ಮದುವೆಯ ನಂತರ ಒಡಹುಟ್ಟಿದವರ ಸಂಬಂಧದಲ್ಲಿ ಅಂತರ ಏಕೆ ಹೆಚ್ಚಾಗುತ್ತದೆ ಗೊತ್ತಾ?

ಒಡಹುಟ್ಟಿದವರ ಸಂಬಂಧ ಅನ್ನೋದು ಬೆಲೆ ಕಟ್ಟಲಾಗದ ಬಂಧವಾಗಿದೆ. ಆದರೆ ಸಹೋದರ ಅಥವಾ ಸಹೋದರಿ ಮದುವೆಯಾದ ಬಳಿಕ ಈ ಸಂಬಂಧದಲ್ಲಿ ಕ್ರಮೇಣ ಬದಲಾವಣೆಗಳಾಗುತ್ತಾ ಹೋಗುತ್ತವೆ. ಮೊದಲಿದ್ದ ಬಾಂಧವ್ಯ ಕಮ್ಮಿಯಾಗಿ ಒಡ ಹುಟ್ಟಿದವರ ನಡುವೆ ಅಂತರ ಮೂಡುತ್ತಾ ಹೋಗುತ್ತದೆ. ಅಷ್ಟಕ್ಕೂ ಮದುವೆಯಾದ ಬಳಿಕ ಒಡ ಹುಟ್ಟಿದವರ ನಡುವೆ ಅಂತರ ಏಕೆ ಹೆಚ್ಚಾಗುತ್ತದೆ ಗೊತ್ತಾ? ಅದರ ಹಿಂದಿನ ಕಾರಣವನ್ನು ತಿಳಿಯಿರಿ.

ಮದುವೆಯ ನಂತರ ಒಡಹುಟ್ಟಿದವರ ಸಂಬಂಧದಲ್ಲಿ ಅಂತರ ಏಕೆ ಹೆಚ್ಚಾಗುತ್ತದೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 28, 2025 | 3:07 PM

ಒಡಹುಟ್ಟಿದವರ (Siblings) ಸಂಬಂಧ ಎಲ್ಲ ಸಂಬಂಧಕ್ಕಿಂತ ಮೀರಿದ ಬಂಧವಾಗಿದೆ. ಬಾಲ್ಯದಿಂದಲೇ ಒಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಸ್ನೇಹ, ಸಣ್ಣಪುಟ್ಟ ಜಗಳ ನಡೆಯುತ್ತಲೇ ಇರುತ್ತವೆ. ಎಷ್ಟೇ ಜಗಳಗಳು ನಡೆದರೂ  ಜೊತೆಯಾಗಿಯೇ ಇರುತ್ತಾರೆ. ಆದರೆ ಒಂದು ಹಂತದ ಬಳಿಕ ಅಂದರೆ ಮದುವೆಯಾದ ಬಳಿಕ ಈ ಸಂಬಂಧದಲ್ಲಿ ಅಂತರ (gap between siblings) ಮೂಡಲು ಆರಂಭಿಸುತ್ತದೆ. ಹೌದು ಮದುವೆಯ ಬಳಿಕ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರ, ಸಹೋದರಿಯರ ನಡುವೆ ಒಂದಷ್ಟು ಅಂತರಗಳು ಮೂಡುತ್ತವೆ, ಆತ್ಮೀಯತೆ ಕಡಿಮೆಯಾಗುತ್ತದೆ. ಇಂತಹ ಸುಂದರ ಸಂಬಂಧದಲ್ಲಿ ಮದುವೆಯ ನಂತರ ಏಕೆ ಅಂತರ ಎನ್ನುವಂತಹದ್ದು ಹೆಚ್ಚಾಗುತ್ತದೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?

ಹೊಸ ಜವಾಬ್ದಾರಿಗಳು ಮತ್ತು ಬದಲಾಗುವ ಆದ್ಯತೆ: ಮದುವೆಯ ನಂತರ, ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಂಗಾತಿ, ಅತ್ತೆ, ಮಾವ, ಮಕ್ಕಳು ಮತ್ತು ಮನೆಯನ್ನು ನೋಡಿಕೊಳ್ಳುವುದು ಹೀಗೆ ಆದ್ಯತೆ, ಜವಾಬ್ದಾರಿಗಳು ಹೆಚ್ಚಾಗುತ್ತದೆ, ಆದ್ಯತೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆಗ ಒಡಹುಟ್ಟಿದವರೊಂದಿಗೆ ಮಾತನಾಡಲು ಅಷ್ಟಾಗಿ ಸಮಯವಿರುವುದಿಲ್ಲ. ಗಂಡ, ಅತ್ತೆ-ಮಾವ, ಮಕ್ಕಳು, ಹೆಂಡತಿ ಮಕ್ಕಳು ಅಂತೆಲ್ಲಾ ಜವಾಬ್ದಾರಿಗಳು ಹೆಚ್ಚಾದಾಗ ಒಡಹುಟ್ಟಿದವರೊಂದಿಗೆ ಮಾತನಾಡಲು ಸಮಯ ಸಿಗುವುದಿಲ್ಲ. ಇದರಿಂದ ಅಂತರ ಮೂಡುತ್ತದೆ.

ದೂರ ದೂರ ಇರುವುದು: ಮದುವೆಯ ನಂತರ , ಸಹೋದರ ಸಹೋದರಿಯರು ಬೇರೆ ಬೇರೆ ಮನೆಗಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಬೇರೆ ಬೇರೆ ದೂರದೂರುಗಳಲ್ಲಿಯೂ ಕೂಡ ಇರುತ್ತಾರೆ. ಹೀಗೆ ದೂರ ದೂರ ವಾಸಿಸುವುದರಿಂದ ಹಾಗೂ ಕೆಲಸ, ಮನೆ ಜವಾಬ್ದಾರಿ ಅಂತೆಲ್ಲಾ ಇರುವಾಗ ಒಡಹುಟ್ಟಿದವರ ನಡುವೆ ಸಂವಹನ ಕ್ರಮೇಣ ಕಡಿಮೆಯಾಗುತ್ತದೆ. ಇದರಿಂದ ಒಡಹುಟ್ಟಿದವರ ನಡುವೆ ಅಂತರ ಮೂಡುತ್ತದೆ.

ಇದನ್ನೂ ಓದಿ
ಹೀಗೆ ಮಾಡಿದರೆ ಕೋಪವೆಲ್ಲ ಕ್ಷಣದಲ್ಲಿ ಮಾಯವಾಗುತ್ತೆ ನೋಡಿ
ಗಂಡ ಹೆಂಡತಿ ಹೀಗಿದ್ದರೆ ಸಂಸಾರ ಹಾಲು ಜೇನಿನಂತೆ ಇರುವುದು
ನಿಮ್ಗೊತ್ತಾ ಅಳುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ
ಹಣವೂ ಅಲ್ಲ ಖ್ಯಾತಿಯೂ ಅಲ್ಲ; ಸುಖ ಜೀವನಕ್ಕೆ ಕೀಲಿಕೈ ಇದೊಂದೆಯಂತೆ

ಜೀವನಶೈಲಿ ಮತ್ತು ಚಿಂತನೆಯಲ್ಲಿ ಬದಲಾವಣೆ: ಮದುವೆಯ ನಂತರ ಪ್ರತಿಯೊಬ್ಬರ ಜೀವನಶೈಲಿ ಮತ್ತು ಚಿಂತನೆ ಬದಲಾಗುತ್ತದೆ. ಜನರು ತಮ್ಮ ಸಂಗಾತಿಗೆ ಅನುಗುಣವಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮದೇ ಒಂದು ಹೊಸ ಕುಟುಂಬ ರೂಪುಗೊಂಡಿರುತ್ತದೆ. ಇವೆಲ್ಲದರ ಕಾರಣದಿಂದ  ಒಡಹುಟ್ಟಿದವರೊಂದಿಗೆ ಅಷ್ಟಾಗಿ ಮಾತನಾಡುವುದುದಿಲ್ಲ, ಅಪರೂಪಕ್ಕೆ ಭೇಟಿ, ಈ ಅಂಶವೂ ಒಡಹುಟ್ಟಿದವರ ನಡುವೆ ಅಂತರ ಸೃಷ್ಟಿಸುತ್ತದೆ.

ಸಂವಹನದ ಕೊರತೆ: ಮದುವೆಗೆ ಮೊದಲು ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ನೀಡುವ ಸಮಯವನ್ನು, ಮದುವೆಯ ನಂತರ ಪರಸ್ಪರ ಅಷ್ಟು ನೀಡಲು ಸಾಧ್ಯವಾಗುವುದಿಲ್ಲ. ಬದಲಾಗುವ ಆದ್ಯತೆಗಳು ಮತ್ತು ವೈವಾಹಿಕ ಜೀವನದಲ್ಲಿ ಜವಾಬ್ದಾರಿಯಿಂದ ಸಹೋದರ ಸಹೋದರಿಯರು ಪರಸ್ಪರ ಹೆಚ್ಚು ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಇದು ಕೂಡಾ ಅಂತಹ ಹೆಚ್ಚಾಗಲು ಕಾರಣ.

ಇದನ್ನೂ ಓದಿ: ಗಂಡ ಹೆಂಡತಿ ಹೀಗಿದ್ದರೆ ಸಂಸಾರ ಹಾಲು ಜೇನಿನಂತೆ ಇರುವುದು

ಒಡಹುಟ್ಟಿದವರ ಸಂಬಂಧದಲ್ಲಿ ಆತ್ಮೀಯತೆಯನ್ನು ಮರಳಿ ತರುವುದು ಹೇಗೆ?

ಮಾತನಾಡಲು ಸಮಯ ಮಾಡಿಕೊಳ್ಳಿ: ವಾರಕ್ಕೊಮ್ಮೆ ಕರೆ ಅಥವಾ ವೀಡಿಯೊ ಕಾಲ್‌ ಮಾಡುವ ಮೂಲಕ ಪರಸ್ಪರ ಮಾತನಾಡಿ. ಕಷ್ಟಸುಖ ಹಂಚಿಕೊಳ್ಳಿ. ಇದರಿಂದ ಸಂಬಂಧ ಬಲಗೊಳ್ಳುತ್ತದೆ.

ಭೇಟಿಯಾಗಿ: ಕೆಲಸ ಕಾರ್ಯಗಳ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಹುಟ್ಟುಹಬ್ಬ, ಇನ್ನಿತರ ಕುಟುಂಬ ಕಾರ್ಯಕ್ರಮಗಳಲ್ಲಿ ಭೇಟಿಯಾಗುವ ಮೂಲಕ ನೋವು ನಲಿವುಗಳ ವಿಚಾರಗಳನ್ನು ಹಂಚಿಕೊಳ್ಳಿ. ಹೀಗೆ ಕಾಲಕಾಲಕ್ಕೆ ಭೇಟಿಯಾಗುವ ಮೂಲಕ ಸಂಬಂಧ ಬಲಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ