ವಿಟಮಿನ್ ಇ ಕ್ಯಾಪ್ಸುಲ್‌ಗಳು ಚರ್ಮ ಮತ್ತು ಕೂದಲಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಈ ವಿಟಮಿನ್ ಇ ಕ್ಯಾಪ್ಸುಲ್‌ಗಳು ಹಲವು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇವುಗಳನ್ನು ಮುಖ ಹಾಗೂ ಕೂದಲಿನ ಮೇಲೆ ಯಾವ ರೀತಿ ಬಳಸಬೇಕು ಮತ್ತು ಇದು ಯಾವೆಲ್ಲಾ ಉಪಯೋಗವನ್ನು ಹೊಂದಿದೆ ಎಂಬದರ ಬಗ್ಗೆ ನಿಮಗೆ ತಿಳಿದಿಲ್ಲವೇ? ಅದನ್ನು ಹೇಗೆ ಬಳಸುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಟಮಿನ್ ಇ ಕ್ಯಾಪ್ಸುಲ್‌ನ್ನು ತೆರೆಯಿರಿ ಮತ್ತು ಅದರಲ್ಲಿನ ಎಣ್ಣೆಯನ್ನು ನೇರವಾಗಿ ನಿಮ್ಮ ಚರ್ಮಕ್ಕೆ ಅನ್ವಯಿಸಿ. ನಿಧಾನವಾಗಿ ಎಣ್ಣೆಯನ್ನು ಚರ್ಮಕ್ಕೆ ಅನ್ವಯಿಸಿ ಇದು ನಿಮ್ಮ ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡಲು ಸಹಕರಿಸುತ್ತದೆ. ಶುಷ್ಕ ಚರ್ಮವನ್ನು ಹೊಂದಿರುವವರಿಗೆ ವಿಟಮಿನ್ ಇ ಕ್ಯಾಪಸುಲ್ ವಿಶೇಷವಾಗಿ ಪ್ರಯೋಜಕಾರಿಯಾಗಿದೆ.
ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಳ್ಳಿ ಮತ್ತು ರಾತ್ರಿಯಲ್ಲಿ ನೀವು ಮಲಗುವ ಮೊದಲು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಅದನ್ನು ಅನ್ವಯಿಸಿ. ವಿಟಮಿನ್ ಇ ಕ್ಯಾಪ್ಸುಲ್ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.
ವಿಟಮಿನ್ ಇ ಕ್ಯಾಪ್ಸುಲ್ ಬಿಸಿಲಿನಿಂದ ಸುಟ್ಟ ಚರ್ಮವನ್ನು ಶಮನಗೊಳಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ.
ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ಮತ್ತು ಸಹಜ ಸ್ಥಿತಿಗೆ ಮರಳಿಸಲು ವಿಟಮಿನ್ ಇ ಕ್ಯಾಪ್ಸುಲ್ ಸಹಾಯ ಮಾಡುತ್ತದೆ. ಗಾಯವಾಗಿರುವ ಸ್ಥಳಕ್ಕೆ ಪ್ರತಿದಿನ ವಿಟಮಿನ್ ಇ ಎಣ್ಣೆಯನ್ನು ಅನ್ವಯಿಸಿ.
ವಿಟಮಿನ್ ಇ ಎಣ್ಣೆಯನ್ನು ನಿಮ್ಮ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಅದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್ ಇ ಯ ರಕ್ತ ಪರಿಚಲನೆಯನ್ನು ವರ್ಧಿಸುವ ಗುಣಲಕ್ಷಣಗಳ ಪರಿಣಾಮವಾಗಿ, ಅದು ಕೂದಲಿನ ಕಿರುಚೀಲವನ್ನು ಪೋಷಿಸುತ್ತದೆ.
ಇದನ್ನೂ ಓದಿ: ಡಾರ್ಕ್ ಸರ್ಕಲ್ಸ್ ಬರಲು ಕಾರಣವೇನು? ಜೀವನಶೈಲಿಯೋ..ಅನುವಂಶಿಕ ಸಮಸ್ಯೆಯೋ?
ನಿಮ್ಮ ನಿಯಮಿತ ಕಂಡಿಷನರ್‌ಗೆ ಕೆಲವು ಹನಿ ವಿಟಮಿನ್ ಇ ಎಣ್ನೆಯನ್ನು ಸೇರಿಸುವುದರಿಂದ ನಿಮ್ಮ ಕೂದಲನ್ನು ಪೋಷಣೆ ಮಾಡಲು ಅದು ಸಹಾಯ ಮಾಡುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.
ಕೂದಲಿನ ಒಡೆಯುವುದನ್ನು ವಿಟಮಿನ್ ಇ ಎಣ್ಣೆಯಿಂದ ನಿವಾರಿಸಬಹುದು. ಕೂದಲಿನ ತುದಿಗೆ ವಿಟಮಿನ್ ಇ ಎಣ್ಣೆಯನ್ನು ಅನ್ವಯಿಸುವ ಮೂಲಕ ಕೂದಲು ಭಾಗವಾಗುವುದನ್ನು ತಡೆಯಬಹುದು. ನಿಮ್ಮ ಚರ್ಮ ಅಥವಾ ಕೂದಲಿನ ಮೇಲೆ ಉತ್ತಮ ಗುಣಮಟ್ಟದ ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಮಾತ್ರ ಬಳಸಿ. ಮತ್ತು ಇದು ನೈಸರ್ಗಿಕ ಪದಾರ್ಥಗಳಿಂದ ತಯಾರಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಟಮಿನ್ ಈ ಕ್ಯಾಪ್ಸುಲ್‌ಗಳ ನಿಯಮಿತ ಬಳಕೆಯು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ :