ಅಡುಗೆ ಮನೆ(Kitchen) ಯನ್ನು ಮನೆಯ ಹೃದಯಭಾಗ ಎಂದು ಕರೆಯಾಲಾಗುತ್ತದೆ ಆದ್ದರಿಂದ ವಾಸ್ತು ಶಾಸ್ತ್ರದ ಸಲಹೆಯ ಪ್ರಕಾರ ಅಡುಗೆ ಮನೆಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಕುಟುಂಬದಲ್ಲಿ ಬಿರುಕು ಉಂಟಾಗದಂತೆ ಕಾಪಾಡುತ್ತದೆ ಎಂದು ವಾಸ್ತು ತಜ್ಞ ಅಶ್ನಾ ಧನ್ನಾಕ್ ಹೇಳುತ್ತಾರೆ. ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಇಡೀ ಮನೆಗೆ ಪಾಸಿಟಿವ್ ಎನರ್ಜಿ ನೀಡುತ್ತದೆ ಎಂದು ಇವರು ಹೇಳುತ್ತಾರೆ.
ನಿಮ್ಮ ಅಡುಗೆ ಕೋಣೆಯ ಗೋಡೆಗಳಿಗೆ ಗಾಢ ಬಣ್ಣದ ಪೈಂಟ್ ಬಳಸುವುದು ಉತ್ತಮ. ಹಳದಿ, ಕೆಂಪು ಮತ್ತು ಕೇಸರಿ ಬಣ್ಣಗಳನ್ನು ಬಳಸಿ. ಇದು ನಿಮ್ಮ ಅಡುಗೆ ಮನೆಗೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ. ಕಣ್ಣಿಗೆ ಕೂಡ ಆಕರ್ಷಕವಾಗಿ ಕಾಣುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಗ್ನಿಯ ಅಧಿಪತಿ ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಲೆಸಿದ್ದಾನೆ, ಅಂದರೆ ಅಡುಗೆಮನೆಯ ಸ್ಥಾನವು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿಬೇಕು. ಇದು ನಿಮಗೆ ಸಾಧ್ಯವಾಗದ್ದಿದ್ದರೆ ವಾಯುವ್ಯ ದಿಕ್ಕು ಕೂಡ ಸೂಕ್ತ. ಇದು ನಿಮ್ಮ ಕುಟುಂಬದವರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಗ್ಯಾಸ್ ಸ್ಟೌವ್ಗಳು, ಸಿಲಿಂಡರ್ಗಳು, ಮೈಕ್ರೋವೇವ್ ಓವನ್ಗಳನ್ನು ಆಗ್ನೇಯ ಭಾಗದಲ್ಲಿ ಇಡಬೇಕು.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ಹಾಸಿಗೆಯನ್ನು ಸ್ವಚ್ಛಗೊಳಿಸಲು ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ
ನಿಮ್ಮ ಅಡುಗೆ ಮನೆಯಲ್ಲಿ ನೀರಿಗೆ ಸಂಬಂಧ ಪಟ್ಟ ವಾಶ್ ಬೇಸಿನ್‌ಗಳು, ವಾಷಿಂಗ್ ಮೆಷಿನ್, ನೀರಿನ ಪೈಪ್‌ಗಳನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಕ್ಕುಗಳು ಬೆಂಕಿ ಮತ್ತು ನೀರಿನ ಅಂಶಗಳ ನಡುವೆ ಸಮತೋಲನವನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ನೀವು ಸಂಪತ್ತು ಮತ್ತು ಆರೋಗ್ಯದ ವಿಷಯದಲ್ಲಿ ಏಳಿಗೆ ಹೊಂದುತ್ತೀರಿ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಡಲು ಅಡುಗೆಮನೆಯ ನೈಋತ್ಯ ದಿಕ್ಕಿನ್ನು ಆಯ್ಕೆ ಮಾಡಿ. ಏಕೆಂದರೆ ಅದು ಅದೃಷ್ಟ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ ಎಂದು ಅಶ್ನಾ ಧನ್ನಾಕ್ ಹೇಳುತ್ತಾರೆ. ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಇಡೀ ಮನೆಗೆ ಪಾಸಿಟಿವ್ ಎನರ್ಜಿ ನೀಡುತ್ತದೆ ಎಂದು ಇವರು ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: