ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಗ್ರೀನ್ ಟೀಯನ್ನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಡಯಟ್ ಮಾಡುವವರು ಮೊದಲು ಆಯ್ಕೆ ಮಾಡುವುದೇ ಈ ಗ್ರೀನ್ ಟೀಯನ್ನು. ಇದರ ನಿಯಮಿತ ಸೇವನೆಯಿಂದ ದೀರ್ಘಕಾಲದ ಕಾಯಿಲೆಗಳು ಬರದಂತೆ ತಡೆಯುತ್ತದೆ. ಅದಲ್ಲದೇ ತೂಕ ಇಳಿಕೆಗೂ ಸಹಕಾರಿಯಾಗಿದೆ. ಅದಲ್ಲದೇ ಒಮ್ಮೆ ಬಳಸಿದ ಗ್ರೀನ್ ಟೀ ಬ್ಯಾಗನ್ನು ಮತ್ತೆ ವಿವಿಧ ರೀತಿಯಲ್ಲಿ ಮರುಬಳಕೆ ಮಾಡಬಹುದು.
ಬಳಸಿದ ಗ್ರೀನ್ ಟೀ ಬ್ಯಾಗಿನ ಮರುಬಳಕೆ ಹೀಗಿರಲಿ
- ಬಳಸಿದ ಗ್ರೀನ್ ಟೀ ಬ್ಯಾಗ್ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಈ ಒಣಗಿದ ಗ್ರೀನ್ ಟೀಯನ್ನು ಕಬೋರ್ಡ್ ಗೆ ಹಾಕಿದರೆ ಕೆಟ್ಟ ವಾಸನೆ ಬರುವುದಿಲ್ಲ.
- ಹೂವಿನ ಗಿಡಗಳಿಗೆ, ಸಸ್ಯಗಳ ಬುಡಕ್ಕೆ ಗ್ರೀನ್ ಟೀ ಪುಡಿಯನ್ನು ಹಾಕಿದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ.
- ಕೆಲವೊಮ್ಮೆ ಫ್ರಿಡ್ಜ್ ನಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾದಾಗ ಬಿಸಿಲಿನಲ್ಲಿ ಒಣಗಿಸಿದ ಗ್ರೀನ್ ಟೀ ಬ್ಯಾಗನ್ನು ಫ್ರಿಡ್ಜ್ ನಲ್ಲಿಟ್ಟರೆ ಕೆಟ್ಟ ವಾಸನೆ ದೂರವಾಗುತ್ತದೆ.
- ಈ ಗ್ರೀನ್ ಟೀಯನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಂಡರೆ ಕೂದಲು ಮೃದುವಾಗುವುದಲ್ಲದೆ ಹೊಳಪು ಹೆಚ್ಚಾಗುತ್ತದೆ.
- ನಾನ್ ಸ್ಟಿಕ್ ಪ್ಯಾನ್ ಗಳನ್ನು ಜಿಡ್ಡಿನಾಂಶವಿರುತ್ತದೆ. ಎಷ್ಟೇ ತೊಳೆದರೂ ಎಣ್ಣೆಯ ಅಂಶ ಬಿಡುವುದಿಲ್ಲ. ಗ್ರೀನ್ ಟೀ ಪುಡಿ ಬಳಸಿ ತೊಳೆದರೆ ಎಣ್ಣೆ ಅಂಶವು ಬಿಡುತ್ತದೆ.
- ಒಂದು ಬಕೆಟ್ ನೀರಿನಲ್ಲಿ ಬಳಸಿದ ಟೀ ಬ್ಯಾಗ್ ಹಾಕಿ, ಅದರಲ್ಲಿ ಪಾದಗಳನ್ನು ಇಟ್ಟರೆ ಪಾದದ ಬಿರುಕು ಹಾಗೂ ಒರಟು ಇಲ್ಲವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ