
ಕಮಲದ ಬೀಜಗಳು (Lotus Seeds) ಎಂದು ಕರೆಯಲ್ಪಡುವ ಮಖಾನಾಗಳು ಅವುಗಳಲ್ಲಿ ತುಂಬಿರುವ ಪೌಷ್ಠಿಕಾಂಶದಿಂದ ಹೆಸರುವಾಸಿಯಾಗಿವೆ. ಇದನ್ನು ಆಗಾಗ ಉಪವಾಸದ ಆಹಾರವಾಗಿ ಬಳಸುತ್ತಿದ್ದರೂ, ಇತ್ತೀಚೆಗೆ ಜನರು ವಿವಿಧ ರೀತಿಯಲ್ಲಿ ರುಚಿಕರವಾದ ತಿಂಡಿಯನ್ನು ತಯಾರಿಸಬಹುದು ಎಂದು ಅರಿತುಕೊಂಡಿದ್ದು ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅಂತಹ ಒಂದು ಶ್ರೇಷ್ಠ ಮತ್ತು ಆರೋಗ್ಯಕರ ವಿಧಾನವೆಂದರೆ ಮಖಾನಾಗಳನ್ನು ತುಪ್ಪದೊಂದಿಗೆ ಹುರಿಯುವುದು, ಇದು ಪಾಕಶಾಲೆಯ ಸಂಪ್ರದಾಯವಾಗಿದ್ದು, ಇದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಲ್ಪಟ್ಟಿದೆ. ತುಪ್ಪವು ಮಖಾನಾಗಳಿಗೆ ಆಹ್ಲಾದಕರ ಕುರುಕಲು ಮತ್ತು ಬೆಣ್ಣೆಯ ಸಾರವನ್ನು ನೀಡುವುದಲ್ಲದೆ ತುಪ್ಪದ ಆರೋಗ್ಯ ಪ್ರಯೋಜನಗಳನ್ನು ಸಹ ಪರಿಚಯಿಸುತ್ತದೆ. ರುಚಿ ಮತ್ತು ಯೋಗಕ್ಷೇಮ ಎರಡನ್ನೂ ಆನಂದಿಸಲು ಇದು ಸಂತೋಷದಾಯಕ ಮಾರ್ಗವಾಗಿದೆ. ನಾವೆಲ್ಲರೂ ತುಪ್ಪದಲ್ಲಿ ಹುರಿದ ಮಖಾನಾಗಳನ್ನು ಏಕೆ ಸೇವಿಸಬೇಕು ಎಂದು ತಿಳಿಯಲು ಫರಿದಾಬಾದ್ನ ಏಷ್ಯನ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞ ಕೋಮಲ್ ಮಲಿಕ್ ಅವರೊಂದಿಗೆ ಹೆಲ್ತ್ ಶಾಟ್ಸ್ ಮಾತನಾಡಿದ್ದು ಅವರು ಹೇಳುವ ಪ್ರಕಾರ “ತುಪ್ಪದಲ್ಲಿ ಹುರಿದ ಮಖಾನಾವನ್ನು ತಿನ್ನುವುದು, ಅದರ ಪ್ರಯೋಜನಗಳನ್ನು ಪಡೆಯಲು ಸುಲಭ ಮತ್ತು ಅತ್ಯಂತ ರುಚಿಕರವಾದ ಮಾರ್ಗಗಳಲ್ಲಿ ಒಂದಾಗಿದೆ. ಜೊತೆಗೆ ಇದು ನೀವು ಇಷ್ಟಪಡುವಂತ ರುಚಿಯನ್ನು ನೀಡುತ್ತದೆ.
ಮಖಾನಾ ನಿಜಕ್ಕೂ ಆರೋಗ್ಯಕರ ತಿಂಡಿ ಆಯ್ಕೆಯಾಗಿದೆ. ಈ ಕುರುಕಲು, ಬೀಜಗಳು ಕಡಿಮೆ ಕ್ಯಾಲೊರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತವೆ, ದೇಹದ ತೂಕವನ್ನು ಒಂದೇ ರೀತಿ ಕಾಪಾಡಿಕೊಳ್ಳಬೇಕು ಎಂದು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅವು ಗ್ಲುಟೆನ್ ಮುಕ್ತವಾಗಿವೆ, ಹಾಗಾಗಿ ಇದು ಗ್ಲುಟೆನ್ ಸೂಕ್ಷ್ಮತೆ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಮಖಾನಾದಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ರಂಜಕ ಸೇರಿದಂತೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಅವುಗಳ ಹೆಚ್ಚಿನ ಫೈಬರ್ ಅಂಶವು ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಅವು ಫ್ಲೇವನಾಯ್ಡ್ಗಳಂತಹ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರುಚಿಕರ ಮತ್ತು ಪೌಷ್ಟಿಕವಾಗಿರುವ ಇದನ್ನು ತುಪ್ಪದೊಂದಿಗೆ ಸಂಯೋಜಿಸಿದಾಗ ಇನ್ನಷ್ಟು ಪೌಷ್ಟಿಕ ಆಹಾರವಾಗುತ್ತದೆ.
ತುಪ್ಪದಲ್ಲಿ ಹುರಿದ ಕಮಲದ ಬೀಜಗಳು ಅದ್ಭುತ ಮತ್ತು ಆರೋಗ್ಯಕರ ತಿಂಡಿಯ ಆಯ್ಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದರ ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಅಂಶವು ಕೆಲವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಂಡು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ. ತುಪ್ಪದಲ್ಲಿ ಹುರಿದ ಮಖಾನಾದ 7 ಪ್ರಯೋಜನಗಳು ಇಲ್ಲಿವೆ:
1. ಪರಿಮಳ ಹೆಚ್ಚಿಸುತ್ತದೆ:
ಮಖಾನಾವನ್ನು ತುಪ್ಪದಲ್ಲಿ ಹುರಿಯುವುದು ಸಮೃದ್ಧ, ಬೆಣ್ಣೆಯ ಪರಿಮಳವನ್ನು ನೀಡುತ್ತದೆ. ಅದರ ಪರಿಮಳವನ್ನು ಮತ್ತಷ್ಟು ಹೆಚ್ಚಿಸಲು ನೀವು ಅದರ ಮೇಲೆ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸಹ ಸೇರಿಸಬಹುದು.
2. ಪೋಷಕಾಂಶ ಭರಿತ ತಿಂಡಿಗಳು:
ತುಪ್ಪವು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ ಮತ್ತು ವಿಟಮಿನ್ ಎ, ಡಿ, ಇ ಮತ್ತು ಕೆ ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಖಾನಾವನ್ನು ತುಪ್ಪದಲ್ಲಿ ಹುರಿಯುವುದರಿಂದ ಅದರ ಪೌಷ್ಠಿಕಾಂಶ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಈ ಆಹಾರವು ಸಮತೋಲಿತ ಮತ್ತು ಪೋಷಣೆಯ ಭರಿತ ತಿಂಡಿಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
3. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ತುಪ್ಪವು ಬ್ಯೂಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಖಾನಾ ಅಥವಾ ಕಮಲದ ಬೀಜಗಳನ್ನು ತುಪ್ಪದಲ್ಲಿ ಹುರಿದು ತಿನುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಜನರಿಗೆ ಇದು ವಿಶೇಷವಾಗಿ ಒಳ್ಳೆಯದು.
4. ಹಸಿವನ್ನು ನಿಯಂತ್ರಿಸುತ್ತದೆ:
ಮಖಾನಾದಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಫೈಬರ್ ಅಧಿಕವಾಗಿರುತ್ತದೆ. ಹಾಗಾಗಿ ಇದನ್ನು ತುಪ್ಪದಲ್ಲಿ ಹುರಿಯುವುದರಿಂದ, ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುವ ತೃಪ್ತಿದಾಯಕ ತಿಂಡಿಯಾಗುತ್ತದೆ, ಇದು ತಮ್ಮ ತೂಕವನ್ನು ನಿರ್ವಹಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
5. ಶಕ್ತಿಯನ್ನು ಹೆಚ್ಚಿಸುತ್ತದೆ:
ತುಪ್ಪವು ಶಕ್ತಿಯನ್ನು ಒದಗಿಸುತ್ತದೆ, ಮತ್ತು ಅದರಲ್ಲಿ ಮಖಾನಾವನ್ನು ಹುರಿಯುವುದರಿಂದ ತ್ವರಿತ ಮತ್ತು ಸುಸ್ಥಿರ ಶಕ್ತಿ ಪ್ರಾಪ್ತಿಯಾಗುತ್ತದೆ. ಹಾಗಾಗಿ ತಿಂಡಿಗಾಗಿ ಇದೊಂದು ಅತ್ಯುತ್ತಮ ಆಯ್ಕೆಯಾಗುತ್ತದೆ. ಮತ್ತು ಅದಕ್ಕಾಗಿಯೇ ಇದನ್ನು ಉಪವಾಸದ ಅವಧಿಯಲ್ಲಿ ಲಘು ಆಹಾರವಾಗಿ ಆನಂದಿಸಲಾಗುತ್ತದೆ.
6. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ:
ತುಪ್ಪವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಮತ್ತು ಮಖಾನಾದೊಂದಿಗೆ ಸಂಯೋಜಿಸಿದಾಗ, ಇದು ದೇಹವನ್ನು ಫ್ರೀ ರಾಡಿಕಲ್ಸ್ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
7. ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುತ್ತದೆ:
ಈ ಪ್ರಯೋಜನಗಳ ಹೊರತಾಗಿ, ತುಪ್ಪದಲ್ಲಿ ಹುರಿದ ಮಖಾನಾವನ್ನು ಸೇವಿಸುವುದರಿಂದ ಇದರಲ್ಲಿರುವ ಕಡಿಮೆ ಸೋಡಿಯಂ ಅಂಶದಿಂದಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆಹಾರ ತಜ್ಞ ಕೋಮಲ್ ಮಲಿಕ್ ಅವರು ಹೇಳುವ ಪ್ರಕಾರ “ತುಪ್ಪದ ಹೊರತಾಗಿ, ಮಖಾನಾವನ್ನು ಜೀರಿಗೆ, ಕರಿ ಮೆಣಸು ಮತ್ತು ಉಪ್ಪಿನಂತಹ ಸುವಾಸನೆಯುಕ್ತ ಮಸಾಲೆಗಳೊಂದಿಗೆ ಹುರಿಯಬಹುದು. ಇದು ಪರಿಮಳವನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚು ಆಕರ್ಷಕ ಮತ್ತು ರುಚಿಕರವಾದ ತಿಂಡಿಯ ಆಯ್ಕೆಯನ್ನಾಗಿಯೂ ಮಾಡುತ್ತದೆ. ತುಪ್ಪದಲ್ಲಿ ಹುರಿದ ಮಖಾನಾವನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿರಬಹುದು, ಈಗ ತುಪ್ಪದಲ್ಲಿ ಮಖಾನಾವನ್ನು ಹೇಗೆ ಹುರಿಯಬೇಕು ಎಂಬುದನ್ನು ತಿಳಿದುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: