ಇತ್ತೀಚೆಗೆ ಬಿಡುವಿಲ್ಲದ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಆರೋಗ್ಯದ ಬಗ್ಗೆ ಸ್ವಲ್ಪ ಅಜಾಗರೂಕತೆ ತೊರಿದರು ಅದು ನಮ್ಮನ್ನು ರೋಗದ ಕಡೆಗೆ ನೂಕುತ್ತದೆ. ಅದರಲ್ಲೂ ಈಗ ಕೊರೊನಾ ಮೂರನೇ ಅಲೆಯ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ತಡೆಯಲು ರೋಗನಿರೋಧಕ ಶಕ್ತಿಯನ್ನು ಬಲವಾಗಿಡುವುದು ಬಹಳ ಮುಖ್ಯ. ಇದಕ್ಕಾಗಿ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಕೆಲವೊಂದಿಷ್ಟು ಗಿಡಮೂಲಿಕೆಗಳನ್ನು ಸೇರಿಸುವುದು ಸೂಕ್ತ. ಇದು ದೇಹದ ಕಾಳಜಿ ವಹಿಸುತ್ತದೆ.
ಈ ಗಿಡಮೂಲಿಕೆಗಳು ಪೋಷಕಾಂಶಗಳನ್ನು ಹೊಂದಿದ್ದು, ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ಗಿಡಮೂಲಿಕೆಗಳು ಮಧುಮೇಹ, ಹೃದ್ರೋಗ ಮತ್ತು ಇನ್ನಿತರ ಕಾಯಿಲೆಗಳನ್ನು ಸುಧಾರಿಸಲು ಅಥವಾ ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ. ಅವುಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಏಪ್ರಿಕಾಟ್
ಏಪ್ರಿಕಾಟ್ ಅಥವಾ ಜರ್ದಾಳು ವಿಟಮಿನ್ ಮತ್ತು ಖನಿಜಗಳ ಮುಖ್ಯ ಮೂಲವಾಗಿದ್ದು, ಇದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿದೆ. ಈ ಹಣ್ಣಿನಲ್ಲಿರುವ ಪೌಷ್ಠಿಕಾಂಶದ ಅಂಶವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದ್ರೋಗದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಕಣ್ಣುಗಳಿಗೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಕೂಡ ಒಳ್ಳೆಯದು. ಇದು ಫೈಬರ್ ಅನ್ನು ಹೊಂದಿರುತ್ತದೆ. ಏಪ್ರಿಕಾಟ್ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಕಬ್ಬಿಣದ ಮುಖ್ಯ ಮೂಲವಾಗಿದ್ದು, ಇದು ರಕ್ತಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಅಮೃತಬಳ್ಳಿ
ಅಮೃತಬಳ್ಳಿ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ದೀರ್ಘಕಾಲದಿಂದ ಬಳಸಲಾಗುತ್ತಿದೆ. ಇದು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ಸ್ವತಂತ್ರ ರಾಡಿಕಲ್‌ಗಳ ಮೇಲೆ ದಾಳಿ ಮಾಡುತ್ತದೆ ಮತ್ತು ರೋಗಗಳಿಂದ ರಕ್ಷಿಸುತ್ತದೆ. ಅಮೃತಬಳ್ಳಿ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಮೂತ್ರದ ಸೋಂಕನ್ನು ಮತ್ತು ಯಕೃತ್ತಿನ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಅಮೃತಬಳ್ಳಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಇದಲ್ಲದೇ, ಅಮೃತಬಳ್ಳಿ ಜ್ಯೂಸ್ ಕುಡಿಯುವುದರಿಂದ ಅಧಿಕ ರಕ್ತದ ಸಕ್ಕರೆಯ ಸಮಸ್ಯೆ ನಿಯಂತ್ರಣದಲ್ಲಿರುತ್ತದೆ ಮತ್ತು ಉಸಿರಾಟದ ಸಮಸ್ಯೆಯಿಂದ ಮುಕ್ತವಾಗಬಹುದು. ಇದರ ಹೊರತಾಗಿ, ಇದು ಸಂಧಿವಾತದ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ.
ನೆಲ್ಲಿಕಾಯಿ
ನೆಲ್ಲಿಕಾಯಿ ಯಾವುದೇ ಸೂಪರ್ ಫುಡ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಇದ್ದು, ಇದು ಶೀತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನವು ನೆಲ್ಲಿಕಾಯಿಯಲ್ಲಿ ಕೆರಾಟಿನ್ ಇದ್ದು, ಇದನ್ನು ನಿಯಮಿತವಾಗಿ ತಿನ್ನುವುದರಿಂದ ದೃಷ್ಟಿ ಚುರುಕಾಗಿರುತ್ತದೆ. ಇದಲ್ಲದೇ, ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ನೆಲ್ಲಿಕಾಯಿ ಚಯಾಪಚಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಈ ಆಹಾರವು ಕೂದಲಿನ ಕಿರುಚೀಲಗಳನ್ನು ಬಲಪಡಿಸುವ ಮೂಲಕ ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ.
ಅಶ್ವಗಂಧಾ
ಅಶ್ವಗಂಧಾ ಒಂದು ತಿಳಿ ಬಣ್ಣದ ಮೂಲಿಕೆಯಾಗಿದ್ದು, ಅದು ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಶ್ವಗಂಧಾ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೆಲವು ಅಧ್ಯಯನಗಳು ಅಶ್ವಗಂಧಾ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ಕಂಡುಹಿಡಿದಿದೆ. ಏಕೆಂದರೆ ಇದು ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಇದಲ್ಲದೇ, ಇದು ಮೆದುಳಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆರಿಹಣ್ಣು
ಬೆರಿಹಣ್ಣುಗಳು ಪೌಷ್ಟಿಕ ಅಂಶಗಳಿಂದ ಕೂಡಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಬೆರಿಹಣ್ಣುಗಳಲ್ಲಿನ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಫೈಬರ್, ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣುಗಳು ಅತ್ಯಂತ ಪೌಷ್ಟಿಕಾಂಶಗಳಲ್ಲಿ ಒಂದಾಗಿದೆ. ಬೆರಿಹಣ್ಣುಗಳು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಅದು ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Pomegranate Juice: ಪ್ರತಿನಿತ್ಯ ಒಂದು ಗ್ಲಾಸ್ ದಾಳಿಂಬೆ ರಸವನ್ನು ಕುಡಿಯಿರಿ; ಆರೋಗ್ಯಕ್ಕೆ ಉತ್ತಮ
(Which herbs should eat regularly diet to fight back diseases)