ಛತ್ರಿಗಳು ರೌಂಡ್ ಶೇಪ್‌ನಲ್ಲಿ ಮಾತ್ರ ಇರುವುದೇಕೆ ಗೊತ್ತಾ?
ಮಳೆಗಾಲ ಅಂದಾಗ ಮೊದಲು ನೆನಪಿಗೆ ಬರೋದೇ ಛತ್ರಿ. ಈಗಂತೂ ನೀವು ಕೂಡಾ ದಿನನಿತ್ಯ ಛತ್ರಿ ಇಡ್ಕೊಂಡು ಓಡಾಡುತ್ತಿರುತ್ತೀರಿ ಅಲ್ವಾ. ಆದ್ರೆ ನೀವು ಯಾವತ್ತಾದ್ರೂ ಈ ಕೊಡೆಗಳು ಏಕೆ ರೌಂಡ್ ಶೇಪ್‌ನಲ್ಲಿ ಮಾತ್ರ ಇರುತ್ತವೆ? ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿರುವಂತೆ ಕೊಡೆಗಳು ಬೇರೆ ಬೇರೆ ಆಕಾರಗಳಲ್ಲಿ ಏಕೆ ಲಭ್ಯವಿಲ್ಲ ಎಂಬುದರ ಬಗ್ಗೆ ಯೋಚಿಸಿದ್ದೀರಾ? ಅಷ್ಟಕ್ಕೂ ಈ ಕೊಡೆಗಳನ್ನು ರೌಂಡ್ ಶೇಪ್‌ನಲ್ಲಿಯೇ ಏಕೆ ತಯಾರಿಸಲಾಗುತ್ತೆ ಎಂಬುದನ್ನು ನೋಡಿ.

ಮಳೆ, ಬಿಸಿಲಿನಿಂದ ನಮ್ಮನ್ನು ರಕ್ಷಿಸುವಲ್ಲಿ ಛತ್ರಿ ಅಥವಾ ಕೊಡೆ (umbrellas) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಇದು ಅತೀ ಅವಶ್ಯಕವಾಗಿರುವ ವಸ್ತು ಅಂತಾನೇ ಹೇಳಬಹುದು. ಜನರನ್ನು ಆಕರ್ಷಿಸುವ ಸಲುವಾಗಿ ಈ ಕೊಡೆಗಳನ್ನು ಬೇರೆ ಬೇರೆ ಬಣ್ಣ, ಗಾತ್ರ, ಡಿಸೈನ್‌ಗಳಲ್ಲಿ ತಯಾರಿಸಲಾಗುತ್ತದೆ ಆದ್ರೆ ಇವುಗಳ ಶೇಪ್ ಮಾತ್ರ ಯಾವಾಗಲೂ ಒಂದೇ ರೀತಿ ಇರುತ್ತದೆ. ಅಷ್ಟಕ್ಕೂ ಎಲ್ಲಾ ಕೊಡೆಗಳನ್ನು ರೌಂಡ್ ಶೇಪ್‌ನಲ್ಲಿಯೇ (why umbrellas are only in round shape) ಏಕೆ ತಯಾರಿಸಲಾಗುತ್ತದೆ? ಚೌಕ ಇತ್ಯಾದಿ ಶೇಪ್‌ಗಳಲ್ಲಿ ಯಾಕಿರಲ್ಲ ಎಂಬುದರ ಇಂಟರೆಸ್ಟಿಂಗ್ ಸಂಗತಿಯನ್ನು ತಿಳಿಯಿರಿ.
ಛತ್ರಿಗಳು ಏಕೆ ರೌಂಡ್ ಶೇಪ್‌ನಲ್ಲಿ ಇರುತ್ತವೆ:
ಸಾಮಾನ್ಯವಾಗಿ ಬಣ್ಣ, ಡಿಸೈನ್, ಗಾತ್ರ ಬೇರೆ ಬೇರೆ ಇದ್ದರೂ ಕೂಡಾ ಛತ್ರಿಗಳ ಆಕಾರ ದುಂಡಾಗಿಯೇ ಇರುತ್ತದೆ. ಚೌಕಾಕಾರ ಅಥವಾ ಇತರೆ ಯಾವುದೇ ಆಕಾರದಲ್ಲಿಯೂ ಛತ್ರಿಗಳು ಕಾಣಸಿಗುವುದಿಲ್ಲ. ಹೀಗೆ ದುಂಡಾಕಾರದ ಹೊರತಾಗಿ ಕೊಡೆಗಳನ್ನು ಬೇರೆ ಆಕಾರದಲ್ಲಿ ಏಕೆ ತಯಾರಿಸಲಾಗುವುದಿಲ್ಲ ಗೊತ್ತಾ?
ಇದರ ಹಿಂದೆ ಹಲವು ಕಾರಣಗಳಿವೆಯಂತೆ. ಮೊದಲನೆಯದಾಗಿ, ಚೌಕಾಕಾರ ಅಥವಾ ಇತರೆ ಆಕಾರದ ಛತ್ರಿ ದುಂಡಗಿನ ಛತ್ರಿಯಷ್ಟು ರಕ್ಷಣೆ ನೀಡುವುದಿಲ್ಲ. ದುಂಡಗಿನ ಛತ್ರಿಯ ಬದಲು ಚೌಕಾಕಾರದ ಛತ್ರಿ ಮಾಡುವ ಬಗ್ಗೆ ಯಾರೂ ಯೋಚಿಸಿಲ್ಲ ಎಂದಲ್ಲ, ಆದರೆ ಚೌಕಾಕಾರದ ಛತ್ರಿಯು ದುಂಡಗಿನ ಛತ್ರಿಯಷ್ಟು ರಕ್ಷಣೆ ನೀಡುವುದಿಲ್ಲ. ಹೌದು ರೌಂಡ್ ಶೇಪ್‌ನಲ್ಲಿರುವ ಛತ್ರಿಗಳು ಎಲ್ಲಾ ಕಡೆಯಿಂದಲೂ ಮಳೆ ನೀರು ನಮ್ಮ ಮೇಲೆ ಬೀಳದಂತೆ ತಡೆಯುತ್ತದೆ. ಇದು ಕೊಡೆಯ ಮೇಲೆ ಬೀಳುವ ನೀರನ್ನು ಸಮವಾಗಿ ಹರಿಯಲು ಅನುವು ಮಾಡಿಕೊಡುತ್ತದೆ. ಮತ್ತು ದುಂಡಗಿನ ಛತ್ರಿಗಳ ವಿನ್ಯಾಸ ವಿಶಿಷ್ಟವಾಗಿದ್ದು, ಇದು ಮಳೆ, ಗಾಳಿ ಯಾವುದೇ ಕಡೆಯಿಂದ ಬೀಸಿದರೂ ಅದು ಸಮತೋಲಿತ ರಕ್ಷಣೆಯನ್ನು ನೀಡುತ್ತದೆ. ಅಂದರೆ ಈ ಆಕಾರದ ಕೊಡೆಗಳ ಮೇಲ್ಮೈ ಗಾಳಿ ಮತ್ತು ನೀರಿನ ಒತ್ತಡವನ್ನು ಸಮಾನವಾಗಿ ವಿತರಿಸುತ್ತದೆ. ಆದ್ರೆ ಚೌಕಾಕಾರದ ಕೊಡೆಯಿದ್ದರೆ, ಛತ್ರಿ ಹಿಡಿದ್ರೂ ಮಳೆ ನೀರು ನಮ್ಮ ಮೇಲೆಯೇ ಬೀಳುವ ಸಾಧ್ಯತೆ ಇರುತ್ತದೆ. ಜೊತೆಗೆ ಚೌಕಾಕಾರವಾಗಿರುವುದರಿಂದ, ಅದು ಕೊಡೆಯ ಎಲ್ಲಾ ಕಡೆಯಿಂದಲೂ ನೀರನ್ನು ಸಮಾನವಾಗಿ ಹಾದು ಹೋಗುವಂತೆ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು; ಯಾಕೆ ಗೊತ್ತಾ?
ಅಲ್ಲದೆ ಛತ್ರಿ ಚೌಕಾಕಾರದಲ್ಲಿದ್ದಾಗ, ಅದರ ನಿರ್ವಹಣೆಯಲ್ಲಿಯೂ ತೊಂದರೆ ಉಂಟಾಗುತ್ತದೆ. ಜೊತೆಗೆ ಇದು ಗಾಳಿಯ ಒತ್ತಡಕ್ಕೆ ಮಡಚಲ್ಪಡುವ ಸಾಧ್ಯತೆಯೂ ಇರುತ್ತದೆ. ಈ ಕಾರಣಕ್ಕಾಗಿ ಛತ್ರಿಗಳನ್ನು ದುಂಡಾಕಾರದಲ್ಲಿಯೇ ತಯಾರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ