ಟೀ ಮಾಡೋ ಈ ದೃಶ್ಯ ನಿಜ ಅನ್ಕೊಂಡ್ರಾ? ಇದು ಎಐ ಕೈಚಳಕ ಕಣ್ರಿ

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಅನ್ನೋದು ದೊಡ್ಡ ಟ್ರೆಂಡ್‌ ಆಗಿದ್ದು, ಈ ಎಐ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಮನುಷ್ಯರಿಗಿಂತ ಸಾವಿರ ಪಟ್ಟು ವೇಗವಾಗಿ ಸ್ಮಾರ್ಟ್‌ ಆಗಿ ಕೆಲಸ ಮಾಡುವ ಈ ಎಐ ನಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಅನೇಕರಿದ್ದಾರೆ. ಅದರಲ್ಲೂ ಇದೀಗ ಗೂಗಲ್‌ ಎಐ ತಂತ್ರಜ್ಞಾನದ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈ ಎಐ ತಂತ್ರಜ್ಞಾನದಿಂದ ತಯಾರಿಸಿದ ವಿಡಿಯೋ ಎಷ್ಟು ರಿಯಲಿಸ್ಟಿಕ್‌ ಆಗಿದೆ ಎಂದ್ರೆ, ಜನ ಇದು ರಿಯಲ್‌, ಎಐ ದೃಶ್ಯವಲ್ಲ ಅಂತ ಹೇಳ್ತಿದ್ದಾರೆ.

ಟೀ ಮಾಡೋ ಈ ದೃಶ್ಯ ನಿಜ ಅನ್ಕೊಂಡ್ರಾ? ಇದು ಎಐ ಕೈಚಳಕ ಕಣ್ರಿ
ವೈರಲ್‌
Image Credit source: Social Media

Updated on: May 22, 2025 | 7:41 PM

ಆರ್ಟಿಫಿಯಲ್‌ ಇಂಟಲಿಜೆನ್ಸ್‌  (artificial intelligence) ಈ ಜಗತ್ತಿನಲ್ಲಿ ಎಷ್ಟು ಸದ್ದು ಮಾಡ್ತಿದೆ ಎಂದ್ರೆ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ವಹಿವಾಡು, ಆರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಟ್ರೆಂಡ್‌ ಸೃಷ್ಟಿಸಿರುವ ಅಲ್ಲದೆ ಎಐ ಕರಾಮತ್ತು ಎಷ್ಟಿದೆ ಅಂದ್ರೆ ಯಾವುದು ಸುಳ್ಳು, ಯಾವುದು ನಿಜ ಎಂಬುದು ಒಂದೂ ಗೊತ್ತಾಗೊಲ್ಲ. ಇಂತಹ ಸಾಕಷ್ಟು ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ನೀವು ಕೂಡಾ ನೋಡಿರಬಹುದಲ್ವಾ. ಅದೇ ರೀತಿಯ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಈ ದೃಶ್ಯ ನೈಜ್ಯವೇನೋ ಎಂಬಂತೆಯೇ ಇದೆ. ಗೂಗಲ್‌  (Google) Veo 3 ಹೆಸರಿನ ಈ ಹೊಸ ಐಎ ಜನರೇಟರ್‌ ತಂತ್ರಜ್ಞಾನವನ್ನು ಡೆವೆಲಪ್‌ ಮಾಡಿದ್ದು, ಈ ಎಐ ತಂತ್ರಜ್ಞಾನದಿಂದ ತಯಾರಿಸಿದ ವಿಡಿಯೋ ಎಷ್ಟು ನೈಜ್ಯವಾಗಿದೆ ಅಂದ್ರೆ, ಇದು ಎಐ ರಚಿತ ವಿಡಿಯೋವೆಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.

ಹೊಸ ಎಐ ತಂತ್ರಜ್ಞಾನ ಪರಿಚಯಿಸಿದ ಗೂಗಲ್:

ಈ ಹೊಸ ಎಐ ಜನರೇಟರ್‌ ತಂತ್ರಜ್ಞಾನವಾದ Veo 3 ಯನ್ನು ಗೂಗಲ್‌  ಪರಿಚಯಿಸಿದೆ. ಮೇ 20 ರಂದು ನಡೆದ ತನ್ನ ವಾರ್ಷಿಕ ಡೆವಲಪರ್‌ ಕಾನ್ಫರೆನ್ಸ್‌ನಲ್ಲಿ ಗೂಗಲ್‌ ತನ್ನ Veo 3 ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ಹೊಸ ಎಐ ತಂತ್ರಜ್ಞಾನ ಎಷ್ಟು ರಿಯಲಿಸ್ಟಿಕ್‌ ಆಗಿದೆ ಅಂದ್ರೆ  ವಿಡಿಯೋ ಮಾತ್ರವಲ್ಲ, ಇದರ ಧ್ವನಿ, ಆಡಿಯೋ ಎಲ್ಲವೂ ವಾಸ್ತವದಲ್ಲಿ ನಡೆದಂತೆಯೇ ಇದೆ. ಸದ್ಯ Veo 3 ಅಮೆರಿಕದ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ
ಇದು ಗೂಂಬೆ ಮಾದರಿಯ ನಿದ್ರೆ, ಇದರಿಂದ ಏನು ಪ್ರಯೋಜನ?
ಹಸಿದಾಗ ಮನುಷ್ಯನಿಗೆ ಏನಕ್ಕೆ ಕೋಪ ಬರುತ್ತೆ ಗೊತ್ತಾ?
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ವ್ಯಕ್ತಿತ್ವ ಪರೀಕ್ಷಿಸಿ
Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ?

ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು Indian Tech & Infra ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಈ ಎಐ ವಿಡಿಯೋದಲ್ಲಿ ಗ್ಯಾಸ್‌ ಸ್ಟವ್‌ ಮೇಲೆ ಚಹಾ ಮಾಡಿ, ನಂತರ ಆ ಚಹಾವನ್ನು ಲೋಟಕ್ಕೆ ಹಾಕುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಮತ್ತು ಆಡಿಯೋ ಎಷ್ಟು ರಿಯಲಿಸ್ಟಿಕ್‌ ಆಗಿದೆ ಅಂದ್ರೆ ಇದು ನಿಜಕ್ಕೂ ಎಐ ರಚಿತ ವಿಡಿಯೋನಾ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ? ಮಾಡುವುದು ತುಂಬಾ ಸುಲಭ

ಮೇ 21 ರಂದು ಶೇರ್‌ ಮಾಡಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜಕ್ಕೂ ಗಂಭೀರವಾಗಿದೆ, ಇದರಿಂದ ಇನ್ನು ಎಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಾರೋʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೌದು ಇದು ನಿಜಕ್ಕೂ ರಿಯಲಿಸ್ಟಿಕ್‌ ಆಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಂಬಲಸಾಧ್ಯವಾಗಿದೆʼ ಎಂದು ಆಶ್ಚರ್ಯಪಟ್ಟಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ