ಈ ಜಗತ್ತಿನಲ್ಲಿ ಯಾವ ದೇಶ ಅತಿ ಹೆಚ್ಚು ಕರೆಂಟ್ ಬಳಕೆ ಮಾಡೋದು ಗೊತ್ತಾ?

ವಿದ್ಯುತ್‌ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಹೌದು ಅದರಲ್ಲೂ ಇಂದಿನ ದಿನಗಳಲ್ಲಿ ವಿದ್ಯುತ್‌ ಇಲ್ಲದೆ ಯಾವ ಕೆಲಸ ಕೂಡಾ ನಡೆಯೋದಿಲ್ಲ. ಮಿಕ್ಸಿಯಲ್ಲಿ ಮಸಾಲೆಗಳನ್ನು ರುಬ್ಬುವುದು, ವಾಷಿಂಗ್‌ ಮಷಿನ್‌ನಲ್ಲಿ ಬಟ್ಟೆ ಒಗೆಯುವುವಂತಹ ಸಣ್ಣಪುಟ್ಟ ಕೆಲಸಗಳಿಂದ ಹಿಡದು ದೊಡ್ಡ ದೊಡ್ಡ ಕೆಲಸಗಳವರೆಗೂ ವಿದ್ಯುತ್‌ ಬೇಕೇ ಬೇಕು. ಹೀಗೆ ಪ್ರತಿಯೊಬ್ಬರೂ ವಿದ್ಯುತ್‌ ಬಳಕೆ ಮಾಡುತ್ತಾರೆ. ಆದ್ರೆ ಯಾವ ದೇಶ ಅತಿ ಹೆಚ್ಚು ಕರೆಂಟ್‌ ಬಳಕೆ ಮಾಡುತ್ತೆ ಎಂಬ ವಿಚಾರ ನಿಮ್ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಜಗತ್ತಿನಲ್ಲಿ ಯಾವ ದೇಶ ಅತಿ ಹೆಚ್ಚು ಕರೆಂಟ್ ಬಳಕೆ ಮಾಡೋದು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 22, 2025 | 4:52 PM

ವಿದ್ಯುತ್‌ (electricity) ಮಾನವರು ಕಂಡುಹಿಡಿದ ಶ್ರೇಷ್ಠ ಆವಿಷ್ಕಾರಗಳಲ್ಲಿ ಒಂದು ಎಂದರೆ ತಪ್ಪಗಲಾರದು. ಈಗಿನ ದಿನಗಳಲ್ಲಿ ವಿದ್ಯುತ್‌ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಹೇಳಬೇಕೆಂದರೆ ವಿದ್ಯುತ್‌ ಇಲ್ಲದೆ ದೊಡ್ಡ ದೊಡ್ಡ ಕಾರ್ಖಾನೆ, ಫ್ಯಾಕ್ಟರಿ, ಕಂಪನಿ ಕೆಲಸಗಳು ಮಾತ್ರವಲ್ಲದೆ ಮನೆ ಕೆಲಸಗಳು ಕೂಡಾ ನಡೆಯೋದಿಲ್ಲ. ಹೀಗೆ ನಿತ್ಯ ಜೀವನಕ್ಕೆ ಬಹು ಉಪಯುಕ್ತವಾದ ಕರೆಂಟನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುವುದು ಕೂಡಾ ಅಷ್ಟೇ ಮುಖ್ಯ. ಆದ್ರೆ  ಜಗತ್ತಿನ ಯಾವ ದೇಶದಲ್ಲಿ ಅತಿ ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತೆ (which country consume the most electricity) ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಅತಿ ಹೆಚ್ಚು ವಿದ್ಯುತ್‌ ಬಳಕೆ ಮಾಡುವ ದೇಶ ಯಾವುದು?

ಸ್ಟಟಿಸ್ಟಾ (Statista)ವರದಿಯ ಪ್ರಕಾರ, ಪ್ರಪಂಚವು ವಾರ್ಷಿಕವಾಗಿ 21,776 ಶತಕೋಟಿ ಕಿಲೋವ್ಯಾಟ್ ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಅತಿ ಹೆಚ್ಚು ವಿದ್ಯುತ್ ಬಳಸುತ್ತವೆ. ಪ್ರಪಂಚದಲ್ಲಿ ವಿದ್ಯುತ್ ಬೇಡಿಕೆ ಹಲವು ಕಾರಣಗಳಿಂದ ವೇಗವಾಗಿ ಹೆಚ್ಚುತ್ತಿದೆ. ವಾಣಿಜ್ಯ ಮತ್ತು ವಸತಿ ಸ್ಥಳಗಳ ವಿಸ್ತರಣೆ, ಹವಾನಿಯಂತ್ರಣಗಳು (ಎಸಿ) ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಬಳಕೆಯಲ್ಲಿ ಹೆಚ್ಚಳ ಮತ್ತು ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಬೇಡಿಕೆ ಹೀಗೆ ಹಲವು ಕಾರಣಗಳಿಂದಾಗಿ ವಿದ್ಯುತ್‌ ಬಳಕೆಯೂ ಹೆಚ್ಚುತ್ತಿದೆ.

ಜಾಗತಿಕವಾಗಿ ಚೀನಾ ಅತಿ ಹೆಚ್ಚು ವಿದ್ಯುತ್‌ ಬಳಕೆ ಮಾಡುವ ರಾಷ್ಟ್ರವಾಗಿದೆ. ಈ ದೇಶ 8,000 ಟೆರಾವ್ಯಾಟ್‌ ಗಂಟೆಗಳಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತದೆ. ಎರಡನೇ ಸ್ಥಾನದಲ್ಲಿ ಅಮೆರಿಕವಿದ್ದು, ಈ ದೇಶ ಸುಮಾರು 4,000 ಟೆರಾವ್ಯಾಟ್‌ ಗಂಟೆಗಳಿಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತದೆ. ಇನ್ನೂ ಮೂರನೇ ಸ್ಥಾನದಲ್ಲಿ ನಮ್ಮ ಭಾರತವಿದ್ದು, 1,392 ಟೆರಾವ್ಯಾನ್‌ ಗಂಟೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ
ಎಕ್ಸ್‌ಪೈರಿ ಡೇಟ್‌ ಇಲ್ಲದ ಆಹಾರಗಳಿವು
ಛತ್ರಿಗಳು ರೌಂಡ್‌ ಶೇಪ್‌ನಲ್ಲಿ ಮಾತ್ರ ಇರುವುದೇಕೆ ಗೊತ್ತಾ?
ಅಕ್ಕಿಯನ್ನು ತೊಳೆಯದೆ ಅನ್ನ ಮಾಡಿದ್ರೆ ಏನಾಗುತ್ತೆ ಗೊತ್ತಾ?
ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಇದನ್ನೂ ಓದಿ: ಛತ್ರಿಗಳು ರೌಂಡ್‌ ಶೇಪ್‌ನಲ್ಲಿ ಮಾತ್ರ ಇರುವುದೇಕೆ ಗೊತ್ತಾ?

ಅತಿ ಹೆಚ್ಚು ವಿದ್ಯುತ್ ಬಳಸುವ ದೇಶಗಳ ಪಟ್ಟಿ:

  1. ಚೀನಾ
  2. ಯುಎಸ್ಎ‌ (ಅಮೆರಿಕ)
  3. ಭಾರತ
  4. ರಷ್ಯಾ
  5. ಜಪಾನ್
  6. ಬ್ರೆಜಿಲ್
  7. ಕೆನಡಾ
  8. ದಕ್ಷಿಣ ಕೊರಿಯಾ
  9. ಜರ್ಮನಿ
  10. ಫ್ರಾನ್ಸ್
  11. ಸೌದಿ ಅರೇಬಿಯಾ
  12. ಇರಾನ್

 ಆಫ್ರಿಕಾದ ಚಾಡ್, ಸೊಮಾಲಿಯಾ, ಸಿಯೆರಾ ಲಿಯೋನ್ ಮತ್ತು ಮಧ್ಯ ಆಫ್ರಿಕಾದ ದೇಶಗಳು ಕಡಿಮೆ ವಿದ್ಯುತ್ ಬಳಸುವ ದೇಶಗಳಾಗಿವೆ. ಇನ್ನೊಂದು ಏನೆಂದರೆ ಈ ದೇಶಗಳಲ್ಲಿ ಅನೇಕ ಪ್ರದೇಶಗಳಿಗೆ  ವಿದ್ಯುತ್ ಸಂಪರ್ಕವೇ ಇಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ