ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ದಪ್ಪಯಿದ್ದವರು ಸಣ್ಣಗಾಗಲು, ಸಣ್ಣ ದಪ್ಪವಾಗಲು ನಾನಾ ರೀತಿ ಪ್ರಯತ್ನ ಮಾಡುತ್ತಿರುತ್ತಾರೆ. ಈ ವೇಳೆ ತಮ್ಮ ದೇಹದ ತೂಕ ಎಷ್ಟಿದೆ ಎಂದು ನೋಡಿಕೊಳ್ಳುತ್ತಾರೆ. ಆದರೆ ಕೆಲವು ಸನ್ನಿವೇಶಗಳಲ್ಲಿ ದೇಹದ ತೂಕವನ್ನು ಪರೀಕ್ಷಿಸುವುದರಿಂದ ನಿಮ್ಮ ತೂಕದ ಸರಿಯಾದ ಮಾಹಿತಿಯು ಸಿಗುವುದಿಲ್ಲ. ಹೀಗಾಗಿ ನಿಮ್ಮ ತೂಕವನ್ನು ನೋಡುವಾಗ ಈ ಕೆಲವು ತಪ್ಪುಗಳನ್ನು ಮಾಡಬೇಡಿ.
- ವ್ಯಾಯಾಮ ಮಾಡಿದ ತಕ್ಷಣ ತೂಕ ಪರೀಕ್ಷಿಸಬೇಡಿ : ಕೆಲವರು ತೂಕ ಇಳಿಸಿಕೊಳ್ಳಲು ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ವೇಳೆಯಲ್ಲಿ ತೂಕವನ್ನು ಪರಿಶೀಲಿಸಬಾರದು. ವ್ಯಾಯಾಮ ಮಾಡಿದ ಬಳಿಕ ಬೆವರು ಹಾಗೂ ದೇಹದಲ್ಲಿ ದ್ರವದ ಕೊರತೆ ಇರುವ ಕಾರಣ ತೂಕದಲ್ಲಿ ಸ್ವಲ್ಪ ಏರಿಳಿತ ಕಂಡು ಸರಿಯಾದ ಮಾಹಿತಿ ಸಿಗುವುದಿಲ್ಲ.
- ಊಟ ಮಾಡಿದ ತಕ್ಷಣವೇ ತೂಕವನ್ನು ನೋಡಬೇಡಿ : ಊಟ ಮಾಡಿದಾಗ ವೇಳೆ ಸೇವಿಸಿರುವ ಆಹಾರ ಇನ್ನೂ ಜೀರ್ಣವಾಗುತ್ತಿರುತ್ತದೆ. ಈ ವೇಳೆಯಲ್ಲಿ ಆಹಾರ ಹಾಗೂ ನೀರನ್ನು ಸಾಕಷ್ಟು ಪ್ರಮಾಣ ಕುಡಿದಿರುವುದರಿಂದ ಸರಿಯಾದ ತೂಕ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
- ಋತುಚಕ್ರದ ಸಮಯದಲ್ಲಿ ತೂಕ ಪರೀಕ್ಷಿಸುವುದನ್ನು ತಪ್ಪಿಸಿ : ತಿಂಗಳ ಮುಟ್ಟಿನ ದಿನಾಂಕದ ಒಂದು ವಾರದ ಮೊದಲು ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ದೇಹವು ನೀರು ಹಿಡಿದಿಟ್ಟುಕೊಳ್ಳುವುದು, ಹೊಟ್ಟೆ ಉಬ್ಬುವುದು ಹೀಗೆ ನಾನಾ ಬದಲಾವಣೆಗಳಾಗುವುದು ಸಹಜ. ಈ ಸಮಯದಲ್ಲಿ ತೂಕ ನೋಡಿದರೆ ನಿಮ್ಮ ದೇಹದ ತೂಕವು ಹೆಚ್ಚಾದಂತೆ ಕಾಣುತ್ತದೆ, ಹೀಗಾಗಿ ಈ ಅವಧಿಯಲ್ಲಿ ತೂಕ ಪರೀಕ್ಷಿಸಿಕೊಳ್ಳಬೇಡಿ.
- ಮಲಬದ್ಧತೆಯ ಸಮಸ್ಯೆಯಿದ್ದಲ್ಲಿ ತೂಕ ಪರೀಕ್ಷೆ ಬೇಡ : ಮಲಬದ್ಧತೆ ಸಮಸ್ಯೆಯಿದ್ದಲ್ಲಿ ಆಹಾರ ಜೀರ್ಣ ಆಗದೇ ಇದ್ದು ಕೆಲವು ದಿನದ ಆಹಾರ ನಿಮ್ಮ ಹೊಟ್ಟೆಯಲ್ಲಿ ಶೇಖರಣೆ ಆಗಿರುತ್ತದೆ. ಈ ವೇಳೆಯಲ್ಲಿ ತೂಕ ಪರೀಕ್ಷಿಸಿದರೆ ದೇಹದ ತೂಕವು ಹೆಚ್ಚಿರುವಂತೆ ತೋರಿಸುತ್ತದೆ. ಹೀಗಾಗಿ ಈ ಸಮಯದಲ್ಲಿ ತೂಕ ಪರೀಕ್ಷಿಸುವುದು ಸರಿಯಲ್ಲ.
- ಎದ್ದ ತಕ್ಷಣ ತೂಕ ಪರೀಕ್ಷಿಸಿಕೊಳ್ಳಬೇಡಿ : ಕೆಲವರು ಎದ್ದ ತಕ್ಷಣ ತೂಕ ನೋಡಿಕೊಳ್ಳುತ್ತಾರೆ. ಆದರೆ ರಾತ್ರಿ ತಡವಾಗಿ ಊಟ ಮಾಡಿದ್ದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗಿರುವುದಿಲ್ಲ. ನಿದ್ದೆ ಮಾಡಿ ಎದ್ದ ದಿನ ಹಾಗೂ ಆಹಾರವು ಸಂಪೂರ್ಣವಾಗಿ ಜೀರ್ಣಗೊಂಡ ಸಮಯದಲ್ಲಿ ತೂಕ ನೋಡುವುದು ಒಳ್ಳೆಯದು. ಇಲ್ಲದ್ದಿದರೆ ಬೆಳಗ್ಗೆ ಎದ್ದು ನೀವು ತೂಕ ನೋಡಿಕೊಂಡಾಗ ಸಹಜವಾಗಿಯೇ ತೂಕ ಹೆಚ್ಚು ತೋರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ