್ನು ನೀಡುತ್ತದೆ. ಕೆಲವೊಮ್ಮೆ, ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ಸಾಕಾಗುವುದಿಲ್ಲ, ಆದರೆ ಬೆಚ್ಚಗಿನ ಅಪ್ಪುಗೆ ನಮ್ಮ ಭಾವನೆಗೆ ಮಾತು ನೀಡುತ್ತದೆ. ಜೊತೆಗೆ ಒಂದು ಅಪ್ಪುಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅದು ಒಂಟಿತನದ ಭಾವನೆಗಳನ್ನು ಕಡಿಮೆ ಮಾಡಿ ಖಿನ್ನತೆಯಿಂದ ಹೊರಬರುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.
ಹೀಗಾಗಿ ಪ್ರೇಮಿಗಳ ವಾರದ 6ನೇ ದಿನ ಬೆಚ್ಚಗಿನ ಅಪ್ಪುಗೆಯನ್ನು ಹಂಚಿಕೊಳ್ಳುವ ಮೂಲಕ ಆತ್ಮೀಯರಿಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ಅಪ್ಪುಗೆಯು ಯಾವುದೇ ಪದಗಳ ಅಗತ್ಯವಿಲ್ಲದೆ ಪ್ರೀತಿ ಮತ್ತು ಕಾಳಜಿಯ ಪರಿಮಾಣವನ್ನು ಹೇಳುತ್ತದೆ. ಅಪ್ಪುಗೆಯಲ್ಲಿ ಒಂದು ರೀತಿಯ ಭದ್ರತೆ, ಪ್ರೀತಿ, ಕಾಳಜಿಯನ್ನು ಅನುಭವಿಸಬಹುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




